Headlines

20 ವರ್ಷ ಶಿಕ್ಷೆ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸುಗಿದ ಆರೋಪಿಗೆ ಜಿಲ್ಲಾ ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕುಡಚಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಬಂದು ೨೦೨೦ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ದೂರುದಾರನ ಅಪ್ರಾಪ್ತ ವಯಸ್ಸಿನ ಮಗಳನ್ನು ಆರೋಪಿತ ಅಜೀತ ಸಹದೇವ ಪಾಟೀಲ ವಯಸ್ಸು 27 ವರ್ಷ ಸಾ ಮೋರಬ ತಾ: ರಾಯಬಾಗ ಇವನು ಆಗಾಗ ಬಾಲಕಿಯ ಮನೆಗೆ ಬಂದು ಆಕೆಯೊಂದಿಗೆ ಸಲುಗೆಯಿಂದ ಮಾತನಾಡಿಸುತ್ತಿದನು ಪುಸಲಾಯಿಸಿ ಅವಳ ಮನೆಯಲ್ಲಿದ್ದ 3000/- ತೆಗೆದುಕೊಡು ಮೈ ಮೇಲೆ ಇದ್ದ ಕಿವಿಯ ಬಂಗಾರ ಅರ್ದ ತೋಲೆಯ ಓಲೆ ಅಪಹರಣ ಮಾಡಿದ್ದಾನೆ.


ನಂತರ ಬಾಲಕಿಯನ್ನು ಕರೆದು ಹೋಗಿ ಅವಳೊಂದಿಗೆ ಒತ್ತಾಯದಿಂದ ಅತ್ಯಾಚಾರ ಮಾಡಿದ್ದಾನೆ. ನಂತರ ಅವಳ ಮನೆಯಲ್ಲಿ ಯಾರು ಸಮಯದಲ್ಲಿ ಹೋಗಿ ಅವಳಿಗೆ ನಾನು ನಿನಗೆ ಮದುವೆ ಆಗುತ್ತೆನೆ ಅಂತಾ ಹೇಳಿ ನಂಬಿಸಿ ಹಲವಾರು ಬಾರಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ.
ಈ ಅಪರಾಧಕ್ಕಾಗಿ ತನಿಖಾಧಿಕಾರಿಯಾದ ಕೆ ಎಸ ಹಟ್ಟಿ ರವರು ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ಸಿ. ಎಂ. ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 35 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 46 ದಾಖಲೆಗಳು, ಹಾಗೂ ಮುದ್ದೆಮಾಲಗಳ ಆಧಾರದ ಮೇಲಿಂದ ಆರೋಪಿ ಅಜೀತ ಸಹದೇವ ಪಾಟೀಲ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನು 20 ವರ್ಷಗಳ ಕಠಿಣ ಕಾರಾಗೃಹ ರೀಕ್ಷೆ & ರೂ 10,000/- ರೂಪಾಯಿ ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ 1ಲಕ್ಷ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್. ವಿ ಪಾಟೀಲ ಇವರು ಹಾಜರಾಗಿ ಪ್ರಕರಣವನ್ನು ನಡೆಸಿ ಹಾಗೂ ವಾದ ಮಂಡಿಸಿದರು.

Leave a Reply

Your email address will not be published. Required fields are marked *

error: Content is protected !!