Headlines

ಬೆಳಗಾವಿಯಲ್ಲಿ VHP ಪ್ರತಿಭಟನೆ


ವಿಎಚ್ ಪಿ ಪ್ರತಿಭಟನೆ: ಸ್ವಾಮೀಜಿ ಬಿಡುಗಡೆ ಆಗ್ರಹ

ಬೆಳಗಾವಿ:

ಬಾಂಗ್ಲಾದೇಶದ ಸರ್ಕಾರ ಇಸ್ಕಾನ್ ಮಂದಿರದ ಚಿನ್ಮಯ್ ಕೃಷ್ಣದಾಸ್‌ ಶ್ರೀಗಳನ್ನು ಬಂಧಿಸಿರುವ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಇಲ್ಲಿನ ಚೆನ್ನಮ್ಮ ಸರ್ಕಲ್ ನಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆ ಮುಖಂಡರು, ಕಾರ್ಯಕರ್ತರು, ಬಾಂಗ್ಲಾ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿ, ಇಸ್ಕಾನ್ ಶ್ರೀಗಳನ್ನು ಬಿಡುಗಡೆಗೊಳಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾನಿರತ ನ್ಯಾಯವಾದಿ ಜಯಶ್ರೀ ಮಂಡ್ರೊಳಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದ ಚಿನ್ಮಯ್ ಕೃಷ್ಣದಾಸ್ ಶ್ರೀಗಳನ್ನು ಕಾರಣವಿಲ್ಲದೇ ಬಂಧಿಸಿ ಕಾರಾಗೃಹದಲ್ಲಿ ಇಡಲಾಗಿದೆ. ಹೀಗಾಗಿ, ಹೊರ ದೇಶಗಳಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲ ಹಿಂದೂಗಳು ಒಗ್ಗಟ್ಟಾಗಬೇಕೆಂದು ಕರೆ ನೀಡಿದರು.
ಬಾಂಗ್ಲಾದ ಪ್ರಧಾನಿ ಮೊಹಮ್ಮದ್ ಯೂನಿಸ್ ಅವರು ಇಸ್ಕಾನ್ನ ಚಿನ್ಮಯ್ ಕೃಷ್ಣದಾಸ್ ಅವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆ. ಎಲ್ಲ ಸ್ವಾಮೀಜಿಗಳು ರಸ್ತೆಗಳಿದರೆ ನಿಮ್ಮ ಗತಿ ಏನಾಗುತ್ತಿತ್ತು ಎಂಬುದನ್ನು ಯೋಚಿಸಿ ಎಂದು ಆಕ್ರೋಶ ಹೊರಹಾಕಿದರು, ಪ್ರಧಾನ ಮಂತ್ರಿ ಮೋದಿ ಅವರು ಕೂಡಲೇ ಶ್ರೀಗಳ ಬಿಡುಗಡೆ ಗೊಳಿಸಬೇಕೆಂದು ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಬೇಕು. ಹಿಂದೂಗಳ ಮತದಿಂದ ಆರಿಸಿ ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳ ಕಗ್ಗೋಲೆಯನ್ನು ತಪ್ಪಿಸಬೇಕು. ಯುಕ್ರೇನನ್ಲಲಿ ಶಾಂತಿ ಸ್ಥಾಪನೆಗೆ ಮುಂದಾಗುವ ಪ್ರಧಾನಿ ಮೋದಿಯವರು ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗೂ ಮುಂದಾಗಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಕೃಷ್ಣ ಭಟ್ ಒತ್ತಾಯಿಸಿದರು.
ಶಿವಾಪುರ ಮುಪ್ಪಿನಮಠ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬಂಧನದಲ್ಲಿರುವ ಚಿನ್ಮಯ ಕ್ರಷ್ಣದಾಸ ಸ್ವಾಮೀಜಿಯವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಸ್ವಾಮೀಜಿಗಳೆಲ್ಲರೂ ಬೀದಿಗಿಳಿಯಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆ ಮಾಡಿ, ಬಾಂಗ್ಲಾ ದೇಶದ ಪ್ರಧಾನಿ ಯುನೂಸ್ ಅವರ ಕಿವಿ ಹಿಂಡುವ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಬೇಕೆಂದರು.
ವಿಶ್ವ ಹಿಂದೂ ಪರಿಷತ್ ನ ವಿಜಯ ಜಾಧವ ಮಾತನಾಡಿ, ಬಾಂಗ್ಲಾ ಹಿಂದುಗಳ ಬೆನ್ನೆಲುಬಾಗಿರುವ ಕ್ರಷ್ಣದಾಸ ಪ್ರಭು ಸ್ವಾಮೀಜಿಯವರ ಬಿಡುಗಡೆಗೆ ಭಾರತದ ಸಂತರೆಲ್ಲಾ ಒಂದಾಗಿ ಪ್ರತಿಭಟನೆ ಮಾಡಬೇಕೆಂದು ಕರೆ ನೀಸಿದರು.
ವಿವಿಧ ಮಠಾಧೀಶರು, ವಿಶ್ವ ಹಿಂದೂ ಪರಿಷತ್ತಿನ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!