
ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನೆ
ಏಪ್ರಿಲ್6 ರಂದು ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನೆ ಬೆಳಗಾವಿ: ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಷಿಯೇಶನ್ ನೂತನ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಂದು (ಏಪ್ರಿಲ್ 6 ರಂದು) ಬೆಳಗ್ಗೆ 10.30 ಕ್ಕೆ ಬೆಳಗಾವಿಯ ಶಿವಬಸವ ನಗರದ ಎಸಜಿಬಿಐಟಿ ಕಾಲೇಜ್ ಸಭಾಂಗಣದಲ್ಲಿ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ. ನೂತನ ಸಂಘಟನೆಯನ್ನ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಉದ್ಘಾಟನೆ ಮಾಡಲಿದ್ದಾರೆ. ಸಂಘದ ಗುರುತಿನ ಚೀಟಿ ಹಸ್ತಾಂತರ…