ಗಾಯತ್ರಿ ಭವನಕ್ಕೊಂದು ಸುಸಜ್ಜಿತ ಸಭಾಂಗಣ
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿರುವ ಹೊ.ನಾ.ಹಿರಿಯಣ್ಣಸ್ವಾಮಿ ನೂತನ ಸಭಾ ಭವನ ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು ಸುಸಜ್ಜಿತವಾಗಿದೆ. ಇದರ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ ಸಿಎಸ್ ಆರ್ ನಿಧಿಯಿಂದ10ಲಕ್ಷ ನೆರವು ನೀಡಿದ್ದು,
ಮಹಾ ಸಭಾದಿಂದಅಂದಾಜು 65 ರಿಂದ 70ಸಾವಿರ ರೂ.ಗಳನ್ನುಖರ್ಚು ಮಾಡಲಾಗಿದೆ. ಮೂರು,ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವುದು ಹೆಗ್ಗಳಿಕೆ.
ಮುಂದಿನ ದಿನಗಳಲ್ಲಿ ಈ ಸಭಾಂಗಣಕ್ಕೆ ಸುಸಜ್ಜಿತ ಪೀಠೋಪಕರಣಗಳನ್ನು ಅಳವಡಿಸಲಿದ್ದು ಸಾರ್ವಜನಿಕ ಬಳಕೆಗೂ ನೀಡುವ ಉದ್ದೇಶ ಇದೆ ಎನ್ನುತ್ತಾರೆ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಶ್ರೀಧರಮೂರ್ತಿ.

ನಾಡಿನ ಹೆಸರಾಂತ ಕಾನೂನು ತಜ್ಞ ಅಶೋಕ್ ಹಾರನಹಳ್ಳಿಯವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾದ ನಂತರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮಹಾ ಸಭಾದ ಚಟುವಟಿಕೆ ಹಳ್ಳಿಗಳಿಗೂ ವಿಸ್ತರಿಸುವ ಮೂಲಕ ರಾಜ್ಯದಾದ್ಯಂತ,ಸಂಘಟನೆ ಚುರುಕುಗೊಂಡಿದೆ.

ಬೆಂಗಳೂರು ನಗರಕ್ಕೆ ಹೆಚ್ಚು ಪಾಲು ಸೀಮಿತವಾಗಿದ್ದ ಮಹಾ ಸಭಾ ಚಟುವಟಿಕೆಗಳಿಗೆ ಹೊಸ ರೂಪ ನೀಡಿದ್ದಲ್ಲದೇ ಎಲ್ಲ ಸಮುದಾಯಗಳ ಗಮನ ಸೆಳೆಯುವಂತಾಗಿದೆ. ಮಹಾ ಸಭಾದ ವತಿಯಿಂದ ನಡೆಯುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಸಮುದಾಯದ ಜನರಿಗೆ ರಿಯಾಯ್ತಿ ದರದಲ್ಲಿ ಆರೋಗ್ಯ ತಪಾಸಣೆಯಂತಹ ಹಲವು ಸಮಾಜೋಪಯೋಗಿ ಕಾರ್ಯಗಳು ಮಹಾ ಸಭಾದಿಂದ ನಡೆಯುತ್ತಿದೆ. ನೂತನ ಸಭಾ ಭವನ ನಿರ್ಮಾಣ ಅದಕ್ಕೊಂದು ಹೊಸ ಸೇರ್ಪಡೆ.
ದಿ. ಹೊ.ನಾ.ಹಿರಿಯಣ್ಣ ಸ್ವಾಮಿ:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಸಂಸ್ಥಾಪನೆಯಿಂದ ಪ್ರಾರಂಭವಾಗಿ ಸಮುದಾಯದ ಸಂಘಟನೆಗಾಗಿ ಹಲವು ದಶಕಗಳ ಕಾಲ ಶ್ರಮಿಸಿದ ಹೊ.ನಾ. ಹಿರಿಯಣ್ಣ ಸ್ವಾಮಿ ಯವರ ಸೇವೆಯನ್ನು ಶಾಶ್ವತವಾಗಿ ನೆನಪಿಸುವ ಉದ್ದೇಶದಿಂದ ಮತ್ತು ಗೌರವಿಸುವ ದೃಷ್ಟಿಯಿಂದ ನೂತನ ಸಭಾ ಭವನಕ್ಕೆ ಅವರ ಹೆಸರನ್ನು ಇಡಲಾಗಿದೆ. 80ರ ದಶಕದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆಗಿ ಸೇವೆ ಸಲ್ಲಿಸಿದ್ದ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿಯೂ ಗುರುತಿಸಿಕೊಂಡಿದ್ದರು. ಮಾಜಿ ಮುಖ್ಯ ಮಂತ್ರಿ ದಿ. ಆರ್.ಗುಂಡೂರಾವ್ ಅವರ ಆಪ್ತವಲಯಕ್ಕೆ ಸೇರಿದ್ದ ಹಿರಿಯಣ್ಣಸ್ವಾಮಿ ರಾಜ್ಯ ಕಂಡ ಹಿರಿಯ ದಾರ್ಶನಿಕ ಮಾಜಿ ಸಚಿವ ಹಾಗೂ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿದ್ದ ದಿ. ಹಾರನಹಳ್ಳಿ ರಾಮಸ್ವಾಮಿಯವರ ಜತೆ ಸೇರಿ ಹಲವು ಸಮಾಜೋಪಯೋಗಿ ಕಾರ್ಯಗಳಲ್ಲಿ ಪಾಲ್ಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.