ಶಾ ದೇಶದ ಕ್ಷಮೆ ಕೇಳಲಿ
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ.
2025 ರವರೆಗೆ ವರ್ಷವೀಡಿ ಕಾರ್ಯಕ್ರಮ.
ಮಹಾ ಚುನಾವಣೆ ಬಗ್ಗೆ ಆಯೋಗಕ್ಕೆ ದೂರು.
ಬೆಳಗಾವಿ
ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಬೆಳಗಾವಿಯ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾಜರ್ುನ ಖಗರ್ೆ ನೇತೃತ್ವದಲ್ಲಿ ಕಾಂಗ್ರೆಸ್ ವಿಸ್ತೃತ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಹಲವು ಮಹತ್ವದ ತೀಮರ್ಾನ ತೆಗೆದುಕೊಂಡಿದೆ.

ಡಾ, ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಕ್ಷಮೆ ಕೇಳಬೇಕು ಎನ್ನುವುದು ಸೇರಿದಂತೆ ಸಂವಿಧಾನ ಉಳಿಸಿ ಅಂದೋಲನ ನಡೆಸುವ ತೀಮರ್ಾನವನ್ನು ತೆಗೆದುಕೊಳ್ಳಲಾಗಿದೆ.
ಕಾಂಗ್ರೆಸ್ ಇತಿಹಾಸದಲ್ಲಿ ಇವತ್ತು ಯಾವಾಗಲೂ ನೆನಪಿನಲ್ಲಿ ಉಳಿಯುವ ಸಭೆ ಇದಾಗಿದೆ. ಇಡೀ ದೇಶದ ಕಾಂಗ್ರೆಸ್ಸಿಗ್ಗರು ಹೆಮ್ಮೆ ಪಡುವ ಸಂದರ್ಭ ಇದು ಎಂದು ಎಐಸಿಸಿ ಪ್ರಧಾನ ಕಾರ್ಯದಶರ್ಿ ಕೆಸಿ ವೇಣುಗೋಪಾಲ ಹೇಳಿದರು.

ಒಂದು ವರ್ಷ ಬೃಹತ್ ಜನಾಂದೋಲನ ರೂಪಿಸುವ ಕಾರ್ಯಕ್ರಮ ಹಾಗೂ 2025ಕ್ಕೆ ಪಕ್ಷ ಸಂಘಟನೆಯನ್ನು ಉತ್ತೇಜನಗೊಳಿಸುವ ನಿರ್ಣಯ ತೆಗೆದುಕೊಂಡಿದ್ದೇವೆ. ಇದು ತಕ್ಷಣದಿಂದಲೇ ಆರಂಭವಾಗಲಿದೆ ಎಂದು ವೇಣುಗೋಪಾಲ ತಿಳಿಸಿದರು,
ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಮಾತನಾಡಿ, ನಾಳೆ ಶುಕ್ರವಾರ ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಹೆಸರಿನಲ್ಲಿ ಸಮಾವೇಶ ನಡೆಯಲಿದೆ. ಇದು ನಿರಂತರವಾಗಿ ನಡೆಯಲಿದ್ದು, ಜನೆವರಿ 26ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮಸ್ಥಳದಲ್ಲಿ ಮುಕ್ತಾಯ ಆಗಲಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿದ ಮಾತಿಗೆ ದೇಶದ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳುವವರೆಗೆ ನಮ್ಮ ಹೋರಾಟ ನಡೆಯಲಿದೆ. ಅಷ್ಟೇ ಅಲ್ಲ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹವಿದೆ ಎಂದು ಜಯರಾಮ್ ರಮೇಶ್ ಹೇಳಿದರು.
ನಂಬಿಕೆ ಇಲ್ಲ…!
ಏಪ್ರಿಲ್ ತಿಂಗಳಲ್ಲಿ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಲು ಇವತ್ತಿನ ಅಧಿವೇಶನದಲ್ಲಿ ನಿರ್ಣಯ ಪಾಸ್ ಮಾಡಿದ್ದೇವೆ. ಈ ಅಧಿವೇಶನದಲ್ಲಿ ಗಂಭೀರವಾಗಿ ಮತ್ತು ಪಾಸಿಟಿವ್ ರೀತಿಯಲ್ಲಿ ಚಚರ್ೆಯಾಗಿದೆ.
ಚುನಾವಣಾ ಆಯೋಗದ ಕೆಲಸ ಹಿಂದೆ ಬೀಳುತ್ತಿದೆ. ಚುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಉಳಿದಿಲ್ಲ. ಮಹಾರಾಷ್ಟ್ರ ಹರಿಯಾಣಾ ರಾಜ್ಯಗಳ ಚುನಾವಣೆಯಲ್ಲಿ ಬಹಳಷ್ಟು ಲೋಪದೋಷಗಳಾಗಿವೆ. ಹೀಗಾಗಿ, ಚುನಾವಣಾ ಆಯೋಗದ ವಿರುದ್ದ ಸಮರ ಸಾರಲು ಕಾಂಗ್ರೆಸ್ ಮುಂದಾಗಿದೆ.
-ಕೆ.ಸಿ.ವೇಣುಗೋಪಾಲ