ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ 23 ನೇ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬರುವ ಮಾರ್ಚ ದಿ. 15 ರಂದು ನಡೆಯುವುದು ಬಹುತೇಕ ಫಿಕ್ಸ್ ಆಗಿದೆ.

ಈಗಾಗಲೇ ಈ ಬಗ್ಗೆ ಕಡತ ಸಿದ್ಧಗೊಂಡು ಪ್ರಾದೇಶಿಕ ಆಯುಕ್ತರ ಸಹಿಗೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆಯೊಳಗೆ ದಿನಾಂಕ ಘೋಷಣೆ ಆಗಲಿದೆ.
ಆದರೆ ಈ ಭಾರಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಮೇಯರ್ ಚುನಾವಣೆ ಬೇಗ ನಡೆಸಬೇಕು ಎಂದು ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗ ಮನವಿ ಮಾಡಿತ್ತು.
0