
ಡಿಸಿಗೆ ಸಚಿವ ಜಾರಕಿಹೊಳಿ ಕೊಟ್ಟ ಸೂಚನೆ ಏನ್ ಗೊತ್ತೆ?
ಡಿಸಿಗೆ ಸೂಚನೆ ನೀಡಿದ ಸಚಿವ ಸತೀಶಅಧಿವೇಶನಕ್ಕೂ ಮುನ್ನ ಸಮಸ್ಯೆಗಳ ಬಗ್ಗೆ ಚರ್ಚೆಬೆಳಗಾವಿ.ಡಿಸೆಂಬರನಲ್ಲಿ ನಡೆಯುವ ಅಧಿವೇಶನಕ್ಕೂ ಮುನ್ನ ಸಮಸ್ಯೆಗಳ ಬಗ್ಗೆಯೇ ಸಂಬಂಧಿಸಿದವರೊಂದಿಗೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ಬಾರಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬರುತ್ತಾರೆ, ಸಂಬಂಧಿಸಿದ ಸಚಿವರಿಂದಲೇ ಉತ್ತರ ಪಡೆಯಬೇಕೆಂಬುದು ಅವರ ಉದ್ದೇಶವಾಗಿರುತ್ತದೆ,ಆದರೆ ಈ ಬಾರಿ ಅಧಿವೇಶನ ಸುಸೂತ್ರ…