Headlines

ವೇದಾಂತ ಪರಿಷತ್ನ ಪ್ರಶಸ್ತಿ ವಿಜೇತರು

ವೇದಾಂತ ಫೌಂಡೇಶನ್ ನ 2025ನೇ ಸಾಲಿನ ಪ್ರಶಸ್ತಿ ಪ್ರಕಟ :ಶಿಕ್ಷಕರು, ಪತ್ರಕರ್ತರು ಮತ್ತು ಪೊಲೀಸರು ಹೀಗೆ ನವರತ್ನಗಳು “ವೇದಾಂತ ಎಕ್ಸಲೆನ್ಸ್ ಅವಾರ್ಡ್ “ಪ್ರಶಸ್ತಿಯಿಂದ ಸತ್ಕರಿಸಲ್ಪಡುವರು.

ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಶಿಕ್ಷಕರು, ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಿರ್ಭಯವಾಗಿ ಬೆಳಕಿಗೆ ತಂದು ಸಮಾಜದಲ್ಲಿ ಜಾಗೃತಿ ಮೂಡಿಸುವ ಪತ್ರಕರ್ತರು ಹಾಗೂ ಅಪರಾಧಿಗಳ ಹುಟ್ಟಡಗಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪೊಲೀಸರನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷ ವೇದಾಂತ ಫೌಂಡೇಶನ್ ವತಿಯಿಂದ "ವೇದಾಂತ ಎಕ್ಸಲೆನ್ಸ್ ಅವಾರ್ಡ್ "ನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯು 1000ರೂ, ಸನ್ಮಾನ ಪತ್ರ, ಸ್ಮರಣಿಕೆ, ಶಾಲು, ಹಾರ ಮತ್ತು ಶ್ರೀಫಲವನ್ನು ಒಳಗೊಂಡಿದೆ.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಶ್ರೀ ಆಸೀಫ್ (ರಾಜು )ಸೇಠ್ ರವರು, ಉದ್ಘಾಟಕರಾಗಿ ಪೊಲೀಸ್ ಆಯುಕ್ತರಾದ ಶ್ರೀ ಯಡಾ ಮಾರ್ಟೀನ್ ಐ. ಪಿ. ಎಸ್.ರವರು, ಎನ್. ನಿರಂಜನ್ ರಾಜ್ ಅರಸ್ ಡಿ ಸಿ ಪಿ. ಕ್ರೈಮ್ &ಟ್ರಾಫಿಕ್ ವಿಭಾಗ ಇವರು ಉಪಸ್ಥಿತರಿರುವರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೈ. ಜೆ.ಭಜಂತ್ರಿ ಯವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವರು ಹಾಗೂ ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀ ಶ್ರೀಕಾಂತ ಅಜಗಾವ್ಕಾರ್, ವಿಶ್ವಭಾರತ ಸೇವಾಸಮಿತಿಯ ಅಧ್ಯಕ್ಷರಾದ ವಿಜಯ ನಂದಿಹಳ್ಳಿ, ಶ್ರೀ ಯುವರಾಜ ರತ್ನಾಕರ್, ಸಲಾಂವಾಡಿಯ ಸಮಾಜ ಸೇವಕರಾದ ಶ್ರೀ ಎಂ. ಎ. ಪಾಟೀಲ್, ಬೆಳಗಾವಿ ತಾಲೂಕು ಸೊಸೈಟಿ ಅಧ್ಯಕ್ಷರಾದ ಶ್ರೀ ಶೇಖರ ಕರಂಬಳಕರ್ ಮುಂತಾದವರು ಉಪಸ್ಥಿತರಿರುವರು.

ಪ್ರಶಸ್ತಿಗೆ ಭಾಜನರಾದವರು :

ಶಿಕ್ಷಕರು -1.ಶ್ರೀಮತಿ. ಅಂಜುದೇವಿ ಕೇದನೂರ್ಕರ್, ನಿವೃತ್ತ ಶಿಕ್ಷಕಿ ಸ. ಹಿ. ಪ್ರಾ. ಶಾಲೆ, ಮುತಗಾ, 2.ಶ್ರೀಮತಿ. ಕವಿತಾ ಪರಮಾಣಿಕ, ಪ್ರಧಾನ ಗುರುಮಾತೆ, ಮಹಿಳಾ ವಿದ್ಯಾಲಯ, ಆಂಗ್ಲ ಮಾಧ್ಯಮ, 3 ರಘುನಾಥ್ ಉತ್ತೂರ್ಕರ್, ಪ್ರಧಾನ ಗುರುಗಳು, ಮರಾಠಿ ಹಿ. ಪ್ರಾ. ಶಾಲೆ. ನಂ. 35, ಮಜಗಾವಿ 4. ಸುನೀಲ್ ದೇಸೂರ್ಕರ್, ಸಹ ಶಿಕ್ಷಕರು, ಸ. ಹಿ. ಪ್ರಾ. ಶಾಲೆ. ಬಸವನಕುಡಚಿ.

ಪತ್ರಕರ್ತರು :

ರಮೇಶ ಹಿರೇಮಠ, ಹಿರಿಯ ಪತ್ರಕರ್ತರು, ತರುಣ ಭಾರತ ದಿನಪತ್ರಿಕೆ
2. ರವೀಂದ್ರ. ಎ. ಉಪ್ಪಾರ, ಹಿರಿಯ ಪತ್ರಕರ್ತರು, ಟೈಮ್ಸ್ ಆಫ್ ಇಂಡಿಯಾ
3.ಸಂತೋಷ ಈರಪ್ಪ ಚಿನಗುಡಿ, ಹಿರಿಯ ಪತ್ರಕರ್ತರು, ಪ್ರಜಾವಾಣಿ.

ಪೊಲೀಸರು :

. ಬಸವರಾಜ ಎಂ. ನರಗುಂದ, ಸಿವಿಲ್ ಹೆಡ್ ಕಾನ್ಸ್ ಟಬಲ್, ಎ. ಪಿ ಎಂ. ಸಿ, ಪೊಲೀಸ್ ಠಾಣೆ
2.ಶ್ರೀ ಲಾಡಜಿಸಾಬ್ ಮುಲ್ತಾನಿ, ಸಿವಿಲ್ ಪೊಲೀಸ್ ಕಾನ್ಸ್ ಟಬಲ್, ತಿಲಕವಾಡಿ ಪೊಲೀಸ್ ಠಾಣೆ.

ಈ ಕಾರ್ಯಕ್ರಮ 1ನೇ ಫೆಬ್ರವರಿ 2025ರಂದು ಮುಂಜಾನೆ 11.30ಕ್ಕೆ ಸರಿಯಾಗಿ ಮಹಿಳಾ ವಿದ್ಯಾಲಯ, ಮಂಡಲ ಇಂಗ್ಲಿಷ್ ಮಾಧ್ಯಮ ಶಾಲೆ, ಕಾಲೇಜ್ ರಸ್ತೆ, ಬೆಳಗಾವಿ ಇಲ್ಲಿ ಆಯೋಜಿಸಲ್ಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!