ಬೆಳಗಾವಿ.
ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಂಸತ್ ಮೆಟ್ಟಿಲು ತುಳಿದಿರುವ ಕುಮಾರಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ರಾಜಕೀಯ ನಡೆಗೆ ಎಲ್ಲೆಡೆ ಮೆಚ್ವುಗೆ ವ್ಯಕ್ತವಾಗುತ್ತಿದೆ.
ಕಳೆದ ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಎದುರಾಳಿಯ ಬಗ್ಗೆ ಟೀಕೆ ಮಾಡುವುದು ಒತ್ತಟ್ಟಿಗಿರಲಿ ಹೆಸರು ಪ್ರಸ್ತಾಪಿಸದೇ ಮತಯಾಚನೆ ಮಾಡಿದ ರೀತಿ ಕ್ಷೇತ್ರದ ಜನರ ಮನಸ್ಸು ಗೆಲ್ಲಲು ಕಾರಣವಾಯಿತು.
ಕೆಲವರು ಗಮನಿಸಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮಮುಂದಿನ ಕೆಲಸ ಕಾರ್ಯಗಳ ಬಗ್ಗೆ ಪ್ರಸ್ತಾಪಿಸುವುದನ್ನು ಬಿಟ್ಟು ಬರೀ ಟೀಕೆ ಮಾಡುವುದರಲ್ಲಿಯೇ ಕಾಲಹರಣ ಮಾಡಿದರು.ಶದರೆ ಅಂತಹವರನ್ನು ಜನ ಒಪ್ಪಲಿಲ್ಲ.
ಆದರೆ ಯಾವುದೇ ಸದ್ದು ಗದ್ದಲವಿಲ್ಲದೇ, ಪ್ರಚಾರದ ಗೊಡವೆಗೂ ಹೋಗದೇ ಮತದಾರರ ಮಧ್ಯದಲ್ಲಿ ಸಿಂಪಲ್ ಆಗಿ ನಡೆದುಕೊಂಡಿದ್ದರಿಂದ priyanka jarkiholi ಗೆಲುವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ, ಚುನಾವಣೆಯಲ್ಲಿ ಗೆದ್ದ ಮೇಲೂ ಸಹ ಪ್ರಿಯಾಂಕಾ ಎಂದಿಗೂ ಯಾರೊಂದಿಗೂ ಒರಟಾಗಿ , ದರ್ಪದಿಂದ ಮಾತಾಡಿದ ಉದಾಹರಣೆ ಇಲ್ಲ.
ಈಗಲೂ ಕೂಡ ಪಕ್ಷದ ಹಿರಿಯರ ಮತ್ತು ಕಾರ್ಯಕರ್ತರ ಮನೆಗೆ ಭೆಟ್ಟಿ ನೀಡುವ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿಂದು ಸಂಸದೆ ಪ್ರಿಯಾಂಕಾ ಅವರು ಕೇಂದ್ರದ ಮಾಜಿ ಸಚಿವ ದಿ. ಬಿ. ಶಂಕರಾನಂದ ಅವರ ನಿವಾಸಕ್ಕೆ ಭೆಟ್ಟಿ ನೀಡಿದರು.

ಇಲ್ಲಿನ: ವಿಶ್ವೇಶ್ವರಯ್ಯ ನಗರದಲ್ಲಿರುವ ಮಾಜಿ ಕೇಂದ್ರ ಸಚಿವ, ದಿ. ಬಿ. ಶಂಕರಾನಂದ ಅವರ ಮನೆಗೆ ಭೇಟಿ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ದಿ. ಬಿ. ಶಂಕರಾನಂದ ಅವರ ಹಿರಿಯ ಸೊಸೆ ವಿದ್ಯಾ ಅವರೊಂದಿಗೆ ಕುಶಲೋಪರಿ ವಿಚಾರಿಸಿದರು.
ಮಾಜಿ ಕೇಂದ್ರ ಸಚಿವ, ದಿ. ಬಿ. ಶಂಕರಾನಂದ ಅವರ 99ನೇ ಜನ್ಮದಿನದ ಹಿನ್ನೆಲೆಯಲ್ಲಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ, ದಿ. ಬಿ. ಶಂಕರಾನಂದ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಮಾಜಿ ಕೇಂದ್ರ ಸಚಿವ ದಿ. ಬಿ. ಶಂಕರಾನಂದ ಅವರು 1967 ರಿಂದ 1996 ರವರೆಗೆ 29 ವರ್ಷಗಳ ಕಾಲ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದು, ತಮ್ಮ ರಾಜಕೀಯ ಜೀವನದಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸತತ 7 ಬಾರಿ ಸಂಸದರಾಗಿ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ. ಈಗ ಅದೇ ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಂಕಾ ಜಾರಕಿಹೊಳಿ ಅವರು ಸಂಸದರಾಗಿ ಆಯ್ಕೆ ಆದ ಬಳಿಕ ಮೊದಲ ಬಾರಿಗೆ ದಿ. ಬಿ. ಶಂಕರಾನಂದ ಅವರ ಮನೆಗೆ ಭೇಟಿ ನೀಡಿ ಬಿ. ಶಂಕರಾನಂದ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಇದೇ ವೇಳೆ ದಿ.ಬಿ. ಶಂಕರಾನಂದ ಅವರ ಸೊಸೆ ವಿದ್ಯಾ, ಮೊಮ್ಮಗಳು ಅಂಜಲಿ ಕಣಗಲಿ ಅವರು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ದಿ.ಬಿ. ಶಂಕರಾನಂದ ಅವರ ಮೊಮ್ಮಗಳು ಅಂಜಲಿ ಕಣಗಲಿ, ಸತೀಶ್ ಶುಗರ್ಸ್ ನಿರ್ದೇಶಕ, ಸಹೋದರ ರಾಹುಲ್ ಜಾರಕಿಹೊಳಿ, ಮುಖಂಡರಾದ ಸಿದ್ದಿಕ್ ಅಂಕಲಗಿ, ಮಲಗೌಡ ಪಾಟೀಲ್, ಪಾಂಡು ರಂಗಸೂಬೆ, ವಿಜಯ ತಳವಾರ ಸೇರಿದಂತೆ ಇತರರು ಇದ್ದರು.