ರಾಮತೀರ್ಥ ನಗರದ ಜನತೆಗೆ ಹೋಳಿ ಹಬ್ಬದ ಗಿಫ್ಟ್ 25 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ.
ಬೆಳಗಾವಿ: ಹೋಳಿ ಹಬ್ಬದ ಶುಭ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ 46 ರ ರಾಮತೀರ್ಥನಗರದ ನಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿದೆ. ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಮಹಾನಗರ ಪಾಲಿಕೆ ಮತ್ತು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ.
ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ, ಬೂಡಾ ಆಯುಕ್ತ ಶಕೀಲ್ ಅಹ್ಮದ್ ಮತ್ತು ನಗರ ಸೇವಕ ಹಣಮಂತ ಕೊಂಗಾಲಿ ಅವರ ನೇತೃತ್ವದಲ್ಲಿ ಈ ಹಿನ್ನೆಲೆಯಲ್ಲಿ ಜಂಟಿ ಸಭೆ ನಡೆದು ರಾಮತೀರ್ಥನಗರವನ್ನು ಪಾಲಿಕೆಯ ವ್ಯಾಪ್ತಿಗೆ ಒಳಪಡಿಸುವ ಪ್ರಕ್ರಿಯೆಗೆ ಅನುಮೋದನೆ ನೀಡಲಾಯಿತು. ಈ ಸಭೆಯಲ್ಲಿ 25 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಅದರಲ್ಲಿ ರಸ್ತೆ ಮತ್ತು ಗಟಾರ್ ಕಾಮಗಾರಿಗಳು, ಉದ್ಯಾನ ಅಭಿವೃದ್ಧಿ , ಎ ಮತ್ತು ಬಿ ಖಾತೆ (ಇ-ಆಸ್ತಿ) ಅನುಮೋದನೆ ಮತ್ತು ಎಲ್ಆ್ಯಂಡ್ ಟಿ ಸತತ ಕುಡಿಯುವ ನೀರಿನ ಯೋಜನೆ ಅನುಮೋದನೆ ನೀಡಲಾಗಿದೆ.
ಎಸ್.ಸಿ ನಾಯಿಕ, ಬಸವರಾಜ್ ಹಿರೇಮಠ್, ಶ್ರೀಮತಿ ಮಂಜುಶ್ರೀ, ಪ್ರಸನ್ನ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳಾದ ದೇಶಪಾಂಡೆ, ಅಂಕಿತ್, ಕೆರೂರ್ ಮತ್ತು ಸುನಿಲ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಹೊಸ ಬೆಳಕು.. “ರಾಮತೀರ್ಥ ನಗರದ ಜನತೆಯ ಬಹುದಿನಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಹೋಳಿ ಹಬ್ಬದ ದಿನ ಹೊಸ ಬೆಳಕು ತರಲಿರುವ ಈ ಅಭಿವೃದ್ಧಿ ಕಾರ್ಯಗಳು ನಗರಕ್ಕೊಂದು ಹೊಸ ಮುಖ ನೀಡಲಿವೆ” ಹನುಮಂತ ಕೊಂಗಾಲಿ. ನಗರಸೇವಕರು