ಓದುಗರ ಮುಂದೆ ವಾಸ್ತವತೆಯನ್ನು ತೆರೆದಿಡಬೇಕಾದ ಅನಿವಾರ್ಯತೆ ಇದೆ. ಸರ್ಕಾರದ ಗ್ಯಾರಂಟಿ ಗಿಂತ ಕೆಲ ಜನಪ್ರತಿನಿಧಿಗಳು., ಅಪಾರ ಸಂಖ್ಯೆಯಲ್ಲಿ ಹುಟ್ಟಿಕೊಂಡ ಪಿಎಗಳು ಈ ವರ್ಗಾವಣೆ ಗ್ಯಾರಂಟಿ ಬೆನ್ನು ಬಿದ್ದಿದ್ದಾರೆ. ಇಲ್ಲಿ ವರ್ಗಾವಣೆ ಬೆನ್ನು ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡವರ ಪಟ್ಟಿ ಮಾಡುತ್ತ ಹೋದರೆ ಮುಗಿಯುವುದೇ ಇಲ್ಲ. ಸರ್ಕಾರದ ನೀತಿ, ನಿಯಮಗಳನ್ನು ಗಾಳಿಗೆ ತೂರಿ ಪ್ಯಾಕೇಜ್ ರೀತಿಯಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದು ಸ್ಪಷ್ಟ.
ಹೀಗಾಗಿ ರುದ್ರೇಶ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲಿ ಕೇವಲ ಬೆಳಗಾವಿ ತಹಶೀಲ್ದಾರ ಕಚೇರಿ ಅಷ್ಟೇ ಅಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇಲ್ಲಿಯವರೆಗ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಆಳವಾದ ತನಿಖೆ ನಡೆಸಬೇಕಾದ ಅನಿವಾರ್ಯತೆ ಇದೆ. ತನಿಖೆಗೆ ಮುಂದಾದರೆ ದಾಖಲೆಗಳು ರಾಶಿ ರಾಶಿಯಾಗಿ ಬಂದು ಬೀಳುತ್ತವೆ.
ಮಾಡಿದ್ದುಣ್ಣೊ ಮಾರಾಯ ಎನ್ನುವ ಮಾತನ್ನು ಹಿರಿಯರು ಹಾಗೇ ಸುಮ್ಮನೆ ಹೇಳಿಲ್ಲ. ಕೆಲವೊಂದು ಘಟನೆಗಳನ್ನು ನೆನಪಿಸಿಕೊಂಡು ಅಳೆದು ತೂಗಿದರೆ ಮೇಲಿನ ಮಾತಿನಲ್ಲಿ ಸತ್ಯವಿದೆ ಎನ್ನುವುದು ಗೊತ್ತಾಗುತ್ತದೆ. ಸಧ್ಯ ಬೆಳಗಾವಿಯಲ್ಕಿ ನಡೆದ ಬೆಳವಣಿಗೆ ಗಮನಿಸಿದರೆ ಹಿರಿಯರ ಆ ಮಾತುಗಳಲ್ಲಿ ಅರ್ಥವಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. . ಮತ್ತೊಂದು ಸಂಗತಿ ಎಂದರೆ, ರಾಜಕಾರಣದಲ್ಲಿ ಇದ್ದವರು ತಗ್ಗಿ ಬಗ್ಗಿ ಹೋಗಬೇಕು. ಅದನ್ನು ಬಿಟ್ಟು ಅಧಿಕಾರದ ದರ್ಪ ಮತ್ತು ದುಡ್ಡಿದೆ ಎನ್ನುವ ಒಂದೇ ಕಾರಣಕ್ಕೆ ಆನೆ ನಡೆದಿದ್ದೆ ದಾರಿ ಎಂದು ಹೊರಟರೆ ಮುಗ್ಗರಿಸುವುದು ಗ್ಯಾರಂಟಿ ಈಗ ನಡೆಯುತ್ತಿರುವುದು ಸಹ ಅದೇ. ಇಲ್ಲಿ ಸುತ್ತು ಬಳಸಿ ಮಾತು ಬೇಡ. ನೇರವಾಗಿ ವಿಷ್ಯಕ್ಕೆ ಬರೋಣ.
ಬೆಳಗಾವಿ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಎಂಬುವರು ಅದೇ ತಹಶೀಲ್ದಾರ ಕಚೇರಿ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ಸಾರೆ. ಅವರ ಆತ್ಮಹತ್ಯೆ ಪ್ರಕರಣದ ನಂತರ ಸಚಿವರ ಆಪ್ತರ ಕರ್ಮಕಾಂಡಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇಲ್ಲಿ ಪಿಎಗಳು ನಡೆಸುವ ವಸೂಲಿ ಕೆಲಸಗಳು ಸಚಿವರಿಗೆ ಗೊತ್ತಿಲ್ಲ ಎಂದೇನಿಲ್ಲ. ಪಿಎಗಳ ಕಾರುಬಾರು ಬಗ್ಗೆ ಮತ್ತೊಂದು ಎಪಿಸೋಡಲ್ಲಿ ಓದುಗರ ಮುಂದೆ ತೆರೆದಿಡುವ ಕೆಲಸವನ್ನು ನಿಮ್ಮ E belagavi ಮಾಡುತ್ತದೆ.
Somu dodwad..
ಸಚಿವ ಸತೀಶ್ ಜಾರಕಿಹೊಳಿ ಏನಂದ್ರು?
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ರುದ್ರೇಶನಿಗೆ ತಹಶೀಲ್ದಾರ ಕಚೇರಿಯಲ್ಲಿ ಯಾವುದೇ ನಿರ್ದಿಷ್ಟ ಕೆಲಸ ಕೊಟ್ಟಿರಲಿಲ್ಲ. ಇಲ್ಲಿ ಆದಾಯ ಬರುವಂತಹ ಟೇಬಲ್ ವರ್ಕ ಕೊಡಲು ಎರಡು ಲಕ್ಷ ರೂ.ವನ್ನು ಕೇಳಿದ್ದರಂತೆ. ಅದನ್ನು ಕೇಳಿದ್ದು ಸಚಿವೆ ಹೆಬ್ಬಾಳಕರ ಆಪ್ತ ಎನ್ನಲಾದ ಸೋಮು ದೊಡವಾಡ ಅಂತೆ. ಅಷ್ಟೇ ಅಲ್ಲ ಈ ಹಣವನ್ನು ಹಿಂಡಲಗಾ ಗಣಪತಿ ಮಂದಿರ ಬಳಿ ಬಂದು ಅವರು ತೆಗೆದುಕೊಂಡು ಹೋಗಿದ್ದರು ಎನ್ನುವುದನ್ನು ಸ್ವತಃ ರುದ್ರೇಶ ಮಾಧ್ಯಮದವರಿಗೆ ಮಾತನಾಡುವಾಗ ಹೇಳಿದ್ದನು. ಅದು ರಿಕಾರ್ಡ ಕೂಡ ಆಗಿದೆ. ಇನ್ನೇನು ದುಡ್ಡು ಕೊಟ್ಟರೆ ಬೇಕಿದ್ದ ಕೆಲಸ ಸಿಕ್ಕೇಬಿಟ್ಟಿತು ಎನ್ನುವ ಖುಷಿಯಲ್ಲಿದ್ದ ರುದ್ರೇಶನಿಗೆ ನಿರಾಶೆಯಾಯಿತೇ ಹೊರತು ಖುಷಿಯಂತೂ ಆಗಲಿಲ್ಲ. ಇಲ್ಲಿ ದುಡ್ಡು ತೆಗೆದುಕೊಂಡವರು ಕೈ ಎತ್ತಿ ಬಿಟ್ಟರು.
ಹಣ ಕೊಡಿ ಎಂದ್ರೆ..! ಇದರಿಂದ ಬೇಸತ್ತ ರುದ್ರೇಶ ಕೊಟ್ಟ ಹಣ ವಾಪಸ್ಸು ಕೊಡಬೇಕು ಎಂದು ದುಂಬಾಲು ಬಿದ್ದನು. ಈ ಹಿನ್ನೆಲೆಯಲ್ಲಿ ಸಚಿವೆ ಹೆಬ್ಬಾಳಕರ ಹೆಸರಿನ ಮೇಲೆ ಮೆರೆಯುತ್ತಿದ್ದ ಸೋಮು ನೇರವಾಗಿ ತಹಶೀಲ್ದಾರ ಗೆ ಹೇಳಿ ಜಿಲ್ಲಾಧಿಕಾರಿಗಳ ಮೂಲಕ ಸವದತ್ತಿಗೆ ವರ್ಗ ಮಾಡಿಸಿದ್ದರು.
ಈ ಹಿನ್ನೆಲೆಯಲ್ಲಿ ತನಗಾದ ಅನ್ಯಾಯದ ಬಗ್ಗೆ ಸಚಿವೆ ಹೆಬ್ಬಾಳಕರ ಗಮನಕ್ಕೆ ತರಲು ರುದ್ರೇಶ ಮನೆಯತ್ತ ಹೋದರೆ ಅಲ್ಲಿರುವ ಗನ್ ಮ್ಯಾನ್ ಗಳು ಅವನನ್ನು ಹತ್ತಿರಕ್ಕೂ ಬಿಟ್ಟು ಕೊಡಲಿಲ್ಲ.ಈ ಎಲ್ಲ ಕಾರಣದಿಂದ ಮನನೊಂದ ರುದ್ರೇಶ ನೇರವಾಗಿ ತಹಶೀಲ್ದಾರ ಕಚೇರಿ ಸಿಬ್ಬಂದಿಗಳ ವಾಟ್ಸಪ್ ಗ್ರುಪಗೆ ಪೋಸ್ಟ್ ಮಾಡಿದ್ದನು. ನನ್ನ ಸಾವಿಗೆ ತಹಶೀಲ್ದಾರ ಬಸವರಾಜ ನಾಗರಾಳ, ಸಚಿವೆ ಪಿಎ ಸೋಮು ದೊಡವಾಡ ಮತ್ತು ಅಶೋಕ ಕಬ್ಬಲಿಗೇರ ಕಾರಣ ಎಂದು ಉಲ್ಲೇಖ ಮಾಡಿದ್ದನು.
ವೈರಲ್ ಅಗುತ್ತಿರುವ ಸೋಮು ದೊಡವಾಡ ಪೊಟೊ.
ಸಚಿವರಿಗೆ ಗೊತ್ತೇ ಇರಲಿಲ್ಲವಾ? ಇಲ್ಲಿ ಪಿಎ ಎಂದು ಹೇಳಿಕೊಳ್ಳುವ ಸೋಮು ದೊಡವಾಡ ಏನೇನು ಮಾಡುತ್ತಾನೆ? ಎಲ್ಲೆಲ್ಲಿ ವಸೂಲಿ ಮಾಡುತ್ತಾನೆ ಎನ್ನುವುದು ಸಚಿವೆಗೆ ನಿಜವಾಗಿಯೂ ಗೊತ್ತಿರಲಿಲ್ಲವೇ? ಇಂತಹ ಪ್ರಶ್ನೆಯನ್ನು ಮುಂದಿಟ್ಡುಕೊಂಡು ಹೋದರೆ ಸಾಧ್ಯವೇ ಇಲ್ಲ. ಎಲ್ಲವೂ ಅವರ ಮೂಗಿನೇರಕ್ಕೆ ನಡೆಯುತ್ತವೆ ಎನ್ನುವ ಮಾತುಗಳು ಅವರ ಜೊತೆಗೆ ಇರುವವರೇ ಹೇಳುತ್ತಾರೆ.
ಇದನ್ನು ಬಿಡಿ .ಸಚಿವೆ ಹೆಬ್ಬಾಳಕರ ಅವರ ಹಿಡಿತದಲ್ಲಿರುವ ಇಲಾಖೆಯಲ್ಲಿ ಎಲ್ಲವೂ ಕಾನೂನು ಪ್ರಕಾರವಾಗಿ ನಡೆಯುತ್ತಿವೆಯೇ ಎಂದು ಕೇಳಿದರೆ, ಕರ್ಮಕಾಂಡದ ನಾಲ್ಕುನೂರಕ್ಕೂ ಹೆಚ್ಚು ದಾಖಲೆಗಳು ಮುಂದೆ ಬಂದು ಬೀಳುತ್ತವೆ. ಅವು ಅಧಿಕೃತ ವಾದ ದಾಖಲೆಗಳು.
ಹೀಗಾಗಿ ತಹಶೀಲ್ದಾರ ಕಚೇರಿಯ ರುದ್ರೇಶ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕಾದ ಅನುವಾರ್ಯತೆ ಇದೆ. ಅದು ಆದರೆ ಮಾತ್ರ ರುದ್ರೇಶನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಲ್ಲದಿದ್ದರೆ.ಇಂದು ರುದ್ರೇಶ..ನಾಳೆ.. ಎನ್ನುವ ಆತಂಕ ಇದ್ದೇ ಇದೆ.