ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಕನಸಿನ ಯೋಜನೆಯಾದ ಶಾಲಾ ಮಕ್ಕಳಿಗೆ ಐಸ್ ಕ್ರಿಮ್ ವಿತರಣೆಯ ಐಸ್ ಕ್ರಿಮ್ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಇಲ್ಲಿನ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಶನಿವಾರ ಮುಂಜಾನೆ ನೂರಾರು ಮಕ್ಕಳಿಗೆ ಐಸ್ ಕ್ರಿಮ್ ವಿತರಣೆ ಮಾಡುವ ಮೂಲಕ ಶಾಸಕ ಅಭಯ ಪಾಟೀಲ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಮಕ್ಕಳು ಐಸ್ ಕ್ರಿಮ್ ಗೆ ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯುಲ್ಲಿ ಮಕ್ಕಳಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಐಸ್ ಕ್ರಿಮ್ ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಸುಮಾರು 90 ಸಾವಿರ ಮಕ್ಕಳಿಗೆ ಐಸ್ ಕ್ರಿಮ್ ವಿತರಣೆ ಮಾಡಲಾಗುತ್ತದೆ. ಐಸ್ ಕ್ರಿಮ್ ಪಡೆಯುವ ಮಕ್ಕಳ ಸಂಭ್ರಮ ವರ್ಣಾತೀತ. ಹೀಗಾಗಿ, ಈ ಯೋಜನೆಯನ್ನು ಮುಂದುವರೆಸಿದ್ದೇನೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಕಿಂಗ್ ಐಸ್ ಕ್ರಿಮ್ ನ ಯುವ ಉದ್ಯಮಿ ವಿಜಯಕಾಂತ ಸಿದ್ನಾಳ್ , ಶಾಲಾ ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿದ್ದರು.