ಬಟ್ಟೆ ತೊಳೆದ ಮೇಲೂ ರಕ್ತದ ಕಲೆ ಉಳಿಯುತ್ತದೆಯೇ ?
ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಎಂದು ಉಲ್ಲೇಖಿಸಿ ಬಳಿಕ ಶೂ ರಿಕವರಿ ಮಾಡಿರುವುದಾಗಿ ಹೇಳಿದ್ಧಾರೆ.
ನನ್ನ ಪ್ರಕಾರ ಕಳಪೆ ತನಿಖೆಯಾಗಿದೆ. ಮಾಧ್ಯಮಗಳು ಟ್ರಯಲ್ ನಡೆಸಿ ದೋಷಿ ಎಂದು ತೀರ್ಪು ನೀಡಿವೆ
ಮಾಧ್ಯಮಗಳ ಟ್ರಯಲ್ನಿಂದ ಜಾಮೀನು ನಿರ್ಧಾರವಾಗಲ್ಲ
ಬೆಂಗಳೂರು:
ಕಳೆದ ಒಂದು ತಿಂಗಳಿಂದ ಜೈಲಿನಲ್ಲಿರುವ ಕಾಟೇರನಿಗೆ ನಾಳೆ ದಿ 5 ರಂದು ಜೈಲಾ ಅಥವಾ ಬೇಲಾ ಎನ್ನುವುದು ನಿರ್ಧಾರವಾಗಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿತು. ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ನಾಳೆ ನಡೆಯಲಿದೆ.
ವಾದ ಮಂಡಿಸಲು ಕಾಲಾವಕಾಶ ಪಡೆದಿದ್ದ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಇಂದು 57ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಪ್ರಬಲ ವಾದ ಮಂಡಿಸಿದರು.

ರೇಣುಕಾಸ್ವಾಮಿ ಹತ್ಯೆ ಸ್ಥಳವನ್ನು ತೋರಿಸುವುದಾಗಿ ದರ್ಶನ್ ಹೇಳಿದರೂ ಪೊಲೀಸರು ಸ್ವಇಚ್ಛಾ ಹೇಳಿಕೆ ಪಡೆದ ಮಾರನೇ ದಿನ ಪಟ್ಟಣಗೆರೆ ಶೆಡ್ಗೆ ಕರೆದೊಯ್ದಿದ್ದಾರೆ. ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಹಾಕಿಕೊಂಡಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ರಿಕವರಿ ವೇಳೆ ಪೊಲೀಸರು ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ದರ್ಶನ್ ಶೂ ರಿಕವರಿ ಮಾಡಿಕೊಂಡಿದ್ದಾರೆ. ಹತ್ಯೆ ದಿನ ತಾನು ಧರಿಸಿದ ಬಟ್ಟೆ ತೋರಿಸುವುದಾಗಿ ಹೇಳಿದ್ದಾರೆಯೇ ಹೊರತು, ಯಾವ ಬಟ್ಟೆ ಎಂದು ಪೊಲೀಸರು ನಮೂದಿಸಿಲ್ಲ. ತಾವೇ ತೆರಳಿ ಟೀ ಶರ್ಟ್, ಜೀನ್ಸ್ ಹಾಗೂ ಶೂ ರಿಕವರಿ ಮಾಡಿದ್ದಾರೆ ಎಂದು ಪ್ರಬಲವಾಗಿ ವಾದ ಮಂಡಿಸಿದರು.
.