ಮಹಿಳೆಯರ ಬಲವರ್ಧನೆಗೆ ಬೇಲಾ ಬಜಾರ್ ಸಹಕಾರಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ
ಬೆಳಗಾವಿ: 2018ರಲ್ಲಿ ಡಾ. ಲಕ್ಷ್ಮೀ ಕಿಲಾರಿಯವರ ನೇತೃತ್ವದಲ್ಲಿ ಆರಂಭವಾದ ಬೇಲಾ ಬಜಾರ ಸಂಸ್ಥೆ ಜಿಲ್ಲೆಯ ಮಹಿಳೆಯರ ಏಳ್ಗೆಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಸ್ಥೆಯಿಂದ ಸುಮಾರು 35 ಸಾವಿರ ಮಹಿಳೆಯರು ತಮ್ಮ ಸ್ವಾವಲಂಬಿ ಜೀವನ ಕಟ್ಟಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ನಗರದ ಬೇನನ್ ಸ್ಮೀತ್ ಮೆಥೋಡಿಸ್ಟ್ ಪದವಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಬೇಲಾ ಬಜಾರ್ ಮಳಿಗೆಗಳಿಗೆ ಚಾಲನೆ ನೀಡಿ, ಬೇಲಾ ಬಜಾರ್ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕೆಂಬುವುದು ಬೇಲಾ ಬಜಾರ ಸಂಸ್ಥೆಯ ಉದ್ದೇಶವಾಗಿದ್ದು, ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಮಹಿಳೆಯರು ಈ ವೇದಿಕೆ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಈ ವೇದಿಕೆ ಮೂಲಕ ಮಹಿಳೆಯರು ತಮ್ಮ ವಿಭಿನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಬಹುದು ಎಂದರು.
ಡಾ. ಲಕ್ಷ್ಮೀ ಕಿಲಾರಿ ನೇತೃತ್ವದ ಬೇಲಾ ಬಜಾರ್ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿ, ನಿಮ್ಮ ಸಂಸ್ಥೆಗೆ ಬೇಕಾಕ ಸಹಾಯ, ಸಹಕಾರ ನಮ್ಮ ಪೌಂಡೇಶನ್ ಮೂಲಕ ನೀಡುತ್ತೇವೆ ಎಂದು ಇದೇ ವೇಳೆ ಭರವಸೆ ನೀಡಿದರು.
ಬೇಲಾ ಬಜಾರ್ ಸಂಸ್ಥೆಯ ಡಾ. ಲಕ್ಷ್ಮೀ ಕಿಲಾರಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಸಂಸದೆಯಾಗಿ ಆಯ್ಕೆಯಾದ ಪ್ರಿಯಂಕಾ ಜಾರಕಿಹೊಳಿಯವರು ಯುವ ಪ್ರತಿಮೆಗಳಿಗೆ ಮಾದರಿಯಾಗಿದ್ದಾರೆ. ಇಂದು ಅವರು ಬೇಲಾ ಬಜಾರ್ ನ ಮಳಿಗೆ ಉದ್ಘಾಟಿಸಿದ್ದು ನನಗೆ ಅತ್ಯಂತ ಖುಷಿ ನೀಡಿದೆ. ಅವರಲ್ಲಿರುವ ಸರಳತೆ, ಜನಪರ ಕಾಳಜಿ ಸರ್ವರಿಗೂ ಮಾದರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಎಂಡಿ ದೀಪಾ ಸಿದ್ನಾಳ, ಬೇಲಾ ಸಂಸ್ಥೆ ನಿರ್ದೇಶಕಿ ಡಾ. ಭಾರತಿ ಕಿಲಾರಿ, ಹರ್ಷಲ್ ಸರ್, ಪ್ರದೀಪ್ ಹೊಸಮನಿ, ಸೋನು ಸೋದಾಗಾರ, ಪ್ರಶಾಂತ್ ಪವಾರ, ಕುಯನ್ಸಿ, ಸೇಹ್ನಲ್ ಮೊದಗಿ, ದಿಪ್ತಿ, ಕೇತನ ಸಿಂದೆ ಸೇರಿದಂತೆ ಬೇಲಾ ಬಜಾರ್ ಸಂಸ್ಥೆ ಸರ್ವ ಸದಸ್ಯರು ಇದ್ದರು.