Headlines

ಸಿಎಂ ಬೆನ್ನಟ್ಟಿದ ಆ ಹದ್ದಿನ‌ ಕಣ್ಣು ಯಾವುದು?

Oplus_0

ಯಲ್ಲಮ್ಮದೇವಿ ಸನ್ನಿದಿಗೆ ಸಿಎಂ

ಸಿದ್ಧರಾಮಯ್ಯ. ಆಪ್ತರೊಂದಿಗೂ ಬಿಚ್ಚು ಮನಸ್ಸಿನಿಂದ ಮಾತಾಡಲಾಗದ ಸ್ಥಿತಿ.

ಸಿಎಂ ಬೆನ್ನಟ್ಟಿದ ಆ ಹದ್ದಿನ ಕಣ್ಣು ಯಾವುದು?

ಮೈಸೂರಿನಿಂದ ಬೆಳಗಾವಿವರೆಗೆ ಸಾಥ್. ಹೈಕಮಾಂಡ ಲೆಕ್ಕಹಾಕಿದ ಶಾಸಕರ ಲೆಕ್ಕ.

ಬೆಳಗಾವಿ.

ಮೂಡಾ ಹಗೆಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಒಂದು ರೀತಿಯು ಮುಜುಗುರ ಸ್ಥಿತಿ.

ಕಳೆದ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಭ್ರಷ್ಟಾಚಾರ ದ ಆರೋಪ ಅವರ ಮೇಲೆ ಇರಲಿಲ್ಲ. ಆದರೆ ಈಗ ಮೂಡಾ ಸೈಟ ಹಗರಣ ಅವರನ್ನು ಹೆಗಲೇರಿದೆ. ಇದನ್ನು ಬಿಡಿ. ರಾಜಕಾರಣ ಅಂದ ಮೇಲೆ ಆರೋಪ, ಪ್ರತ್ಯಾರೋಪ ಸಹಜ. ಅದನ್ನು ಎದುರಿಸಲೇ ಬೇಕು. ಆ ಕೆಲಸವನ್ನು ಮಾಡುತ್ತಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ, ಈಗ ಲೋಕಾಯುಕ್ತ ತನಿಖೆ ಮತ್ತಷ್ಟು ಚುರುಕಾಗಲಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ ನಾಳೆ ದಿ.‌15 ರಂದೇ ಸಿಎಂ ಮತ್ತು ಅವರ ಪತ್ನಿಗೆ ನೋಟೀಸ್ ಕೊಡುವ ಸಾಧ್ಯತೆಗಳಿವೆ.

Oplus_0

ಸಿಎಂ ಬದಲಾದರೆ..!

ಇಲ್ಲಿ ಮುಖ್ಯಮಂತ್ರಿ ಗಳ ಬದಲಾವಣೆ ಆಗುತ್ತೊ ಇಲ್ಲವೋ ಎನ್ನುವುದು ಹೈಕಮಾಂಡಗೆ ಮಾತ್ರ ಗೊತ್ತು. ಆದರೆ ಇಡಿ ಮತ್ತು ಲೋಕಾಯುಕ್ತ ಇಕ್ಕಳ ಮತ್ತಷ್ಟು ಬಿಗಿಯಾದರೆ ಸಹಜವಾಗಿ ಸಿದ್ಧರಾಮಯ್ಯ ರಾಜೀನಾಮೆ ಕೊಡುವ ಪ್ರಸಂಗ ಬರಬಹುದು.

ಆದರೆ ಅವರ ಉತ್ತರಾಧಿಕಾರ ಆಯ್ಕೆ ಹೊಣೆ ಸಹಜವಾಗಿ ಸಿದ್ಧರಾಮಯ್ಯ ಹೆಗಲಿಗೆ ಬರುವುದು ನೂರಕ್ಕೆ ನೂಋಷ್ಟು ಸತ್ಯ.

ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಲೋಕಾಯುಕ್ತ ವಿಚಾರಣೆ ತೀವೃಗೊಂಡು ಪಕ್ಷಕ್ಕೆ ಮಜುಗುರ ಬರುವಂತಹ ಸನ್ನಿವೇಶ ಸೃಷ್ಟಿಯಾದರೆ ಉತ್ತರಾಧಿಕಾರ ಆಯ್ಕೆಯ ಹೊಣೆಯನ್ನು ಹೈಕಮಾಂಡ ಸಿದ್ಧರಾಮಯ್ಯನವರಿಗೆ ವಹಿಸುವುದರಲ್ಲಿ ಎರಡು ಮಾತಿಲ್ಲ.
ಒಂದು ವೇಳೆ ಅಂತಹ ಪರಿಸ್ಥಿತಿ ಬಂದೊದಗಿದರೆ, ಸಿದ್ಧರಾಮಯ್ಯ ಯಾರ ಹೆಸರನ್ನು ಹೇಳಬಹುದು ಎನ್ನುವುದು ಜಗಜ್ಜಾಹೀರ. ರಾಜಕೀಯದಲ್ಲಿ ಸಿದ್ಧರಾಮಯ್ಯ ಅವರ ಪರಮಾಪ್ತರು ಅಷ್ಟೇ ಅಲ್ಲ ವಿಶ್ವಾಸಿಕರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರಲ್ಲಿ ಸಚಿವ ಸತೀಶ ಜಾರಕಿಹೊಳಿ ಒಬ್ಬರು, ಅಹಿಂದ ಸಂಘಟನೆಯ ಮೂಲಕ ರಾಜ್ಯವ್ಯಾಪಿ ಹೆಸರು ಮಾಡಿದವರಲ್ಲಿ ಸತೀಶ ಜಾರಕಿಹೊಳಿ ಒಬ್ಬರು. ಇದೆಲ್ಲಕ್ಕಿಂತ ಈಗಿನ ಲೋಕೋಪಯೋಗಿ ಖಾತೆಯನ್ನು ಯಾವುದೇ ಗೊಂದಲಕ್ಕೆ ಆಸ್ಪದ ಮಾಡಿಕೊಡದೇ ಎಲ್ಲರೂ ಸೈ ಎನ್ನುವಂತೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ, ಏಕೆಂದರೆ ಇನ್ನುಳಿದ ಇಲಾಖೆಯಲ್ಲಿ ಯಾವ ರೀತಿ ಅವ್ಯವಹಾರ ಸದ್ದು ಮಾಡುತ್ತಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಅಂತ ಸನ್ನಿವೇಶ ಸತೀಶ ಜಾರಕಿಹೊಳಿ ಇಲಾಖೆಯಲ್ಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಉತ್ತರಾಧಿಕಾರದ ಹೆಸರು ಹೇಳುವ ಪ್ರಸಂಗ ಬಂದರೆ ಸತೀಶ ಹೆಸರು ಬರಬಹುದು ಎನ್ನುವ ಮಾತಿದೆ.


ಮತ್ತೊಂದು ಸಂಗತಿ ಎಂದರೆ, ಕಳೆದ ಕೆಲ ತಿಂಗಳುಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಪ್ರಧಾನಿ ಮೋದಿ ಅವರನ್ನು ಭೆಟ್ಟಿ ಮಾಡಿ ಬಂದಿದ್ದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಡಿ.ಕೆ.ಶಿವಕುಮಾರಗೆ ಮುಖ್ಯಮಂತ್ರಿ ಹುದ್ದೆಗೆ ಅಡ್ಡಿಯಾಗುವ ಸಾಧ್ಯತೆ ಇದೆ
.

ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಸಿದ್ದು ಬಣದವರು ತಮ್ಮ ಬೆಂಬಲಿಗರ ತಲೆ ಎಣಿಕೆ ಶುರುವಿಟ್ಟುಕೊಂಡಿದ್ದರಂತೆ, ಆಗ ಸಿದ್ದು ಬಣದಲ್ಲಿ 72 ಜನ ಶಾಸಕರ ಗುರುತಿಸಿಕೊಂಡಿದ್ದು ಗೊತ್ತಾಯಿತು ಎನ್ನಲಾಗಿದೆ, ಹೀಗಾಗಿ ರಾಜಕೀಯ ಬೆಳವಣಿಗೆ ಬದಲಾದರೆ ಉತ್ತರಾಧಿಕಾರ ಆಯ್ಕೆ ಹೊಣೆ ಸಿದ್ಧರಾಮಯ್ಯವರಿಗೆ ವಹಿಸುವುದರಲ್ಲಿ ಎರಡು ಮಾತಿಲ್ಲ ಎನ್ನಲಾಗುತ್ತಿದೆ.

ಭಾವಿ ಸಿಎಂ ಹೆಸರು ..!
ಬೆಳಗಾವಿಯಲ್ಲಿ ಮಾತ್ರ ಕೆಲ ಪ್ಲೆಕ್ಸ್ಗಳಲ್ಲಿ ಸತೀಶ ಜಾರಕಿಹೊಳಿ ಅವರನ್ನು ಭಾವಿ ಸಿಎಂ ಎಂದು ಉಲ್ಲೇಖಿಸುವ ಕೆಲಸವನ್ನು ಮಾಡಲಾಗುತ್ತಿದೆ,
ರಾಜ್ಯೋತ್ಸವ ಶುಭಾಶಯ ಕೋರುವ ಭಿತ್ತಿಪತ್ರಗಳಲ್ಲಿ ಕನ್ನಡ ಪರ ಸಂಘಟನೆಗಳು ಈ ರೀತಿ ಬರೆದು ತಮ್ಮ ಅಭಿಮಾನ ತೋರಿಸುತ್ತಿದ್ದಾರೆ

ಯಲ್ಲಮ್ಮದೇವಿ ಸನ್ನಿಧಿಗೆ ಸಿಎಂ

ಮೈಸೂರು ಮೂಡಾ ಟೆನ್ಶನ್ದಲ್ಲಿಯೇ ಗಡಿನಾಡಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸವದತ್ತಿ ಯಲ್ಲಮ್ಮದೇವಿ ಯಾವ ರೀತಿ ಆಶರ್ೀವಾದ ಮಾಡುವಳು?
ಸಹಜವಾಗಿ ಇಂತಹುದೊಂದು ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ.
ಮೈಸೂರು ದಸರಾದಲ್ಲಿ ಚಾಮುಂಡಿದೇವಿ ಆಶೀವರ್ಾದ ಪಡೆದ ಮುಖ್ಯಮಂತ್ರಿಗಳು ಈಗ ಸವದತ್ತಿ ಯಲ್ಲಮ್ಮನ ಸನ್ನಿಧಿಗೆ ನಾಳೆ ದಿ. 13 ರಂದು ಬರುತ್ತಿದ್ದಾರೆ.
ಸವದತ್ತಿ ಯಲ್ಲಮ್ಮದೇವಿ ಆವರಣದಲ್ಲಿಯೇ ಪ್ರಾಧಿಕಾರದ ಸಭೆ ಕೂಡ ನಡೆಯಲಿದೆ, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿದ ವರದಿಯನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಲಿದ್ದಾರೆ.
ಈ ವರದಿಗೆ ಮುಖ್ಯಮಂತ್ರಿಗಳು ಸಮ್ಮತಿ ಕೊಟ್ಟರೆ ತಿರುಪತಿ ತಿಮ್ಮಪ್ಪ ದೇವಸ್ಥಾನ ಮಾದರಿಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಯಾಗಲಿದೆ, ಸುಮಾರು 1100 ಎಕರೆ ಪ್ರದೇಶದಲ್ಲಿ ಏನೆಲ್ಲ ಮಾಡಬಹುದು ಎನ್ನುವ ನೀಲನಕ್ಷೆಯನ್ನು ಜಿಲ್ಲಾಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದರಲ್ಲಿ ಖಾಸಗಿಯವರ ಸಹಭಾಗಿತ್ವ ಕೂಡ ಇದೆ ಎನ್ನುವುದು ವಿಶೇಷ.

ಮತ್ತೊಂದು ಕಡೆಗೆ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿ ಕ್ಷೇತ್ರದ ಅಭಿವೃದ್ಧಿ ಚಿತ್ರಣದ ಜೊತೆಗೆ ಕ್ಷೇತ್ರಕ್ಕೆ ಬೇಕು ಬೇಡಗಳ ಪಟ್ಟಿಯನ್ನು ಮುಖ್ಯಮಂತ್ರಿಗಳ ಮುಂದಿಡಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಧ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸಿದ್ಧರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಗೋಕಾಕದಲ್ಲಿ ಕಳೆದ ಎರಡು ದಿನಗಳಿಂದ ಜನರೊಂದಿಗೆ ಕಾಲ ಕಳೆಯುತ್ತಿರುವ ಸಚಿವ ಜಾರಕಿಹೊಳಿ ಫುಲ್ ರಿಲ್ಯಾಕ್ಸ್ ಮೂಡನಲ್ಲಿದ್ದುದು ಕಂಡು ಬಂದಿತು.

Leave a Reply

Your email address will not be published. Required fields are marked *

error: Content is protected !!