ಬೆಳಗಾವಿ.ಕೊನೆಗೂ ಅನಗೋಳ ನಾಕಾ ಬಳಿ ಪ್ರತಿಷ್ಠಾಪುಸಲಾಗಿದ್ದ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಪೊಲೀಸ್ ಬಂದೋಬಸ್ತಿ ನಡುವೆಯೇ ನಡೆಯಿತು.
ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ, ನಗರಸೇವಕರಾದ ವಾಣಿ ಜೋಶಿ, ಅಭಿಜಿತ್ ಜವಳಕರ, ನಿತಿನ್ ಜಾಧವ ಗಿರೀಶ ಧೋಂಗಡಿ ಮುಂತಾದವರ ಸಮ್ಮುಖದಲ್ಲಿ ಮೂರ್ತಿ ಮೇಲಿನ ಬಟ್ಟೆ ತೆರವು ಮಾಡಲಾಯಿತು.

ಆರಂಭದಲ್ಲಿ ಮೇಯರ್ ಸೇರಿದಂತೆ ಮುಂತಾದವರು ಪಾಲಿಕೆ ಸಿಬ್ಬಂದಿ ಕಡೆಯಿಂದ ಮಧ್ಯದಲ್ಲಿ ಹಾಕಲಾಗಿದ್ದ ತಗಡು ಸೇರಿದಂತೆ ಸ್ವಚ್ಚತೆ ಮಾಡಬೇಕು ಎಂದು ಸೂಚನೆ ನೀಡಿದರು.

ಆದರೆ ಅಲ್ಲಿ ಹಾಜರಿದ್ದ ಪಾಲಿಕೆ ಅಧಿಕಾರಿ ನಿಪ್ಪಾಣಿಕರ ಅವರು ಯಾವುದೇ ರೀತಿಯ ಸ್ಪಂದನೆ ಮಾಡಲಿಲ್ಲ.
ಹೀಗಾಗಿ ಕೊನೆಗಳಿಗೆ ತಂತ್ರಗಾರಿಕೆಯಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದ ತಂಡ ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.