ಸಚಿವೆ ಲಕ್ಷ್ಮೀ ವಿರುದ್ಧ ರೈತರ ಆಕ್ರೋಶ

ಧಾರವಾಡ: ಯಾದವಾಡದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕಾರ್ಖಾನೆ ಮಾಡೊದರಿಂದ ಏನೂ ಮುಳುಗಲ್ಲ. ಹುದಲಿಯೊಳಗೂ ನಟ್ಟ ನಡಕ ಕಾರ್ಖಾನೆ ಐತಿ..

ನಾನೂ ರೈತನ ಮಗಳೇ, ಕೂತು ನಾತಾಡೋಣು, ನೀವ್ ಹೇಳಿದಲ್ಲೇ ತಮ್ಮಾ ಬರ್ತಾನು..ನಾನೂ ಬರ್ತೇನಿ..

ನಾನೂ ಕಾಲ್ ಮುಗಿತೇನಿ, ತಮ್ಮಾನೂ ಮುಗುತಾನು..ಸಹಕಾರ ಕೊಡಿ.

ಧಾರವಾಡ .

ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಮೃಣಾಲ್ ಶುಗರ್ ಫ್ಯಾಕ್ಟರಿ ಭೂಮಿ ಪೂಜೆಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಗ್ರಾಮಸ್ಥರಿಂದ ತೀವ್ರ ವಿರೋಧ ಎದುರಾಗಿದೆ.

ಗ್ರಾಮಸ್ಥರ ತೀವ್ರ ಪ್ರತಿಭಟನೆ

ಫ್ಯಾಕ್ಟರಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು, “ರೈತರ ಭೂಮಿ ಬಲವಂತವಾಗಿ ಕಬಳಿಸಲಾಗಿದೆ” ಎಂಬ ಆರೋಪವೊಂದಿಗೇ ಸಚಿವೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಭಾಗಿಯಾದ ಹಲವಾರು ರೈತರು “ಈ ಫ್ಯಾಕ್ಟರಿ ನಮ್ಮ ಭೂಮಿಗೂ, ಆರೋಗ್ಯಕ್ಕೂ ಹಾನಿ ಮಾಡಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವೆ ಕುಳಿತು ಸಮಾಧಾನಪಡಿಸಲು ಪ್ರಯತ್ನ

ಗ್ರಾಮಸ್ಥರ ಆಕ್ರೋಶದ ಮಧ್ಯೆ, ಸಚಿವೆ ಹೆಬ್ಬಾಳಕರ್ ತೀವ್ರ ಒತ್ತಡಕ್ಕೆ ಒಳಗಾದರು. ಪ್ರತಿಭಟನಾಕಾರರು ಚುರುಕು ಪ್ರಶ್ನೆಗಳನ್ನು ಎತ್ತಿದಾಗ, “ನಾನು ರೈತರ ಮಗಳು, ನಿಮಗೆ ಮೋಸ ಮಾಡಿಲ್ಲ, ಶಾಂತಿಯುತವಾಗಿ ಕುಳಿತು ಮಾತನಾಡೋಣ” ಎಂದು ಸಚಿವರು ಮನವಿ ಮಾಡಿದರು.

ಗ್ರಾಮಸ್ಥರ ಗಂಭೀರ ಆರೋಪ

ಪ್ರತಿಭಟನೆಯ ಸಮಯದಲ್ಲಿ, ಎಂಎಲ್ಸಿ ಚೆನ್ಮರಾಜ್ ಹಟ್ಟಿಹೊಳಿ, “ನಾವು ರೈತರ ಫಲವತ್ತಾದ ಜಮೀನು ಪಡೆದಿಲ್ಲ, ಸರ್ಕಾರ ಮಂಜೂರು ಮಾಡಿದ ಭೂಮಿಯನ್ನೇ ಬಳಸಿದ್ದೇವೆ” ಎಂದು ಸ್ಪಷ್ಟನೆ ನೀಡಿದರೂ, ಗ್ರಾಮಸ್ಥರು ಇದನ್ನು ತೀವ್ರವಾಗಿ ತಿರಸ್ಕರಿಸಿದರು.

ಅವರು, “ನಾವು ನಮ್ಮ ಭೂಮಿಯನ್ನು ಸ್ವಇಚ್ಛೆಯಿಂದ ನೀಡಿಲ್ಲ, ಏಜೆಂಟರು ಮೋಸ ಮಾಡಿದ್ದು ನಮಗೆ ಗೊತ್ತಾಗಿದೆ” ಎಂದು ವಾಗ್ದಾಳಿ ನಡೆಸಿದರು. ಫ್ಯಾಕ್ಟರಿ ಸ್ಥಾಪನೆಯು ಪರಿಸರ ಮತ್ತು ಆರೋಗ್ಯಕ್ಕೆ ಅಪಾಯ ತಂದೊಡ್ಡಬಾರದು ಎಂಬ ಕಾರಣದಿಂದ ಗ್ರಾಮಸ್ಥರು ತಮ್ಮ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಈ ಘಟನೆಯು ಸ್ಥಳೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಮುಂದಿನ ನಡೆ ಏನಾಗಲಿದೆ ಎಂಬುದನ್ನು ಕಣ್ತುಂಬಿಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!