ಡಿಸಿಸಿ ಅಧ್ಯಕ್ಷ ಗಾದಿಗೆ ಗುದ್ದಾಟ
ಬೆಳಗಾವಿ ರಾಜಕಾರಣ `ಸರ್ಕಾರಕ್ಕೆ ಕಂಟಕ ?
ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಎಂಟ್ರಿ.ಸತೀಶ್ ಉಗ್ರ.
ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಸತೀಶ್ ಕೋಟೆ ಮುರಿಯಲು ಹೆಬ್ಬಾಳಕರ ಮೂಲಕ ತಂತ್ರಗಾರಿಕೆ.
ಸಿಟಿ ರವಿ ಪ್ರಕರಣದಲ್ಲೂ ಸತೀಶ್ ಮಾತು ಕೇಳದೇ ಯಡವಟ್ಟು ಮಾಡಿಕೊಂಡ ಪೊಲೀಸರು.
ಬೆಳಗಾವಿ.
ಬೆಳಗಾವಿ ಜಿಲ್ಲೆಯವ ಕಾಂಗ್ರೆಸ್ ರಾಜಕಾರಣದಲ್ಲಿ ನಡೆದಿರುವ ಬೆಳವಣಿಗೆ ಎಲ್ಲರಿಗೂ ಗೊತ್ತಿಲ್ಲ ಎಂದಿಲ್ಲ.
ಸಧ್ಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸಚಿವರ ನಡುವೆ ಗುದಮುರಿಗೆ ನಡೆದಿದೆ.
ಮೂಲಗಳ ಪ್ರಕಾರ ಸಚಿವ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ದಕ್ಕಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ ಬೆಳಗಾವಿಯವರೇ ಆದ ಇನ್ನೊಬ್ಬ ಪ್ರಭಾವಿ ಸಚಿವರು ತಮ್ಮ ಕುಟುಂಬದ ಕುಡಿಗೆ ಆಸ್ಥಾನ ಬೇಕು ಎಂದು ಹಠ ಹಿಡಿದಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಕಾರ್ಯಕರ್ತರೇ ಪಕ್ಷದ ಜೀವಾಳ ಎನ್ನುವ ಕೆಪಿಸಿಸಿ ಅಧ್ಯಕ್ಷರು ಬೆಳಗಾವಿ ಡಿಸಿಸಿ ಅಧ್ಯಕ್ಷ ಸ್ಥಾನವನ್ನು ಒಂದು ಕುಟುಂಬದ ಕುಡಿಗೆ ಒಪ್ಪಿಸುವ ಮನಸ್ಥಿತಿಯಲ್ಲಿದ್ದಾರೆಂದು ಹೇಳಲಾಗುತ್ತಿದೆ.
ಬಹುಶಃ ಇದೇ ಕಾರಣದಿಂದ ಈ ಸಮಸ್ಯೆ ಕಳೆದ 6 ತಿಂಗಳಿಂದ ಅಧ್ಯಕ್ಷರಂಗಳದಲ್ಲಿ ಇತ್ಯರ್ಥವಾಗದೇ ಹಾಗೇ ಉಳಿದುಕೊಂಡಿದೆ.

ಡಿಕೆಶಿ ಹಸ್ತಕ್ಷೇಪ..!
ಗಡಿನಾಎ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹಸ್ತಕ್ಷೇಪ ಇಂದು ನಿನ್ನೆಯದಲ್ಲ.!
ಈ ಹಿಂದೆ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಕೂಡ ಹಸ್ತಕ್ಷೇಪ ಮಾಡಿದಾಗ ಅಂದು ರಮೇಶ ಜಾರಕಿಹೊಳಿ ಸಿಡಿದೆದ್ದಿದ್ದರು. ನಂತರದ ದಿನಗಳಲ್ಲಿ ಅದು ಸರ್ಕಾರದ ಪತನದವರೆಗೆ ಹೋಯಿತು.

ಅದಾದ ನಂತರ ಎಲ್ಲವೂ ಸರಿಹೋಗಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಈಗ ಮತ್ತೇ ಬೆಳಗಾವಿಯಲ್ಲಿ ಡಿಕೆಶಿ ಹಸ್ತಕ್ಷೇಪ ಶುರುವಾಗಿದೆ. ಅಚ್ಚರಿಯ ಸಂಗತಿ ಎಂದರೆ, ಇಲ್ಲಿನ ಕೆಲವರು ಜಿಲ್ಲೆಯ ಸಚಿವರ ಬದಲು ಆಡಳಿತದಲ್ಲಿ ಹೊರಗಿನವರ ಮಾತಿಗೆ ಹೆಚ್ಚು ಮಾನ್ಯತೆ ನೀಡುತ್ತಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಈಗ ಅದರ ಬಗ್ಗೆ ಸಚಿವ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ. ಅಷ್ಟೆ ಅಲ್ಲ ಹೈಕಮಾಂಡಗೂ ದೂರು ರವಾನಿಸಿದ್ದಾರೆಂದು ಹೇಳಲಾಗುತ್ತದೆ.
ಬದಲಾವಣೆ ಏಕೆ?
ಈಗ ಅಧ್ಯಕ್ಷರಾಗಿದ್ದ ವಿನಯ ನಾವಲಗಟ್ಟಿ ಅವರು ಗ್ಯಾರಂಟಿ ಸಮಿತಿಅಧ್ಯಕ್ಷರಾಗಿದ್ದಾರೆ, ಚಿಕ್ಕೊಡಿ ಅಧ್ಯಕ್ಷರಾಗಿದ್ದ ಲಕ್ಷ್ಮಣ ಚಿಂಗಳೆ ಅವರುಬೂಡಾ ಅಧ್ಯಕ್ಷರಾಗಿದ್ದಾರೆ,
ಹೀಗಾಗಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ಉದ್ದೇಶದಿಂದ ಈ ಎರಡೂ ಸ್ಥಾನಗಳಿಗೆ ಬೇರೆಯವರನ್ನು ನೇಮಕ ಮಾಡಲಾಗುತ್ತಿದೆ,
ಸತೀಶ್ ಹಿಡಿತ ತಪ್ಪಿಸಲು ಸ್ಕೆಚ್?
ಸಧ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ ಜಾರಕಿಹೊಳಿ ಅವರ ಜಿಲ್ಲಾ ಹಿಡಿತವನ್ನು ತಪ್ಪಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತೆರೆಮರೆಯ ಕಸರತ್ತು ನಡೆಸಿದ್ದಾರೆ ಎನ್ನುವ ಚರ್ಚೆ ಕೂಡ ಜೋರಾಗಿ ನಡೆದಿದೆ
ಬೆಂಗಳೂರು ನಂತರ ಅತಿದೊಡ್ಡ ಜಿಲ್ಲೆ ಎಂಬ ಕೀತರ್ಿಗೆ ಪಾತ್ರವಾಗಿರುವ ಬೆಳಗಾವಿಯಲ್ಲಿ ಈಗ ಜಾರಕಿಹೊಳಿ ಕುಟುಂಬದ ಹಿಡಿತವಿದೆ.

ಒಬ್ಬ ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಮೂವರು ಶಾಸಕರನ್ನು ಈ ಕುಟುಂಬದಲ್ಲಿದ್ದಾರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಒಗ್ಗಟ್ಟಿನಿಂದ ಪ್ರಿಯಾಂಕಾ ಅವರನ್ನು ಗೆಲ್ಲಿಸಿಕೊಂಡು ಬಂದರು, ಮತ್ತೊಂದು ಕಡೆಗೆ ಬೆಳಗಾವಿ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಪುತ್ರ ಮೃನಾಲ್ ಸೋತರು. ಹೀಗಾಗಿ ಗಡಿನಾಡಲ್ಲಿ ಸಚಿವದ್ವಯರಲ್ಲಿ ಜಿದ್ದಿನ ರಾಜಕಾರಣ ಮತ್ತಷ್ಟು ಹೆಚ್ಚಾಯಿತು ಎಂದು ಹೇಳಬಹುದು.
ಡಿಕೆಶಿ ತಂತ್ರ ಏನು?
ಇಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಸಚಿವೆ ಹೆಬ್ಬಾಳಕರ ಮುಂದಿಟ್ಟುಕೊಂಡು ಸಚಿವ ಜಾರಕಿಹೊಳಿ ಅವರನ್ನು ಹೆಣೆಯಲು ತಂತ್ರಗಾರಿಕೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕೂಡ ಸಚಿವ ಜಾರಕಿಹೊಳಿ ಅಷ್ಟೇ ಅಲ್ಲ ಸ್ಥಳೀಯ ಮುಖಂಡರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರ ಬಗ್ಗೆ ವ್ಯಾಪಕ ಚಚರ್ೆಗಳು ಜೋರಾಗಿ ನಡೆದಿವೆ.
ಇಲ್ಲಿ ನಾಯಕರ ಸ್ವಾಗತಕ್ಕೆ ಬ್ಯಾನರ್ ಹಾಕುವುದು ಸೇರಿದಂತೆ ಪ್ರತಿಯೊಂದು ಸಂಗತಿ ಕೂಡ ಡಿ.ಕೆ. ಶಿವಕುಮಾರ ಕಂಟ್ರೋಲ್ದಲ್ಲಿತ್ತು ಎನ್ನಲಾಗಿದೆ, ಇದೇ ಕಾರಣದಿಂದ ಸಚಿವ ಸತೀಶ ಜಾರಕಿಹೊಳಿ ಹೆಸರಿನ ಬ್ಯಾನರ್ಗಳು ಹೆಚ್ಚಿಗೆ ಎದ್ದು ಕಾಣಲಿಲ್ಲ.
ಸಿಟಿ ರವಿ ಪ್ರಕರಣ?

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರಕರಣದಲ್ಲಿ ಕೂಡ ಉಪಮುಖ್ಯಮಂತ್ರಿ ಶಿವಕುಮಾರ ಅವರು ಮೂಗು ತೂರಿಸುವ ಕೆಲಸ ಮಾಡಿದರು ಎನ್ನಲಾಗುತ್ತಿದೆ,

ಇಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾಟರ್ಿನ್ ಮಾರ್ಬನ್ಯಾಂಗ್ ಮತ್ತು ಜಿಲ್ಲಾ ಎಸ್ಪಿ ಭೀಮಾಶಂಕರ ಗುಳೇದ ಅವರೂ ಸಹ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯನ್ನು ಕಡೆಗಣಿಸಿ ಡಿಕೆ ಶಿವಕುಮಾರ ಅಣತಿಯಂತೆ ಕುಣಿದರು ಎನ್ನುವ ಆರೋಪ ಕೇಳಿ ಬಂದಿದೆ.
ಅಷ್ಟೇ ಅಲ್ಲ ಜಿಲ್ಲೆಯ ಆಡಳಿತದಲ್ಲೂ ಕೂಡ ಅಧಿಕಾರಿಗಳು ಸಚಿವರ ಮಾತನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ..