
ಕರ್ಮ RETURNS..! ಅಂದ್ರೆ ಇದೇ ಅಲ್ಲವಾ?
ಇದನ್ನು ಬಿಡಿ .ಸಚಿವೆ ಹೆಬ್ಬಾಳಕರ ಅವರ ಹಿಡಿತದಲ್ಲಿರುವ ಇಲಾಖೆಯಲ್ಲಿ ಎಲ್ಲವೂ ಕಾನೂನು ಪ್ರಕಾರವಾಗಿ ನಡೆಯುತ್ತಿವೆಯೇ ಎಂದು ಕೇಳಿದರೆ, ಕರ್ಮಕಾಂಡದ ನಾಲ್ಕುನೂರಕ್ಕೂ ಹೆಚ್ಚು ದಾಖಲೆಗಳು ಮುಂದೆ ಬಂದು ಬೀಳುತ್ತವೆ. ಅವು ಅಧಿಕೃತ ವಾದ ದಾಖಲೆಗಳು. ಹೀಗಾಗಿ ತಹಶೀಲ್ದಾರ ಕಚೇರಿಯ ರುದ್ರೇಶ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕಾದ ಅನುವಾರ್ಯತೆ ಇದೆ. ಅದು ಆದರೆ ಮಾತ್ರ ರುದ್ರೇಶನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಲ್ಲದಿದ್ದರೆ.ಇಂದು ರುದ್ರೇಶ..ನಾಳೆ.. ಎನ್ನುವ ಆತಂಕ ಇದ್ದೇ ಇದೆ.