ಬೆಳಗಾವಿ.
ಕಿತ್ತೂರು ಉತ್ಸವದಲ್ಲಿ ಬೌನ್ಸರಗಳಿಂದ ಆಗುತ್ತಿರುವ ಕಿರಿಕಿರಿ ಬಗ್ಗೆ Ebelagavi ಸಮಗ್ರ ವರದಿಮಾಡಿತ್ತು.
ಉತ್ಸವದಲ್ಲಿ ಇವರ ಕಿರಿಕಿರಿಯಿಂದ ವೇದಿಕೆ ಕಾರ್ಯಕ್ರಮಕ್ಕೆ ಜನಾನೇ ಬರುತ್ತಿಲ್ಲ ಎಂದು ವರದಿ ಮಾಡಲಾಗಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ರಿಯಾಶೀಲ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಕಿರಿಕಿರಿ ಉಂಟು ಮಾಡಿದ್ದ ಎಲ್ಲ ಬೌನ್ಸರಗಳನ್ನು ಹೊರಹಾಕಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳ ಈ ತುರ್ತು ಕ್ರಮ ಜನರ ಪ್ರಶಂಸೆಗೆ ಕಾರಣವಾಗಿದೆ.
ಅದೇ ರೀತಿ ಲೈವ್ ಲಿಂಕ್ ವ್ಯವಸ್ಥೆಯನ್ನು ಮೂರಾಬಟ್ಟೆ ಮಾಡಿದ್ದನ್ನು ತೆಗೆದುಹಾಕಿದ್ದಾರೆ.