ಭಾರತ ನಕ್ಷೆಯನ್ನೇ ತುಂಡರಿಸಿದ ಕಾಂಗ್ರೆಸ್- ಅಭಯ ಆರೋಪ.

ಬೆಳಗಾವಿ

ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದ ಕಾಂಗ್ರೆಸ್ ಶತಮಾನೋತ್ಸವವನ್ನು ಆಚರಿಸುವ ಭರಾಟೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರತ ನಕ್ಷೆಯನ್ನೇ ತುಂಡರಿಸುವ ಕೆಲಸ ಮಾಡಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ.

ಕಾಂಗ್ರೆಸ್ನವರು ಹಾಕಿದ ಭಾರತದ ನಕ್ಷೆ

ಈ ಮಹಾ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಹಾಕಲಾಗಿದ್ದ ಬ್ಯಾನರಗಳಲ್ಲಿ‌ ಭಾರತ ನಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಮುದ್ರಿಸದೇ ಅದರ ಮೇಲ್ಭಾಗವನ್ನು ತುಂಡರಿಸುವ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಅಷ್ಟೇ ಅಲ್ಲ ಅಂತಹ ತುಂಡರಿಸಿದ ಬ್ಯಾನರ್ ಗಳ ಪೊಟೊವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.‌ಅಷ್ಟೇ ಅಲ್ಲ ಅದನ್ನು ತಕ್ಷಣವೇ‌ ಬದಲಾಯಿಸುವಂತೆಯೂ ಶಾಸಕ ಅಭಯ ಪಾಟೀಲ ಕೋರಿದ್ದಾರೆ.

ಹೀಗಿರಬೇಕು ಬಾರತದ ನಕ್ಷೆ…

ಈ‌ ಹಿಂದೆ ಕೂಡ ಬೆಳಗಾವಿ ಮಹಾನಗರ ಪಾಲಿಕೆ ಅಷ್ಟೆ ಅಲ್ಲ ಸರ್ಕಾರ ಮಟ್ಟದಲ್ಲೂ ಕೂಡ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಕುರಿತು ಅಭಯ ಪಾಟೀಲರು ಪ್ರಸ್ತಾಪ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!