
ನಡುರಸ್ತೆಯಲ್ಲೇ ಸೀರೆ ಎಳೆದ ಕಿರಾತಕರು..!
ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ, ವೃದ್ಧೆಯ ಬ್ಲೌಸಹರಿದ ಕಿರಾತಕರು. ರಕ್ಷಣೆ ಕೊಡುವಂತೆ ತಾಯಿ, ಮಗಳ ಮನವಿ ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ಅಮಾನವೀಯ, ಹೇಯ ಘಟನೆಯೊಂದು ನಡೆದಿದೆ. ಒಂದು ರೀತಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಇದಾಗಿದೆ. ಬೆಳಗಾವಿಯ ವಡ್ಡರವಾಡಿಯಲ್ಲಿ ದುರುಳರು ಮಹಿಳೆಯೊಬ್ಬಳ ಸೀರೆ ಎಳೆದು ಅಟ್ಟಹಾಸ ಮೆರೆದಿದ್ದಾರೆ. ಮಗಳು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಳೆಂದು ಆರೋಪಿಸಿ ಕೆಲವರು ಮನೆಗೆ ನುಗ್ಗಿ ತಾಯಿ, ಮಗಳ ಮೇಲೆ ಹಲ್ಲೆ ಮಾಡಿದರು. ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ಮಾಡಲಾಗಿದೆ….