
ಜೈನ ಎಂಜಿನಿಯರಿಂಗ್ ಕಾಲೇಜ್ – ಸುಳ್ಳು ಸುದ್ಧಿ ಪ್ರಚಾರಕರ ವಿರುದ್ಧ ಕ್ರಮ
ಜೈನ ಎಂಜಿನಿಯರಿಂಗ್ ಕಾಲೇಜ್ – ಸುಳ್ಳು ಸುದ್ಧಿ ಪ್ರಚಾರಕರ ವಿರುದ್ಧ ಕ್ರಮ ಬೆಳಗಾವಿ, ಅ.೧೬: ಪ್ರತಿಷ್ಠಿತ ಜೆಜಿಐ ಸಂಸ್ಥೆಯ ಜೈನ ಎಂಜನಿಯರಿಂಗ್ ಕಾಲೇಜು ಆವರಣದಲ್ಲಿ ಗಣೇಶ ದೇವಾಲಯ ಕುರಿತು ಇತ್ತೀಚೆಗೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತ ಹಾನಿಕಾರಕ ಸುಳ್ಳ ಸುದ್ಧಿಗಳನ್ನು ಹರಡಿಸಲಾಗುತ್ತಿದೆ. ಇದು ಅಸತ್ಯದಿಂದ ಕೂಡಿದ್ದು, ದುರುದ್ದೇಶಪೂರಿತವಾಗಿದೆ. ಜೆಜಿಐ ಸಂಸ್ಥೆ ಸಾಮಾಜಿಕ, ಧಾರ್ಮಿಕ ಯಾವುದೇ ವಿಷಯಗಳನ್ನು ಗೌರವಿಸುತ್ತ, ಎಲ್ಲರ ಹಿತಾಸಕ್ತಿಗಳಿಗೆ ಬದ್ಧವಾಗಿ ನಡೆದು ಬಂದಿದೆ ಎಂದು ಜೈನ ಎಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಜೆ. ಶಿವಕುಮಾರ…