22 ರಂದು ಬೆಂಗಳೂರಿನಲ್ಲಿ ಸಭೆ. ರಾಜಕೀಯ ನಾಯಕರು, ಮಠಾಧೀಶರು ಸಭೆಯಲ್ಲಿ ಭಾಗಿ.
ಬೆಳಗಾವಿ. ಜಾತಿ, ಜನಗಣತಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶಾಶ್ವತವಾಗಿ ಅವರವರ ಆಧಾರ ಕಾಡರ್ಿನಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಿದರೆ ಯಾವುದೇ ಖಚರ್ು ಇಲ್ಲದೇ ಕೇವಲ 3 ತಿಂಗಳಲ್ಲಿ ದೃಢಿಕೃತ ಫಲಿತಾಂಶವನ್ನು ಪಡೆಯಬಹುದು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕಟವಗಿಮಠ ಹೇಳಿದರು, ನಗರದಲ್ಲಿಂದು ಸುದ್ದಿಗಾರರೊಂದಿಗೆ ಅರು ಮಾತನಾಡಿದರು, ಈ ರೀತಿ ಮಾಡಿದರೆ ಮಾತ್ರ ಯಾವುದೇ ಖಚರ್ು ವೆಚ್ಚವಿಲ್ಲದೇ ಈ ಕ್ರಮವನ್ನು ಅನುಷ್ಠಾನ ಗೊಳಿಸಬಹುದು.
ಈ ಹಿನ್ನೆಲೆಯಲ್ಲಿ ಇದೇ ದಿ 22 ರಂದು ಬೆಂಗಳುರಿನಲ್ಲಿ ನಡೆಯುವ ಸಭೆಯಲ್ಲಿ ಚಚರ್ೆ ಸಹ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು, ‘
ಕೊನೆಗೆ ಇದೇ ಅಂತಿಮ ಗಣತಿಯಾಗಿ ಮುಂದೆ ಪ್ರತಿ 10 ವರ್ಷಕ್ಕೊಮ್ಮೆ ಗಣತಿಗಾಗಿ ಸರಕಾರ ಯಾವುದೇ ಖಚರ್ು ವೆಚ್ಚ ಮಾಡುವುದು ತಪ್ಪುತ್ತದೆ ಎಂದರು.
9 ವರ್ಷ ಹಳೆಯದ್ದು…! 9 ವರ್ಷಗಳ ಹಿಂದಿನ ಹಳೆಯದಾದ ಜಾತಿ ಗಣತಿ ವರದಿಯನ್ನು ಯಥಾವತ್ತಾಗಿ ಸ್ವೀಕರಿಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ಕಡೆಗಣಿಸಿ ಜಾರಿಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು,
ಜಾತಿ ಗಣತಿಯನ್ನು ಯಾವುದೇ ರಾಜಕೀಯ ಪಕ್ಷ, ಸಮಾಜ ಮತ್ತು ಯಾವುದೇ ಮಠಾಧೀಶರು ವಿರೋಧಿಸಿರುವುದಿಲ್ಲ. ಎಲ್ಲರೂ ಜಾತಿ ಗಣತಿ ಬೇಕೆಂದು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಆದರೆ 9 ವರ್ಷಗಳ ಹಿಂದಿನ ಹಳೆಯದಾದ ಈ ವರದಿಯನ್ನು ಯಥಾವತ್ತಾಗಿ ಸ್ವೀಕರಿಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ಕಡೆಗಣಿಸಿ ಜಾರಿಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಅವರು ಸ್ಪಷ್ಟಪಡಿಸಿದರು,. ಈ ಕುರಿತಂತೆ ಬರುವ ದಿ 22 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಏಟ್ರಿಯಾ ಹೊಟೇಲ್ನಲ್ಲಿ ರಾಜಕೀಯ ಹಿರಿಯ ನಾಯಕರು, ಹಿರಿಯ ಮಠಾಧೀಶರು ಮತ್ತು ಸಾಮಾಜಿಕ ಚಿಂತಕರ ಸಭೆಯನ್ನು ಕರೆಯಲಾಗಿದೆ. ಹಿರಿಯ ನಾಯಕ ಶಾಮನೂರ ಶಿವಶಂಕರಪ್ಪನವರ ಅದಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ನಿಧರ್ಾರ ತೆಗೆದು ಕೊಳ್ಳಲಾಗುತ್ತದೆ ಎಂದು ಕವಟಗಿಮಠ ಹೇಳಿದರು