ಮಹಾರಾಷ್ಟ್ರದಲ್ಲೂ ಸ್ವಚ್ಚತಾ ಅಭಿಯಾನದಲ್ಲಿ ಅಭಯ ಪಾಟೀಲ.
ಸಾಂಗಲಿಯಲ್ಲಿ ನಗರಸೇವಕರೊಂದಿಗೆ ಸ್ವಚ್ಚತೆಯಲ್ಲಿ ಭಾಗಿ. ವೃತ್ತ ಕ್ಲೀನ್ ಮಾಡಿ ಬಣ್ಣ ಬಳಿದ ನಗರಸೇವಕರು.
ಸ್ವಚ್ಚತೆ, ಪ್ರಚಾರದಲ್ಲಿ ಮೂವರು ಮಹಿಳಾ ನಗರಸೇವಕರು ಭಾಗಿ
ಚುನಾವಣೆ ಪ್ರಚಾರದಲ್ಲಿ ವಿನೂತನ ಕಾರ್ಯದ ಮೂಲಕ ಜನಮನ ಗೆದ್ದ ಅಭಯ ಪಾಟೀಲ.
ಬೆಳಗಾವಿ.
ಸ್ವಚ್ಚತೆ ವಿಷಯದಲ್ಲಿ ರಾಜಿ ಇಲ್ಲ ಎನ್ನುವ ಮನೋಭಾವನೆ ಹೊಂದಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಮಹಾರಾಷ್ಟ್ರದ ಸಾಂಗಲಿಯಲ್ಲಿಯೂ ಅದನ್ನು ಮುಂದುವರೆಸಿದ್ದಾರೆ.

ಬಿಜೆಪಿ ಹೈಕಮಾಂಡ ಈಗ ಶಾಸಕ ಅಭಯ ಪಾಟೀಲರಿಗೆ ಈಗ ಮಹಾರಾಷ್ಟ್ರ ದಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಉಸ್ತುವಾರಿ ವಹಿಸಿದೆ.

ಅದರಲ್ಲೂ ಸಾಂಗಲಿ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಅಭಯ ಪಾಟೀಲರು, ಕಳೆದ ಹಲವು ದಿನಗಳಿಂದ ಅಲ್ಲಿಯೇ ಬೀಡು ಬಿಟ್ಟು ಕ್ಷೇತ್ರದಲ್ಲಿ ಸಂಘಟನೆ ನಡೆಸುತ್ತಿದ್ದಾರೆ.

ಈಗ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ಆಯ್ದ ನಗರಸೇವಕರನ್ನು ಕರೆದುಕೊಂಡು ಪ್ರಚಾರದ ಭರಾಟೆಯನ್ನು ಅವರು ತೀವೃಗೊಳಿಸಿದ್ದಾರೆ.

ಇಂದು ಬೆಳ್ಳಂ ಬೆಳಿಗ್ಗೆಯೇ ಸಾಂಗಲಿ ವೃತ್ತವನ್ನು ಕ್ಲೀನ್ ಮಾಡುವುದು ಅಷ್ಟೇ ಅಲ್ಲ ಅದಕ್ಕೆ ಬಣ್ಣ ಬಳಿಯುವ ಕೆಲಸ ಮಾಡಿದರು. ಈ ಕಾರ್ಯ ಕ್ಕೆ ಸಾಂಗಲಿ ಜನ ಫುಲ್ ಖುಷ್ ಆದರು.

ಇದರ ಜೊತೆಗೆ ಪೇಜ್ ಪ್ರಮುಖರು ಸೇರಿದಂತೆ ಶಕ್ತಿ ಕೇಂದ್ರದ ಜೊತೆ ಸಭೆ ನಡೆಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ ಬೆಳಗಾವಿ ಮಹಾನಗರ ಪಾಲಿಕೆಯ ಮಹಿಳಾ ನಗರ ಸೇವಕಿಯರಾದ ವಾಣಿ ಜೋಶಿ, ವೀಣಾ ವಿಜಾಪುರೆ, ಸಾರಿಕಾ ಪಾಟೀಲ ಸೇರಿದಂತೆ ಆಡಳಿತ ಪಕ್ಷದ ನಾಯಕ ಗಿರೀಶ ಧೋಂಗಡಿ , ಅಭಿಜುತ್ ಜವಳಕರ, ಜಯಂತ ಜಾಧವ, ನಿತಿನ್ ಜಾಧವ ಮುಂತಾದವರು ಸಾಂಗಲಿಯಲ್ಲಿ ಬೀಡುಬಿಟ್ಟಿದ್ದಾರೆ.