
ಸಾಂಗಲಿಯಲ್ಲಿ ಬೆಳಗಾವಿ ಬಿಜೆಪಿ ನಗರಸೇವಕರ ಹವಾ…!
ಮಹಾರಾಷ್ಟ್ರದಲ್ಲೂ ಸ್ವಚ್ಚತಾ ಅಭಿಯಾನದಲ್ಲಿ ಅಭಯ ಪಾಟೀಲ. ಸಾಂಗಲಿಯಲ್ಲಿ ನಗರಸೇವಕರೊಂದಿಗೆ ಸ್ವಚ್ಚತೆಯಲ್ಲಿ ಭಾಗಿ. ವೃತ್ತ ಕ್ಲೀನ್ ಮಾಡಿ ಬಣ್ಣ ಬಳಿದ ನಗರಸೇವಕರು. ಸ್ವಚ್ಚತೆ, ಪ್ರಚಾರದಲ್ಲಿ ಮೂವರು ಮಹಿಳಾ ನಗರಸೇವಕರು ಭಾಗಿ ಚುನಾವಣೆ ಪ್ರಚಾರದಲ್ಲಿ ವಿನೂತನ ಕಾರ್ಯದ ಮೂಲಕ ಜನಮನ ಗೆದ್ದ ಅಭಯ ಪಾಟೀಲ. ಬೆಳಗಾವಿ. ಸ್ವಚ್ಚತೆ ವಿಷಯದಲ್ಲಿ ರಾಜಿ ಇಲ್ಲ ಎನ್ನುವ ಮನೋಭಾವನೆ ಹೊಂದಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಮಹಾರಾಷ್ಟ್ರದ ಸಾಂಗಲಿಯಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. ಬಿಜೆಪಿ ಹೈಕಮಾಂಡ ಈಗ ಶಾಸಕ ಅಭಯ ಪಾಟೀಲರಿಗೆ…