ಸರ್ಕಾರದ ಯಾವುದೇ ಬೆದರಿಕೆಗೆ ಮಣಿಯಲ್ಲ, ಹೋರಾಟ ಮುಂದುವರಿಯುತ್ತದೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚನಸಾಲಿಗಳ ಮೇಲೆ ಗುಂಡು ಹಾರಿಸುವ ಮನಸ್ಥಿತಿಯಲ್ಲಿತ್ತು ಎಂದು ಪಂಚಮಸಾಲಿ ಹೋರಾಟದ ಮುಖಂಡತ್ವವಹಿಸಿದ್ದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ನಗರದ ಚನ್ನಮ್ಮವೃತ್ತದಲ್ಲಿಬತಮ್ಮನ್ನು ಭೆಟ್ಟಿಯಾದ ಸುದ್ದಿಗಾರರೊಂದಿಗೆ ಅವರು ಮಸತನಾಡಿದರು ತಮ್ಮನ್ನು ಭೇಟಿಯಾಗಲು ಮುಖ್ಯಮಂತ್ರಿ ಹೇಳಿ ಕಳಿಸಿದ ಕಾರಣ ಅಲ್ಲಿಗೆ ಹೋಗುವಾಗ ಲಾಠಿಚಾರ್ಜ್ ಮಾಡಲಾಗಿದೆ, ಅವರೇನೇ ಮಾಡಿದರೂ ತಮ್ಮ ಹೋರಾಟ ನಿಲ್ಲಲ್ಲ ಎಂದು ಸ್ವಾಮಿಜಿ ಹೇಳಿದರು.
ಪ್ರತಿಭಟನೆಯ ಮುಂದುವರಿದ ಭಾಗವಾಗಿ ಡಿಸೆಂಬರ್ 12 ರಂದು ಪಂಚಮಸಾಲಿ ಸಮುದಾಯದವರು ತಾವಿರುವ ಹಳ್ಳಿ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾಕೇಂದ್ರಗಳಲ್ಲಿ ರಾಸ್ತಾರೋಕೋ ಮಾಡುತ್ತಾರೆ, ಹೋರಾಟದ ಮುಂದಿನ ಹಂತವನ್ನು ಅವತ್ತು ಪ್ರಕಟಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
[ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರದಲ್ಲಿರುವ ನಮ್ಮದೇ ಸಮಾಜದ ಕೆಲ ಕಿಡಿಗೇಡಿಗಳು ಮಾಡಿಸಿದ ಕೆಲಸವಿದು. ಮುಂದಿನ ಹೋರಾಟದ ಬಗ್ಗೆ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ” ಬಸನಗೌಡ ಪಾಟೀಲ ಯತ್ನಾಳ. ಶಾಸಕರು, ವಿಜಯಪುರ.
ಕಾಂಗ್ರೆಸ್ ಆಡಳಿತವನ್ನು ಸಮುದಾಯ ನೆನಪಿಟ್ಟುಕೊಳ್ಳುತ್ತದೆ. ಅದಕ್ಕೆ ತಕ್ಕ ಶಾಸ್ತಿ ಕಲಿಸುತ್ತದೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಪರವಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಬೇರೆ ಸಮಾಜಕ್ಕೆ ಮೀಸಲಾತಿ ಇದೆ. ಆದರೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಏಕೆ ಮೀಸಲಾತಿ ಇಲ್ಲ ಎಂದು ಕೇಳುತ್ತಿದ್ದೇವೆ”
ಅರವಿಂದ ಬೆಲ್ಲದ.ಶಾಸಕರು
—–+++++
ಪಂಚಮಸಾಲಿ ಮೀಸಲಾತಿ ಹೋರಾಟಗಾರರನ್ನು ಮಾತುಕತೆಗೆ ಬನ್ನಿ ಅಂತ 10 ಜನ ಪ್ರಮುಖರನ್ನು ನಾನು ಕರೆದಿದ್ದೆ. ಆದ್ರೆ ಅವರು ಯಾರೂ ಬರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಅವರ ಹಕ್ಕು. ಪ್ರತಿಭಟನೆ ಮಾಡಲಿ. ನಾವು ವಿರೋಧಿಸುವುದಿಲ್ಲ”