Headlines

ಮೇಯರ್ ಚುನಾವಣೆ- ಇಬ್ಬರು ನಗರಸೇವಕರ ಹೆಸರು ಸೇರ್ಪಡೆ


ಬೆಳಗಾವಿ.
ಹೈಕೋರ್ಟ ನಿದರ್ೇಶನದಂತೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಇಬ್ಬರು ನಗರಸೇವಕರ ಹೆಸರು ಸೇರ್ಪಡೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಮುಂದಕ್ಕೆ ಹೋಗಬಹುದು ಎನ್ನುವ ಅನಿಶ್ಚಿತತೆ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಬರುವ ದಿ 15 ರಂದೇ ಚುನಾವಣೆ ನಡೆಯುವುದು ಖಚಿತವಾದಂತಾಗಿದೆ.

ತಿನಿಸು ಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಬಿಜೆಪಿ ನಗರಸೇವಕರಾದ ಜಯಂತ ಜಾಧವ ಮತ್ತು ಮಂಗೇಶ ಪವಾರ್ ಅವರ ಸದಸ್ಯತ್ವ ರದ್ದುಗೊಳಿಸಿ ಆದೇಶ ಮಾಡಿದ್ದರು,
ಈ ಕುರಿತು ನ್ಯಾಯಕೋರಿ ಅವರಿಬ್ಬರೂ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಹೈಕೋರ್ಟ ಮೆಟ್ಟಿಲು ಹತ್ತಿದ್ದರು, ಕಳೆದ ದಿನ ಕೋರ್ಟನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಸದಸ್ಯತ್ವ ರದ್ದುಗೊಳಿಸಿದ ಅಧಿಕಾರಿಯ ಕ್ರಮದ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬಂದಿದ್ದವು,
ಈಗ ಕೋರ್ಟ ಆದೇಶದಂತೆ ಪಾಲಿಕೆಯು ಇಬ್ಬರ ಹೆಸರನ್ನು ಮರುಸೇರ್ಪಡೆ ಮಾಡಿದೆ,

0

Leave a Reply

Your email address will not be published. Required fields are marked *

error: Content is protected !!