Headlines

ಬಿಜೆಪಿಯವರಿಗೆ ಆ ನಾಲ್ವರದ್ದೇ ಚಿಂತೆ..!

{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1,"effects":1},"is_sticker":false,"edited_since_last_sticker_save":true,"containsFTESticker":false}

ಬೆಳಗಾವಿ ಪಾಲಿಕೆ ಮೇಯರ್ ,ಉಪ ಮೇಯರ್ ಚುನಾವಣೆ?

ಸರ್ಕಾರಕ್ಕೆ ನಾಲ್ವರ ಹೆಸರು ಸೇರ್ಪಡೆಗೆ ಹೋಗಿದೆ ಪ್ರಸ್ತಾವನೆ.

ಪ್ರಸ್ತಾವನೆ ಸಲ್ಲಿಸುವುದಕ್ಕೂ ಮುನ್ನವೇ ಬಿಜೆಪಿ ಆಕ್ಷೇಪಣೆ ಸಲ್ಲಿಕೆ.

ನಾಲ್ವರ ಹೆಸರು ಸೇರ್ಪಡೆಯಾದರೂ ಬಿಜೆಪಿ ಬಹುಮತಕ್ಕಿಲ್ಲ ಧಕ್ಕೆ.

ಇಲ್ಲಿ ಇನ್ನುಳಿದ ಆ ಐವರ ಆಟ ಏನು?

ಗೋಕಾಕ ಸಾಹುಕಾರಗೆ ಈ ಐವರು ಕೊಟ್ಟ ಮಾತಾದರೂ ಏನು?

ಮೇಯರ್ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ ಎಂಬುದರ ಮೇಲೆ ಬೆಳಗಾವಿಯ ಮುಂದಿನ ರಾಜಕೀಯ ಭವಿಷ್ಯ ನಿಂತಿದೆ. ಚುನಾವಣೆ ವೇಳೆ ಅನೇಕ ರಾಜಕೀಯ ಚತುರತೆಗಳು ನಡೆಯುವ ಸಾಧ್ಯತೆ ಇದೆ. ಈ ಎಲ್ಲಾ ಬೆಳವಣಿಗೆಗಳು ಮುಂದಿನ ಚುನಾವಣೆಗಳಿಗೂ ಪರಿಣಾಮ ಬೀರುವಂತಿವೆ. ಈಗ ಒಟ್ಟಾರೆ ನೋಡಿದರೆ, ಬೆಳಗಾವಿಯಲ್ಲಿ ರಾಜಕೀಯ ಆಟ ತೀವ್ರ ಹಂತಕ್ಕೆ ತಲುಪಿದೆ!

e belagavi ವಿಶೇಷ

ಬೆಳಗಾವಿ.
ಸಧ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಕುತೂಹಲ ಕೆರಳಿಸಿದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರು ಮಾರ್ಚ 15 ಮುಹೂರ್ತ ಫಿಕ್ಸ್ ಮಾಡಿ ಆದೇಶ ಕೂಡ ಮಾಡಿದ್ದಾರೆ.

ತಿನಿಸು ಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ ಪವಾರ್ ಅವರ ಸದಸ್ಯತ್ವ ರದ್ದಾಗಿದೆ. ಪ್ರಾದೇಶಿಕ ಆಯುಕ್ತರು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಕೋರ್ಟ ಮೆಟ್ಟಿಲು ಹತ್ತಲಾಗಿದೆ. ಮತ್ತೊಂದು ಕಡೆಗೆ ಕೋರ್ಟ ಕೂಡ ಹತ್ತು ದಿನಗಳಲ್ಲಿ ಸ್ಪಷ್ಟನೆ ಕೊಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.
ಇದೆಲ್ಲದರ ಮಧ್ಯೆ ಪ್ರಾದೇಶಿಕ ಆಯುಕ್ತರು ಮೇಯರ ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿಯವರು ಈಗ ಇದನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ತಡೆಯಾಜ್ಞೆ ತರುವ ಚಿಂತನೆ ನಡೆಸಿದ್ದಾರೆ
.

ಇದು ಒಂದು ಭಾಗವಾದರೆ, ಮತ್ತೊಂದು ಕಡೆಗೆ ಸದ್ದಿಲ್ಲದೆ ಮತ್ತೇ ನಾಲ್ವರ ಹೆಸರು ಸೇರ್ಪಡೆ ಗೆ ತೆರೆಮರೆಯ ಕಸರತ್ತು ನಡೆಸಿದೆ.

ಯಾರ ಹೆಸರು? ಏನ್ ವಿಷ್ಯ?

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಮಹಾನಗರ ಪಾಲಿಕೆಯವರು ಇಬ್ಬರು ಅನರ್ಹ ಸದಸ್ಯರನ್ನು ಹೊರತುಪಡಿಸಿ ಒಟ್ಟು 63 ಜನ ಮತದಾನದ ಹಕ್ಕು ಹೊಂದಿರುವ ಸದಸ್ಯರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿದ್ದಾರೆ,
ಆದರೆ ಪ್ರಾದೇಶಿಕ ಆಯುಕ್ತರು ಮಾತ್ರ ಇದುವರೆಗೂ ಅಧಿಕೃತವಾಗಿ ಅದನ್ನು ಪ್ರಕಟಿಸುವ ಗೋಜಿಗೆ ಹೋಗಿಲ್ಲ. ಈ ಹಿನ್ನೆಲೆಯಲ್ಲಿ ಅದರಲ್ಲಿ ಇನ್ನೂ ಕಾಂಗ್ರೆಸ್ನ ನಾಲ್ವರ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬಹುದು ಎನ್ನುವ ಅನುಮಾನ ಬಿಜೆಪಿಗರಲ್ಲಿ ಮೂಡಿದೆ
ಸಧ್ಯದ ಪ್ರಕಾರ ಇಬ್ಬರು ಅನರ್ಹ ಸದಸ್ಯರನ್ನು ಹೊರತುಪಡಿಸಿ 56 ಜನ ನಗರಸೇವಕರ ಜೊತೆಗೆ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕ ಅಭಯ ಪಾಟೀಲ, ಆಸೀಫ್ ಶೇಠ, ಸಂಸದ ಜಗದೀಶ ಶೆಟ್ಟರ್, ಚಿಕ್ಕೊಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಇವರು ಮತದಾನದ ಹಕ್ಕು ಪಡೆದವರು,

ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ, ಹೊಸದಾಗಿ ಕಾಂಗ್ರೆಸ್ನ ಮೂವರ ಹೆಸರನ್ನು ಸೇರಿಸುವ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಹೊಸದಾಗಿ ಪಟ್ಟಿ ಸೇರ್ಪಡೆಯಾದರೆ, ಅದರಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ನಾಗರಾಜ ಯಾದವ ಅವರಿಗೆ ಮತದಾನದ ಹಕ್ಕು ಬರುತ್ತದೆ. ಆದರೆ ಅದಕ್ಕೆ ಈಗಾಗಲೇ ಆಕ್ಷೇಪಣೆ ವ್ಯಪ್ತಪಡಿಸಿ ಬಿಜೆಪಿಯವರು ರಾಜ್ಯಪಾಲರಿಗೆ ಮತ್ತು ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಪತ್ರವನ್ನು ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.

ಸೇರ್ಪಡೆಯಾದರೆ ಏನಾಗಬಹುದು?
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಬಿಜೆಪಿಯದ್ದು ಸಂಪೂರ್ಣ ಬಹುಮತವಿದೆ. ಸಧ್ಯ 35 ಜನ ಬಿಜೆಪಿ ನಗರಸೇವಕರು ಇದ್ದಾರೆ, ಕಳೆದ ಬಾರಿ ಇಬ್ಬರು ಪಕ್ಷೇತರರೂ ಸಹ ಬಿಜೆಪಿ ಬೆಂಬಲಿಸಿದ್ದರು. ಈ ಬಾರಿ ಪಕ್ಷೇತರ ಸದಸ್ಯರನ್ನು ಹೊರತುಪಡಿಸಿ ಮತ್ತು ಇಬ್ಬರು ಅನರ್ಹ ಸದಸ್ಯರನ್ನು ಬಿಟ್ಟರೂ 33 ಜನ ನಗರಸೇವಕರು ಇದ್ದಾರೆ, ಇದರ ಜೊತೆಗೆ ಒಬ್ಬ ಎಂಎಲ್ಸಿ, ಎಂಪಿ ಮತ್ತು ಶಾಸಕರನ್ನು ಸೇರಿಸಿದರೆ 36 ಜನ ಆಗುತ್ತಾರೆ,
ಆದರೆ ಕಾಂಗ್ರೆಸ್ನಲ್ಲಿ ಎಂಇಎಸ್ನವರನ್ನು ಸೇರಿಸಿದರೆ ಅವರ ಸಂಖ್ಯೆ 23 ಆಗುತ್ತದೆ, ಇದರ ಜೊತೆಗೆ ನಾಲ್ವರು ಶಾಸಕರನ್ನು ಹಿಡಿದರೆ 27 ಆಗುತ್ತದೆ, ಈಗ ಹೊಸದಾಗಿ ಮತ್ತೇ ನಾಲ್ವರನ್ನು ಸೇರಿಸಿದರೂ ಬಿಜೆಪಿ ಬಹುಮತಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ
.

ಯಾರಿಗೆ ಮೀಸಲು?
ಬೆಳಗಾವಿ ಮಹಾನಗರ ಪಾಲಿಕೆ 23 ನೇ ಅವಧಿಗೆ ಮೇಯರ್ ಸಾಮಾನ್ಯ ಹುದ್ದೆಗೆ ಮೀಸಲಾಗಿದೆ. ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಜಾರಕಿಹೊಳಿ ಎಂಟ್ರಿ?
ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ಮಹಾನಗರ ಪಾಲಿಕೆಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಕಿಂಗ್ ಮೇಕರ್.! ಆದರೆ ಚುನಾವಣೆ ಘೋಷಣೆಗೂ ಮುನ್ನವೇ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಎಂಟ್ರಿ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.


ಅಷ್ಟೇ ಅಲ್ಲ ಬೆಳಗಾವಿ ಬಿಜೆಪಿಯ ನಾಲ್ಕು ಜನ ನಗರಸೇವಕರು ಮೇಯರ್ ಗಾಗಿ ಅವರ ಮೂಲಕ ಒತ್ತಡ ಹೇರುವ ಕೆಲಸ ನಡೆಸಿದ್ದು ಕೂಡ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ಪಾಲಿಕೆ ರಾಜಕಾರಣ ಯಾವ ಮಟ್ಟಕ್ಕೆ ಹೋಗುತ್ತದೆ ಎನ್ನುವುದನ್ನು ಕಾದು ನೋಡಬೇಕು

Leave a Reply

Your email address will not be published. Required fields are marked *

error: Content is protected !!