ನಂದಾ ಬಾಪುಗೌಡ ಪಾಟೀಲ ನಿಧನ

ಹುದಲಿ ಗ್ರಾಮದ ನಂದಾ ಬಾಪುಗೌಡಾ ಪಾಟೀಲ (೫೩) ಅವರು ಇಂದು ಶನಿವಾರ ಹೃದಯಘಾತದಿಂದ ನಿಧನರಾದರು. ಮೃತರು ಹುದಲಿ ಗ್ರಾಮದ ಖ್ಯಾತ ಗರದಿ ಗಮ್ಮತ್ ಸಾಮಾಜಿಕ ಜಾಲ ತಾಣದ ಪ್ರಧಾನ ಸಂಪಾದಕ ಬಾಪುಗೌಡಾ ಪಾಟೀಲ ಅವರ ಪತ್ನಿಯಾಗಿದ್ದರು. ಇವರ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ನಿವೃತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಮಹಾಂತೇಶ ಕವಟಗಿಮಠ ಇನ್ನುಳಿದವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ.

Read More

ಗಾಯತ್ರಿ ಭವನಕ್ಕೊಂದು ಸುಸಜ್ಜಿತ ಸಭಾಂಗಣ

ಗಾಯತ್ರಿ ಭವನಕ್ಕೊಂದು ಸುಸಜ್ಜಿತ ಸಭಾಂಗಣ ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿರುವ ಹೊ.ನಾ.ಹಿರಿಯಣ್ಣಸ್ವಾಮಿ ನೂತನ ಸಭಾ ಭವನ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು ಸುಸಜ್ಜಿತವಾಗಿದೆ. ಇದರ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ ಸಿಎಸ್ ಆರ್ ನಿಧಿಯಿಂದ10ಲಕ್ಷ ನೆರವು ನೀಡಿದ್ದು,ಮಹಾ ಸಭಾದಿಂದಅಂದಾಜು 65 ರಿಂದ 70ಸಾವಿರ ರೂ.ಗಳನ್ನುಖರ್ಚು ಮಾಡಲಾಗಿದೆ. ಮೂರು,ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವುದು ಹೆಗ್ಗಳಿಕೆ.ಮುಂದಿನ ದಿನಗಳಲ್ಲಿ ಈ ಸಭಾಂಗಣಕ್ಕೆ ಸುಸಜ್ಜಿತ ಪೀಠೋಪಕರಣಗಳನ್ನು ಅಳವಡಿಸಲಿದ್ದು ಸಾರ್ವಜನಿಕ ಬಳಕೆಗೂ ನೀಡುವ ಉದ್ದೇಶ ಇದೆ ಎನ್ನುತ್ತಾರೆ…

Read More

ಧ್ವನಿಯಿಲ್ಲದವರಿಗೆ ಧ್ವನಿಯಾದ ರಾಹುಲ್‌

ಧ್ವನಿಯಿಲ್ಲದವರಿಗೆ ಧ್ವನಿಯಾದ ರಾಹುಲ್‌ ಜಾರಕಿಹೊಳಿ: ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಕೆಪಿಟಿಸಿಎಲ್‌ ಸಭಾಂಗಣದಲ್ಲಿ ರಾಹುಲ್‌ ಜಾರಕಿಹೊಳಿ 25ನೇ ಜನ್ಮದಿನಾಚರಣೆ- ಸಕಲ ಶ್ರೀಗಳು ಸತ್ಕರಿಸಿ, ಆಶೀರ್ವಾದ ಪಡೆದ ರಾಹುಲ್‌ ಜಾರಕಿಹೊಳಿ ಬೆಳಗಾವಿ: ಜೀವನದಲ್ಲಿ ಸರಳತೆ ಮೈಗೂಡಿಸಿಕೊಂಡು, ಚಿಕ್ಕ ವಯಸ್ಸಿನಲ್ಲಿಯೇ ಯುವಕರು, ದೀನ, ದಲಿತರು ಸೇರಿದಂತೆ ಧ್ವನಿ ಇಲ್ಲದವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್‌ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅವರು ಹೇಳಿದರು. ನಗರದ ಕೆಪಿಟಿಸಿಎಲ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಹುಲ್‌ ಜಾರಕಿಹೊಳಿಯವರ 25ನೇ…

Read More

15 ಕ್ಕೆ ಸಿದ್ದು ರಾಜೀನಾಮೆ

ನವದೆಹಲಿ. ಉನ್ನತ ಮೂಲಗಳ ಪ್ರಕಾರ ಮೂಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬರುವ 15 ಕ್ಕೆ ರಾಜೀನಾಮೆ ನೀಡುವುದು ಬಹುತೇಕ ಪಕ್ಕಾ ಆಗಿದೆ. ಈ ಕುರಿತಂತೆ ಹೈಕಮಾಂಡದಿಂದ ಸ್ಪಷ್ಟ ಸಂದೇಶ ಕೂಡ ರವಾನೆಯಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಉತ್ತರಾಧಿಕಾರಿಯಾಗಿ ಸಿದ್ದರಾಮಯ್ಯ ಅವರ ಪರಮಾಪ್ತ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗುವುದು ಬಹುತೇಕ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದನ್ನು…

Read More
error: Content is protected !!