ಬೆಂಗಳೂರು :
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಗಾಯಿತ್ರಿ ಮಹಾಯಾಗದ ಅಂಗವಾಗಿ ಕೋಟಿ ಗಾಯತ್ರಿ ಜಪ ಯಜ್ಞಕ್ಕೆ ಮಹಾ ಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಸಂಕಲ್ಪ ಮಾಡುವ ಮೂಲಕ ಚಾಲನೆ ನೀಡಿದರು.

ಮಹಾ ಸಭಾ ದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಮಹಾಸಭೆಯ ಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು ಎಂದೂ ಹೇಳಿದರು.
ಗಾಯತ್ರಿ ಜಪವು ನಮ್ಮ ಓಜಸ್ಸು ತೇಜಸ್ಸು ಎಲ್ಲವನ್ನು ವೃದ್ಧಿಸುವುದಲ್ಲದೆ ಗಾಯತ್ರಿ ಮಂತ್ರವು ತ್ರಿಮತಸ್ಥರು ಅನುಷ್ಠಾನ ಮಾಡುವಂತಹ ಜಪವಾಗಿರುವುದರಿಂದ ಬ್ರಾಹ್ಮಣ ಸಂಘಟನೆಗೆ ಇದು ಉತ್ತಮವಾದಂತಹ ಅನುಷ್ಠಾನ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ರವರು ಮಾತನಾಡಿ ಬ್ರಾಹ್ಮಣ ಸಮಾಜವು ಸರ್ವೇ ಜನಾಃ ಸುಖಿನೋ ಭವಂತು ಎಂದು ಪ್ರಾರ್ಥಿಸಿ ಲೋಕ ಕಲ್ಯಾಣವಾಗಲಿ ಎಂದು ಈ ಯಜ್ಞವನ್ನು ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಆಚಾರ್ಯತ್ವವನ್ನು ವೇದಮೂರ್ತಿ ವಿಶ್ವೇಶ್ವರ ಭಟ್ ,ಭಾನುಪ್ರಕಾಶ್ ಶರ್ಮ ,ಸುರೇಶ ಶಾಸ್ತ್ರಿ ಹಾಗೂ ಮಹಾಸಭಾ ಉಪಾಧ್ಯಕ್ಷ ರಾಘವೇಂದ್ರ ಭಟ್ ವಹಿಸಿದ್ದರು.

ಮಹಾ ಸಭಾ ಪದಾಧಿಕಾರಿಗಳಾದ ಡಿ.ವಿ. ರಾಜೇಂದ್ರ ಪ್ರಸಾದ್ ,ಸುಧಾಕರ ಬಾಬು ಪ್ರಧಾನ ಕಾರ್ಯದರ್ಶಿ ಶ್ರೀಧರ ಮೂರ್ತಿ ,ಖಜಾಂಚಿ ವೆಂಕಟೇಶ್ ನಾಯಕ್ ಮತ್ತಿತರರು ಹಾಜರಿದ್ದರು.