ರಾಜಕಾರಣದ ಗಡಿಬಿಡಿ ನಡುವೆ ಬಾಲ್ಯ ಸ್ನೇಹಿತನ ಅಂಗಡಿಗೆ ಹೋದ ಪ್ರಭಾವಿ ಸಚಿವ.
ಹಳೆಯ ಹಾಡು ಕೇಳಿ ಆನಂದಿಸಿದ ಸಚಿವ ಜಾರಕಿಹೊಳಿ
ಅಧಿಕಾರ, ಅಂತಸ್ತು, ಹಣ ಎಲ್ಲವೂ ಇದ್ದರೂ ಒಂಚೂರು ಅಹಂ ತೋರಿಸದ ಸಚಿವ ಜಾರಕಿಹೊಳಿ..
ಈ ಸಚಿವರ ಸುತ್ತ ಛತ್ರಿ ಹಿಡಿಯುವ ಗಿರಾಕಿಗಳಿಲ್ಲ. ವರ್ಗಾವಣೆ ದಂಧೆಯ ಹಿಂದೆ ಬೆನ್ನು ಬಿದ್ದಿಲ್ಲ. ನಂಬಿದವರನ್ನು ಕೈ ಬಿಟ್ಟಿಲ್ಲ
ಬೆಳಗಾವಿ. ರಾಜಕಾರಣದಲ್ಲಿ ಅಧಿಕಾರ ಸಿಕ್ಕ ತಕ್ಷಣ ಕೆಲವರಿಗೆ ಯಾರೂ ಕಣ್ಣಿಗೆ ಕಾಣಲ್ಲ. ತಮ್ಮ ಬಾಲ್ಯ ಸ್ನೇಹಿತರು ಅಷ್ಟೇ ಏಕೆ `ತಮ್ಮವರು’ ಎನ್ನುವವರು ಕಂಡರೂ ಕಾಣದಂತೆ ಇರುತ್ತಾರೆ. ಏಕೆಂದರೆ ಅಧಿಕಾರ ಸಿಕ್ಕ ಸಂದರ್ಭದಲ್ಲಿ ಅಂತಹವರ ಸುತ್ತ ಛತ್ರಿ ಹಿಡಿದುಕೊಂಡು ಕಿವಿ ಚುಚ್ಚುವವರೇ ಹೆಚ್ಚಿಗಿರುತ್ತಾರೆ. ಆದರೆ ಅಧಿಕಾರ, ಅಂತಸ್ತು ಎಲ್ಲವೂ ಇದ್ದೂ ಕೂಡ ಸಿಂಪಲ್ ಆಗಿರುವ ರಾಜ್ಯದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಅವರು ಬಾಲ್ಯದ ಸ್ನೇಹಿತರನ್ನು ಅರಸಿಕೊಂಡು ಹೋಗಿದ್ದ ಸಂಗತಿ ಈಗ ಎಲ್ಲೆಡೆ ಚರ್ಚೆಯ ವಸ್ತುವಾಗಿದೆ. ರಾಜ್ಯದಲ್ಲಿ ಈಗ ಎಲ್ಲೆಡೆ ಕಾಂಗ್ರೆಸ್ ಬಣ ಬಡಿದಾಟ ಜೋರಾಗಿದೆ. ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಣದಲ್ಲಿ ಗುರುತಿಸಿಕೊಂಡವರು,
ಅಂತಹ ರಾಜಕಾರಣದ ಗೊಂದಲದ ನಡುವೆಯೇ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಬಾಲ್ಯದ ಗೆಳೆಯನ ಸಣ್ಣ ಅಂಗಡಿಗೆ ತಮ್ಮ ಪುತ್ರ ರಾಹುಲ್ ಜೊತೆಗೆ ಆಕಸ್ಮಿಕ ಭೆಟ್ಟಿ ನೀಡಿ ಹಳೆಯ ದಿನಗಳನ್ನು ನೆನಪಿಸಿಕೊಂಡರು. ಆ ಪೊಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಗೋಕಾಕದ ಆನಂದ ಚಿತ್ರ ಮಂದಿರದ ಬಳಿ ಇರುವ ಗೆಳೆಯ ಕಿಫಾಯತ್ನ ಟಿವ್ಹಿ-ರೆಡಿಯೋ ಅಂಗಡಿಗೆ ಸಚಿವ ಸತೀಶ ಆಕಸ್ಮಿಕ ಭೆಟ್ಟಿ ನೀಡಿದರು, ಅಷ್ಟೇ ಅಲ್ಲ ಅಲ್ಲಿಯೇ ಕೆಲವೊತ್ತು ಕುಳಿತು ಹಳೆಯ ಕನ್ನಡ ಹಾಗೂ ಹಿಂದಿಯ ಹಾಡುಗಳನ್ನು ಕೇಳಿ ತಮ್ಮ ಬಾಲ್ಯದ ಗೆಳೆತನ ಹಾಗೂ ಹಳೆಯ ಆ ದಿನಗಳನ್ನ ಮತ್ತೊಮ್ಮೆ ನೆನಪಿಸಿಕೊಂಡರು. ಸಿಂಪಲ್ ವ್ಯಕ್ತಿತ್ವ..! ರಾಜ್ಯದಲ್ಲಿ ಪ್ರಭಾವಿ ಸಚಿವ ಎನಿಸಿಕೊಂಡರೂ ಕೂಡ ಸತೀಶ್ ಜಾರಕಿಹೊಳಿ ಬಹಳ ಸಿಂಪಲ್ ವ್ಯಕ್ತಿತ್ವ ಹೊಂದಿದವರು,!
ಜಾರಕಿಹೊಳಿ ಕುಟುಂಬದಲ್ಲಿ 5 ಜನ ಸಹೋದರರಲ್ಲಿ ನಾಲ್ವರು ವಿಧಾನಸೌಧ ಕಟ್ಟೆ ಏರಿದ್ದಾರೆ, ಮನಸ್ಸು ಮಾಡಿದರೆ ಏನುಬೇಕಾದ್ದು ಮಾಡಬಹುದು, ಆದರೆ ಅವರು ಅಂತಹ ಆಡಂಬರ ತೋರಿಸುವ ಗೋಜಿಗೆ ಇದುವರೆಗೂ ಹೋಗಿಲ್ಲ ಎನ್ನುವುದು ವಿಶೇಷ. ಸಹಜವಾಗಿ ಬೆಳಗಾವಿ ಅಷ್ಟೇ ಏಕೆ ಬೇರೆಡೆ ಎಲ್ಲೆ ಹೋದರೂ ಕೂಡ ಅತ್ಯಂತ ಸಿಂಪಲ್ ಆಗಿರುವ ಹೊಟೇಲ್ಗೆ ಹೋಗುತ್ತಾರೆ, ಸಾಮಾನ್ಯರಂತೆ ತಿಂಡಿ ತಿಂದು ಹೋಗುತ್ತಾರೆ, ಆದರೆ ಜಿದ್ದಿಗೆ ಬಿದ್ದರೆ ಅದರಿಂದ ಹಿಂದೆ ಸರಿಯಲ್ಲ.