ಸಾಂಗಲಿಯಲ್ಲಿ‌ ಮುಂದುವರೆದ ಮತಬೇಟೆ…

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ.

ನಗರಸೇವಕರಿಂದ ಮತಬೇಟೆ‌

ಬಿಜೆಪಿ ಅಭ್ಯರ್ಥಿ ಪರ ವಾಲುತ್ತಿರುವ ಮತದಾರರು

ಸಾಂಗಲಿ.
ಕಳೆದ ಹಲವು ದಿನಗಳಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಬಿಜೆಪಿ ಪರ ಮತಬೇಟೆ ಭರ್ಜರಿಯಾಗಿ ಮುಂದುವರೆದಿದೆ.
ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿಯ ಕೆಲ‌ ನಗರಸೇವಕರು ಸೇರಿದಂತೆ ಕಾರ್ಯಕರ್ತರು ಸಾಂಗಲಿಯಲ್ಲಿಯೇ ಬೀಡು ಬಿಟ್ಟು ಮತಬೇಟೆ ಶುರುವಿಟ್ಟುಕೊಂಡಿದ್ದಾರೆ.


ಪ್ರತಿದಿನ ಬೆಳ್ಳಂ ಬೆಳಿಗ್ಗೆ ಸಾಂಗಲಿಯ ಪ್ರಮುಖ ವೃತ್ತಗಳಲ್ಲಿ ಸ್ವಚ್ಚತಾ ಅಭುಯಾನ ಕೂಸ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಡೆದಿದೆ.
ಇದೆಲ್ಲದರ ನಡುವೆ ಬೆಳಗಾವಿ ಪಾಲಿಕೆ ನಗರಸೇವಕಿ ವಾಣಿ ವಿಲಾಸ ಜೋಶಿ ಅವರು ಸ್ಥಳೀಕರೊಂದಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಸುಧೀರ ದಾದಾ ಗಾಡಗೀಳ ಅವರ ಮತ ಮತಯಾಚನೆಯನ್ನು ಚುರುಕುಗೊಳಿಸಿದ್ದಾರೆ.
ಮಹಿಳಾ ಸಬಲೀಕರಣ ಸೇರಿದಂತೆ 22 ಗ್ರಾಮಗಳ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿರುವ ಯರಲಾ ಎನ್‌ಜಿಒ ನಡೆಸುತ್ತಿರುವ ಶ್ರೀಮತಿ ಸುಜಾತಾ ತಾಯಿ ದೇಶಪಾಂಡೆ ಅವರನ್ನು ವಾಣಿ ಜೋಶಿ ಭೆಟ್ಟಿ‌ಮಾಡಿ ಮತಯಾಚನೆ ಮಾಡಿದರು.


ದುಡಿಯುವ ಮಹಿಳೆಯರಿಗೆ ಶಕ್ತಿ ತುಂಬಲು ಬಿಜೆಪಿಗೆ ಮತ ಚಲಾಯಿಸುವಂತೆ ಮನಬಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!