ಔರಂಗಜೇಬನಿಗೆ ಹೆದರಿಲ್ಲ- ಶಿವೇಂದ್ರ. ಇದು ಶಿವಭಕ್ತರ ಶಕ್ತಿ- ಅಭಯ

ಇದು

ಬೆಳಗಾವಿ
ಅನಗೋಳ ವೃತ್ತದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಬೃಹತ್ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಛತ್ರಪತಿ ಶಿವಾಜಿ ಮಹಾರಾಜರ ಹದಿಮೂರನೇ ವಂಶಸ್ಥರಾದ ಛತ್ರಪತಿ ಶಿವೇಂದ್ರ ರಾಜೇಭೋಸಲೆಯವರು, ಈ ಭವ್ಯ ಹಾಗೂ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ತುಂಬ ಖುಷಿಯಾಗಿದೆ.

ಇಂತಹ ವಿಶಿಷ್ಟವಾದ ಕಾರ್ಯಕ್ರಮಕ್ಕೆ ಇಲ್ಲಿ ಅಡೆತಡೆಯಾದ ಬಗ್ಗೆ ಕೇಳಿದೆ. ಶಾಸಕ ಅಭಯ ಪಾಟೀಲ ಹಾಗೂ ಧನಂಜಯ ಜಾಧವ ಅವರು ಈ ಬಗ್ಗೆ ನನ್ನ ಗಮನಕ್ಕೆ ತಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ವಂಶ ಔರಂಗಜೇಬನಿಗೇ ಹೆದರಿಲ್ಲ. ಇನ್ನು ಇದಕ್ಕೆಲ್ಲಾ ಹೆದರುತ್ತೇವೆಯೇ.. ಏನೇ ಆಗಲಿ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೆ ಎನ್ನುವುದನ್ನು ಸ್ಮರಿಸಿದರು.

ಇದಕ್ಕೆಲ್ಲಾ ಶಿವಭಕ್ತರ ಶಕ್ತಿ ಕಾರಣ

ಬೆಳಗಾವಿ: ಛತ್ರಿಪತಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣಕ್ಕೆ ನಾನಾ ರೀತಿಯಲ್ಲಿ ಅಡೆತಡೆಯನ್ನುಂಟು ಮಾಡಿದರೂ ಕೂಡ, ಶಿವಭಕ್ತರ ಶಕ್ತಿಯಿಂದ ಇಂದು ಇಲ್ಲಿ ಭಗವಾ ಧ್ವಜ ಹಾರಾಡಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.


ಇಲ್ಲಿನ ಅನಗೋಳ ವೃತ್ತದಲ್ಲಿ ರವಿವಾರ ರಾತ್ರಿ ಛತ್ರಪತಿ ಸಂಭಾಜಿ ಮಹಾರಾಜರ ಬೃಹತ್ ಪುತ್ಥಳಿಯನ್ನು ಛತ್ರಪತಿ ಶಿವಾಜಿ ಮಹಾರಾಜರ ಹದಿಮೂರನೇ ವಶಂಸ್ಥರಾದ ಛತ್ರಪತಿ ಶ್ರೀಮಂತ ಶಿವೇಂದ್ರ ರಾಜೇ ಭೋಸಲೆಯವರ ಉಪಸ್ಥಿತಿಯಲ್ಲಿ ಅದ್ದೂರಿಯಿಂದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿನ್ನೆ ಜಿಲ್ಲಾಧಿಕಾರಿಗಳು ಇದೇ ಸ್ಥಳದಲ್ಲಿ ಬಂದು ಹೇಳಿಕೆ ನೀಡಿ ರವಿವಾರ ಸಂಜೆ ಯಾರೂ ಇಲ್ಲಿ ಬರಬೇಡಿ, ಎಲ್ಲರೂ ಮನೆಯಲ್ಲಿ ಇರುವಂತೆ ಹೇಳಿದ್ದರು. ಅದರಂತೆ ರವಿವಾರ ಮಧ್ಯಾಹ್ನದವರೆಗೂ ಬಹಳಷ್ಟು ಅಡೆತಡೆಗಳನ್ನುಂಟು ಮಾಡಲಾಯಿತು. ಆದರೂ ನಿಮ್ಮೆಲ್ಲರ ಶಕ್ತಿ ಮುಂದೆ ಯಾವ ಆಟವೂ ನಡೆಯಲಿಲ್ಲ ಎಂದು ಹೇಳಿದರು.
ಪೊಲೀಸರಿಗೂ ನಮ್ಮ ಮೇಲೆ ಹೆಚ್ಚಿಗೆ ಪ್ರೀತಿಯಿದೆ. ಹೀಗಾಗಿ, ಅವರೂ ಕೂಡ ಹಗಲಿರುಳು ಇಲ್ಲಿ ಭದ್ರತೆ ಒದಗಿಸಿದರು. ಆದರೆ, ಇಂತಹ ಅದ್ಧೂರಿ ಕಾರ್ಯಕ್ರಮಕ್ಕೆ ಅವರೂ ಕೂಡ ಕಾರಣಿಕೃತರಾಗಿದ್ದು, ಅವರಿಗೂ ಧನ್ಯವಾದಗಳನ್ನು ತಿಳಿಸುವುದಾಗಿ ಪೊಲೀಸ್ ಆಯುಕ್ತ ಯುಡಾ ಮಾರ್ಟಿನ್ ಹಾಗೂ ಡಿಸಿಪಿ ರೋಹನ ಜಗದೀಶ್ ಅವರ ಹೆಸರೇಳಿ ಅಭಿನಂದಿಸಿದ್ದು ವಿಶೇಷವಾಗಿತ್ತು.
ಇಷ್ಟೊಂದು ಅದ್ಧೂರಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಶಿವಭಕ್ತರಿಗೆ, ಮಹಿಳೆಯರಿಗೆ ವಿಶೇಷವಾದ ಧನ್ಯವಾದ. ಅಲ್ಲದೇ, ಎರಡು ಸಾವಿರಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರು ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ನಿಂತು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಿದ್ದು ಅವರಿಗೂ ಅನಂತ ಧನ್ಯವಾದಗಳು ಎಂದು ಅಭಯ ಪಾಟೀಲ ಹೇಳಿದರು.

Leave a Reply

Your email address will not be published. Required fields are marked *

error: Content is protected !!