ಕ್ಲೀನ್ ಸಿಟಿಯತ್ತ ಪಾಲಿಕೆ ಆಯುಕ್ತರ ಚಿತ್ತ.
ಖುದ್ದು ದ್ವಿಚಕ್ರ ವಾಹನ ಏರಿ ಸ್ವಚ್ಚತೆ ಪರಿಶೀಲನೆಗೆ ಹೊರಟ ಆಯುಕ್ತರು
ಬೆಳಗಾವಿ.
ಎಲ್ಲರೂ ಅಂದುಕೊಂಡಂತೆ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಖದರ್ ಮತ್ತೇ ವಾಪಸ್ಸು ಬರುವ ಲಕ್ಷಣಗಳು ಕಾಣಸಿಗುತ್ತಿವೆ.
ಈ ಹಿಂದೆ ಇದ್ದ ಅಧಿಕಾರಿಗಳು ಬರೀ ಬಣ್ಣದ ಮಾತುಗಳನ್ನು ಆಡುವ ಮೂಲಕ ಬುಗರಿ ಆಡುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಇಡೀ ಸಕರ್ಾರಕ್ಕೆ ತಲೆನೋವಾಗುವಂತಹ ಪರಿಸ್ಥಿತಿಗೆ ಪಾಲಿಕೆ ಆಡಳಿತ ತಂದಿಟ್ಟಿದ್ದರು.
ಆದರೆ ಈಗ ಪಾಲಿಕೆಗೆ ಆ ಕೆಟ್ಟಘಳಿಗೆ ದೂರವಾಗುವ ಕಾಲ ಸನ್ನಿಹಿತವಾಗುತ್ತಿದೆ. ಅಂದರೆ ಪಾಲಿಕೆಗೆ ಈಗ ಶುಕ್ರದೆಸೆ ಆರಂಭವಾಗಿದೆ,
ಬೆಳಗಾವಿಗರೇ ಹೇಳುವಂತೆ ಪಾಲಿಕೆಗೆ ಶುಭ ಲಕ್ಷಣ ಬಂದಿದೆ.
ಅಶೋಕ ದುಡಗುಂಟಿ ಅವರು ವರ್ಗವಾದ ನಂತರ ಬೆಳಗಾವಿ ಪಾಲಿಕೆ ಅಳೆದು ತೂಗಿ ಮೈಸೂರಿನ ಯೋಜನಾ ನಿದರ್ೇಶಕರಾಗಿದ್ದ ಶುಭ ಅವರನ್ನು ಆಯುಕ್ತರನ್ನಾಗಿ ನೇಮಿಸಿತು.
ಆದರೆ ಕೆಲವರು ಮಹಿಳೆಯಿಂದ ಹದಗೆಟ್ಟ ಪಾಲಿಕೆ ಆಡಳಿತ ಸುಧಾರಿಸುವುದು ಸಾಧ್ಯವೇ ಎನ್ನುವ ಅನುಮಾನಬ ವ್ಯಕ್ತಪಡಿಸಿದ್ದರು, ಅದರಲ್ಲೂ ಪಾಲಿಕೆಯಲ್ಲಿ ಹದಗೆಟ್ಟ ಆರೋಗ್ಯ ವ್ಯವಸ್ಥೆ ಹೊಸ ಆಯುಕ್ತರು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು.
ಕಸದ ವಾಹನ ಬೆನ್ನಟ್ಟಿದ ಪಾಲಿಕೆ ಆಯುಕ್ತರು
ಆದರೆ ಪಾಲಿಕೆಯ ನೂತನ ಆಯುಕ್ತ ಶುಭ ಅವರು ಮಾತ್ರ ಎಲ್ಲರೂ ಹುಬ್ಬೆರಿಸುವಂತೆ ತಮ್ಮ ಕೆಲಸವನ್ನು ಸದ್ದು ಗದ್ದಲವಿಲ್ಲದೇ ಮಾಡುತ್ತಿದ್ದಾರೆ,
ರಜೆ ದಿನದ ಅವಧಿಯನ್ನೂ ಕಡೆಗಣಿಸಿ ಯಾರಿಗೂ ಹೇಳದೇ ನೇರವಾಗಿ ದ್ವಿಚಕ್ರ ವಾಹನವನ್ನು ತಾವೇ ಚಲಾಯಿಸಿಕೊಂಡು ಬೆಳ್ಳಂ ಬೆಳಿಗ್ಗೆ ಕೆಲ ಪ್ರದೇಶಗಳಿಗೆ ಭೆಟ್ಟಿ ನೀಡುವ ಕೆಲಸ ಮಾಡುತ್ತಿದ್ದಾರೆ.
ಕಳೆದ ದಿನವಷ್ಟೇ ಚವ್ವಾಟ ಗಲ್ಲಿ, ಆರ್ಟಿಓ ವೃತ್ತ, ವೀರಭದ್ರನಗರ, ಕಿತ್ತುರು ಚನ್ನಮ್ಮ ವೃತ್ತ ಸೇರಿದಂತೆ ಮತ್ತಿತರ ಕಡೆಗೆ ಭೆಟ್ಟಿ ನೀಡಿ ಸ್ವಚ್ಚತೆ ಪರಿಶೀಲನೆ ನಡೆಸಿದರು.
ಗಮನಿಸಬೇಕಾದ ಸಂಗತಿ ಎಂದರೆ, ಎಲ್ಲಿಯಾದರೂ ಕಸ ತುಂಬುವ ವಾಹನ ಹೊರಟರೆ ಅದರ ಬೆನ್ನಟ್ಟಿ ಅದರಲ್ಲಿದ್ದವರು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ಖುದ್ದು ಪರಿಶೀಲನೆ ನಡೆಸುವ ಕೆಲಸವನ್ನು ಆಯುಕ್ತರು ಮಾಡುತ್ತಿದ್ದಾರೆ,
ರಸ್ತೆ ಮಧ್ಯದಲ್ಲಿ ಕಸದ ತಿಪ್ಪೆ ಕಂಡರೆ ತಕ್ಷಣ ಸಂಬಂಧಿಸಿದವರನ್ನು ಕರೆದು ತಾಕೀತು ಮಾಡುವ ಕೆಲಸವನ್ನು ಅವರು ಮಾಡುತ್ತಿದ್ದುದು ಕಂಡು ಬಂದಿತು.
ಪ್ರತಿ ವಾರ್ಡ ಭೆಟ್ಟಿ?
ಸಧ್ಯ ಅಧಿವೇಶನದ ಸಿದ್ಧತೆಯಲ್ಲಿ ತೊಡಗಿರುವ ಪಾಲಿಕೆ ಆಯುಕ್ತೆ ಶುಭ ಅವರು, ಈಗ ಬೆಳಗಾವಿ ಕ್ಲೀನ್ ಸಿಟಿ ಮಾಡುವಲ್ಲಿ ಮಗ್ನರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ವಾರಕ್ಕೋ ಅಥವಾ ಬಿಡುವಿನ ವೇಳೆಯಲ್ಲಿ ನಗರದ ಪ್ರತಿಯೊಂದು ವಾರ್ಡಗೆ ಭೆಟ್ಟಿ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ವಾರ್ಡ ಭೆಟ್ಟಿ ನೀಡುವ ಮುನ್ನ ಆಯಾ ನಗರ ಸೇವಕರಿಗೆ ಮಾತ್ರ ಮಾಹಿತಿ ನೀಡಿ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಲಿದ್ದಾರೆಂದು ಗೊತ್ತಾಗಿದೆ, ಮತ್ತೊಂದು ಸಂಗತಿ ಎಂದರೆ, ಇವರು ಕಾರಿನಲ್ಲಿ ಪರಿಶೀಲನೆಗೆಂದು ಹೊರಟರೆ ಎಲ್ಲಿಗೆ ಎನ್ನುವುದನ್ನು ಮೊದಲು ಯಾರಿಗೂ ಹೇಳಲ್ಲ. ಇದು ಇವರ ವಿಶೇಷ. ಅದೇನೆ ಇರಲಿ, ಬೆಳಗಾವಿ ಪಾಲಿಕೆಗೆ ಅಂಟಿದ ಆ ಕಳಂಕ ದೂರವಾಗಿ ಎಲ್ಲವೂ `ಶುಭ’ ವಾಗಲಿ ಎನ್ನುವುದು ಎಲ್ಲರ ಆಶಯ.