ಬೆಳಗಾವಿ.
ಇಡೀ ರಾಜ್ಯವ್ಯಾಪಿ ಕೋಲಾಹಲ ಸೃಷ್ಡಿಸಿದ್ದ ಬೆಳಗಾವಿ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ತನಿಖಾಧಿಕಾರಿ ಈಗ ಹಠಾತ್ ಬದಲಾಗಿದ್ದಾರೆ.
ಖಡೇಬಜಾರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.ಸಹಜವಾಗಿ ಇದನ್ನು ಅಲ್ಲಿನ ಸಿಪಿಐ ಶ್ರೀಶೈಲ ಗಾಬಿ ತನಿಖೆ ನಡೆಸುತ್ತಿದ್ದರು.

ಆದರೆ ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸ್ ಆಯುಕ್ತರು ತನಿಖೆ ಹೊಣೆಯನ್ನು ಎಸಿಪಿ ಶೇಖರ್ ಅವರಿಗೆ ವಹಿಸಿದ್ದಾರೆ.
ಈ ಆತ್ಮಹತ್ಯೆ ಪ್ರಕರಣದಲ್ಲಿ ಗೆಜೆಟೆಡ್ ಅದಿಕಾರಿಯಾಗಿರುವ ತಹಶೀಲ್ದಾರ ಬಸವರಾಜ ನಾಗರಾಳ, ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತ ಸೋಮು ದೊಡವಾಡ ಮತ್ತು ಅಶೋಕ ಕಬ್ಬಲಿಗೇರ ಹೆಸರು ಪ್ರಸ್ತಾಪವಾಗಿತ್ತು. ಈ ಮೂವರ ಹೆಸರಿನ ಮೇಲೆ ಖಡೇಬಜಾರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಈಗ ತನಿಖೆಯ ಹಂತದಲ್ಲಿ ಹಠಾತ್ ಆಗಿ ತನಿಖಾಧಿಕಾರಿ ಬದಲಾವಣೆಯಾಗಿದ್ದು ಒಂದು ರೀತಿಯ ಚರ್ಚೆಗೆ ಕಾರಣವಾಗಿದೆ.