Headlines

ಯಾವ ಪುರುಷಾರ್ಥಕ್ಕೆ ಬೆಳಗಾವಿ ಅಧಿವೇಶನ?

ಸಿಎಂ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ.

ಮಹದಾಯಿ ಸಣ್ಣ ವಿಷಯ..ಅದನ್ನು ತೆಗೆದುಕೊಂಡು ಪ್ರಧಾನಿ ಬಳಿ ಹೋಗಲ್ಲ. ಸಂಬಂಧಿಸಿದ ಸಚಿವರನ್ನು ಭೆಟ್ಟಿ ಮಾಡುತ್ತೇವೆ.


ಬೆಳಗಾವಿ:
ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ಕಾಂಗ್ರೆಸ್ ಸಕರ್ಾರ ಬೆಳಗಾವಿಯಲ್ಲಿ ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರಶ್ನೆ ಮಾಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ಬಗ್ಗೆ ಇಡಿ ವರದಿ ಕೊಟ್ಟಿದೆ. ಮಲ್ಲಿಕಾಜರ್ುನ ಖರ್ಗೆ ಯವರು ಸಿದ್ಧಾರ್ಥ್ ಟ್ರಸ್ಟ್ ಹೆಸರಿನಲ್ಲಿ ಪಡೆದಿದ್ದ ಸೈಟ್ ವಾಪಸ್ ಕೊಟ್ಟಿದ್ದಾರೆ.

ಹೀಗೆ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದ್ದು, ಬೆಳಗಾವಿಯಲ್ಲಿ ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತಿದ್ದಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಮಹದಾಯಿ ಯೋಜನೆ ಕಾಮಗಾರಿಯನ್ನು ನಾವೇ ಆರಂಭಿಸಿದ್ದೇವೆ. ಅದನ್ನು ನಾವೇ ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿದರು.
ಮಹದಾಯಿ ಯೋಜನೆ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಪಡಿಸಿದ್ದೇವೆ. ಇಂತಹ ಸಣ್ಣ ವಿಷಯಗಳ ಬಗ್ಗೆ ಮೋದಿಯವರ ಬಳಿ ಹೋಗುವುದಲ್ಲ. ಸಂಬಂಧ ಪಟ್ಟ ಸಚಿವರ ಬಳಿ ಹೋಗಿ ಮಾತಾಡಿದ್ದೇವೆ ಎಂದ ಕಡಾಡಿ ಹೇಳಿದರು.

ಬೆಳಗಾವಿಯ ವಿಮಾನಯಾನ ಸೇವೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚಚರ್ೆ ನಡೆಸುತ್ತಿದ್ದೇವೆ ಬೆಳಗಾವಿ ವಿಮಾನಯಾನ ಸೇವೆಗಳು ಮುಂದುವರಿಯಬೇಕೆಂದು ನಿರೀಕ್ಷಿಸಿದ್ದ ಜನರಿಗೆ ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ, ಬೆಳಗಾವಿಯ ರೈಲು ಸೇತುವೆಯ ಅವ್ಯವಸ್ಥಿತ ಕಾಮಗಾರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಹೇಳಿದರು.
ಬೆಳಗಾವಿ ಬುಡಾದಲ್ಲಿ ಹಗರಣ ಆಗಿದ್ದರೆ ಆ ಕುರಿತು ತನಿಖೆ ಮಾಡಬೇಕು. ಬುಡಾದಲ್ಲಿ ಹಗರಣದ ಬಗ್ಗೆ ನನ್ನ ಬಳಿ ದಾಖಲೆಯಿಲ್ಲ ಎಂದರು.
ಮಾಜಿ ಶಾಸಕ ಸಂಜಯ್ ಪಾಟೀಲ್, ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ್ ಮಾದಮ್ಮನವರ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಸ್ ಸಿದ್ದನಗೌಡರ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ನಗರಸೇವಕ ಹನುಮಂತ್ ಕೊಂಗಾಲಿ, ಸುಭಾಷ್ ಸಣ್ಣವೀರಪ್ಪನವರ, ವಿಠ್ಠಲ ಸಾಯಣ್ಣವರ, ವೀರಭದ್ರ ಪೂಜಾರಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!