Headlines

ಶಾಸಕರ ಮಧ್ಯಸ್ಥಿಕೆ ಇತ್ಯರ್ಥಗೊಂಡ ಸಮಸ್ಯೆ

ಶಾಸಕ ಅಭಯ ಪಾಟೀಲ ಮತ್ತು ಭಜರಂಗದಳದವರ ಮಧ್ಯಸ್ಥಿಕೆ..

ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್.

ಕಾಲೇಜಿಗೆ ಪೊಲೀಸ್ ಅಧಿಕಾರಿಗಳ ದೌಡು

ಬಗೆಹರಿದ ಸಮಸ್ಯೆ. ಧಾರ್ಮಿಕ‌ ಭಾವನೆಗೆ ಧಕ್ಕೆ ಇಲ್ಲ ಎಂದ ಪ್ರಿನ್ಸಿಪಾಲ ಶಿವಕುಮಾರ


ಬೆಳಗಾವಿ.
ನಗರದ ಕಾಲೇಜೊಂದರಲ್ಲಿ ಉಲ್ಭಣಿಸಿದ ಸೂಕ್ಷ್ಮ ಸಮಸ್ಯೆಯೊಂದು ಶಾಸಕರು ಮತ್ತು ಭಜರಂಗದಳದವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿದೆ.
ಇಂದು ಬೆಳಗಿನ ಜಾವದಿಂದ ಮಚ್ಛೆ ಪ್ರದೇಶದ ಕಾಲೇಜೊಂದರಲ್ಲಿ ಮಂದಿರದ ಬಾಗಿಲಿಗೆ ಕೀಲಿ ಹಾಕಿ ಅನ್ಯ ಧರ್ಮದವರ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆ ಕಾಲೇಜಿಗೆ ಭೆಟಿ ್ಟಕೊಟ್ಟು ಪರಿಶೀಲನೆ ನಡೆಸಿದರು, ಅಷ್ಟೇ ಅಲ್ಲ ಶಾಸಕ ಅಭಯ ಪಾಟೀಲರು ನೇರವಾಗಿ ಆಡಳಿತ ಮಂಡಳಿಯವರ ಜೊತೆ ಮಾತನಾಡಿದರು, ಇದರ ಜೊತೆಗೆ ಭಜರಂಗದಳದವರು ನೇರವಾಗಿ ಕಾಲೇಜಿಗೆ ಹೋಗಿ ಮಾತುಕತೆ ನಡೆಸಿದ ಪರಿಣಾಮ ಸಮಸ್ಯೆ ಪರಿಹಾರವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೂಜಿನ ಪ್ರಾಚಾರ್ಯ ಶಿವಕುಮಾರ ಅವರು ಸಹ, ಈಗಲೂ ಸಹ ಅರ್ಚಕರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ, ನಮ್ಮ ಸಂಸ್ಥೆಯಲ್ಲಿ ಧಾಮರ್ಿಕ ಭಾವನೆ ಕೆರಳಿಸುವ ಯಾವುದೇ ಘಟನೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!