ಬೆಳಗಾವಿ. ಕಳೆದ ಕೆಲ ದಿನಗಳಿಂದ ವಿವಾದಕ್ಕೆ ಹೆಸರು ಮಾಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.
ಅವರ ಸ್ಥಾನಕ್ಕೆ ಮೈಸೂರು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾಗಿದ್ದ ಶ್ರೀಮತಿ ಶುಭ ಬಿ ಅವರನ್ನು ನೇಮಕ ಮಾಡಲಾಗಿದೆ.

ಹಾಲಿ ಇದ್ದ. ಅಶೋಕ ದುಡಗುಂಟಿ ಅವರಿಗೆ ಯಾವುದೇ ಸ್ಥಳ ನಿಯುಕ್ತಿ ಮಾಡಲಾಗಿಲ್ಲ. ಇವರ ಅವಧಿಯಲ್ಲಿ ಬರೀ ವಿವಾದಗಳೇ ಸದ್ದುಬಮಾಡಿದ್ದವು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಅನುಷ್ಠಾನ ತರುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ.

ಪೌರ ಕಾರ್ಮಿಕರ ನೇಮಕ ವಿವಾದ ಸೇರಿದಂತೆ ಭೂ ಪರಿಹಾರ ವಿಷಯದಲ್ಲೂ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಮಾತುಗಳಿದ್ದವು. ಈಗ ಹೊಸದಾಗಿ ಬರುವ ಆಯುಕ್ತರ ಅವಧಿಯಲ್ಲಿ ವಿವಾದ ದೂರವಾಗಿ ಅಭಿವೃದ್ಧಿ ಯತ್ತ ಪಾಲಿಕೆ ಮುಖ ಮಾಡಬೇಕು ಎನ್ನುವುದು ಜನರ ಆಶಯ.