
ಪತ್ರಕರ್ತೆ ಕೀರ್ತನಕುಮಾರಿಗೆ ಸನ್ಮಾನ
ಬೆಂಗಳೂರು. ಮಾಧ್ಯಮ ಅಕಾಡೆಮಿ ವತಿಯಿಂದ ಕೊಡಮಾಡುವ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಬೆಳಗಾವಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕೀರ್ತನಕುಮಾರಿ ಕಾಸರಗೋಡು ಅವರನ್ಬು ಸನ್ಮಾನಿಸಲಾಯಿತು. ಮಾದ್ಯಮ ಅಕಾಡೆಮಿ ಆಯೋಜನೆ ಮಾಡಿದ್ದ ಸಮಾರಂಭದಲ್ಲಿ ಅವರನ್ನು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಲಾಯಿತು. ಅತ್ಯುತ್ತಮ ಕೃಷಿ ವರದಿ ಹಿನ್ನೆಯಲ್ಲಿ ಬಸವರಾಜ ದೊಡಮನಿ ದತ್ತಿ ಪ್ರಶಸ್ತಿಗೆ ಕೀರ್ತನಕುಮಾರಿ ಭಾಜನರಾಗಿದ್ದರು. .