ಬೆಳಗಾವಿ. ಅನಗೋಳ ನಾಕಾದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣದ ಸಿದ್ಧತೆ ಒಂದು ಕಡೆ ನಡೆದಿದ್ದರೆ, ಮತ್ತೊಂದು ಕಡೆಗೆ ಪೊಲೀಸ್ ಬಂದೋಬಸ್ತ್ ಲೆಕ್ಕಾಚಾರಗಳು ಜೋರಾಗಿ ನಡೆದಿವೆ

ಹೀಗಾಗಿ ಅನಗೋಳ ಪರಿಸರದ ವಾರಾವರಣ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡವಾಗಿದೆ.

ಯಾವುದೇ ಪರಿಸ್ಥಿತಿಯಲ್ಲಿ ಮೂರ್ತಿ ಅನಾವರಣ ಮಾಡೇ ತೀರಬೇಕು ಎನ್ನುವ ಉದ್ದೇಶದಿಂದ ಅಲ್ಲಿ ಕೆಲವರು ಪೂಜಾ ಸಿದ್ಧತೆಯನ್ನು ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆಗೆ ಕ್ಷಣ ಕ್ಷಣಕ್ಕೂ ಪೊಲೀಸ್ ಬಂದೋಬಸ್ತಿಯ ಲೆಕ್ಕಾಚಾರಗಳು ಬದಲಾಗುತ್ತಿವೆ.

ಈಗಾಗಲೇ ಸ್ಥಳದಲ್ಲಿ ನಾಲ್ಕೈದು ಜನ ಪೊಲೀಸ್ ಇನ್ಸಪೆಕ್ಟರಗಳು ಬೀಡು ಬಿಟ್ಟಿದ್ದಾರೆ. ಅಷ್ಟೆ ಅಲ್ಲ ಅಲ್ಲಿ ಪ್ರತಿಯೊಂದು ಘಟನೆಗಳು ದಾಖಲಾಗುವಂತೆ ಸಿಸಿಟಿವಿಗಳನ್ನು ಸಹ ಅಳವಡಿಸಲಾಗಿದೆ.

ಇದೆಲ್ಲದರ ಮಧ್ಯೆ ಅಲ್ಲಿ ಸೇರುತ್ತಿರುವ ಜನರನ್ನು ಚದುರಿಸುತ್ತಿರುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.
ಮತ್ತೊಂದು ಕಡೆಗೆ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಶೋಭಾ ಯಾತ್ರೆ ಸಿದ್ಧತೆ ಕೂಡ ನಡೆದಿದೆ.