ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು..!

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು

ಪತ್ರಕರ್ತರ ಮಕ್ಕಳ ಸಾಧನೆ.

ಕಾರ್ಮಿಕನ‌ ಮಕ್ಕಳ ಅದ್ಭುತ ಸಾಧನೆ.

ಬೆಳಗಾವಿ,
ಪಿಯುಸಿ ದ್ವಿತೀಯ ವರ್ಷದ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಗಡಿನಾಡ ಬೆಳಗಾವಿ ಜಿಲ್ಲೆ ಬಹಳ ಹಿಂದಿದೆ. ಅಂದರೆ 26 ನೇ ರ್ಯಾಂಕ್ಗೆ ಬಂದು ನಿಂತಿದೆ,.
ಆದರೆ ಇಲ್ಲಿನ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬೆಳಗಾವಿಗೆ ಕೀರ್ತ ತಂದಿದ್ದಾರೆ, ರಾಜ್ಯಕ್ಕೆ ಮೂರನೇ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿನಿ ಕೂಡ ಬೆಳಗಾವಿ ಜಿಲ್ಲೆಯವಳು,. ಇಲ್ಲಿ ಒಟ್ಟಾರೆ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬಹುತೇಕರು ಶೇ, 90 ರ ಮೇಲಿವೆ.
ಆದರೆ ಒಟ್ಟಾರೆಯಾಗಿ ಗಮನಿಸಿದಾಗ ಶಿಕ್ಷಣ ಮಟ್ಟ ಇನ್ನಷ್ಟು ಸುಧಾರಣೆಯಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಸಲ ಹೇಗಾಗಿದೆ ಎಂದರೆ ಪತ್ರಕರ್ತರ, ಗ್ರಾಫಿಕ್ ಡಿಜೈನರ್ ಮತ್ತು ಮಿಕ್ಸರ್ ದುರಸ್ತಿ ಮಾಡುವವರ ಮಕ್ಕಳು ಹೆಚ್ಚಿನ ಅಂಇಕ ಪಡೆದು ಸಾಧನೆ ಮಾಡಿದ್ದಾರೆ,

ತನ್ವಿ ಹೇಮಂತ ಪಾಟೀಲ:
ಬೆಳಗಾವಿಯ ಗೋಗಟೆ ಕಾಲೇಜಿನ ವಿದ್ಯಾರ್ಥಿನಿ ತನ್ವಿ ಹೇಮಂತ ಪಾಟೀಲ ಶೇ. 600ರಲ್ಲಿ 597 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದ ಮೂರನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಳೆ. ಇವಳ ತಂದೆ ಮಿಕ್ಸರ್ ರಿಪೇರಿ ಮಾಡುತ್ತಾರೆ,

ತನ್ವಿ ಚಾರ್ಟರ್ಡ ಅಕೌಂಟೆಂಟ್ ಆಗಬೇಕೆಂಬ ಕನಸು ಕಟ್ಟಿಕೊಂಡಿದ್ದಾಳೆ. ಇವಳು 600ರ ಪೈಕಿ 597 ಅಂಕಗಳಿಸಿದ್ದಾಳೆ. ಇಂಗ್ಲೀಷನಲ್ಲಿ ಮಾತ್ರ ಮೂರು ಅಂಕಗಳು ಕಡಿಮೆ ಬಂದಿವೆ.

———-

ಪತ್ರಕರ್ತನ ಮಗಳ ಸಾಧನೆ..!
ನಗರದ ಆರ್ ಎಲ್ ಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಕ್ಷಿ ಸುರೇಶ್ ನೇರ್ಲಿ ಶೇ. 95 ರಷ್ಟು ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.

ಭೌತಶಾಸ್ತ್ರ ವಿಷಯದಲ್ಲಿ -96, ರಸಾಯನಶಾಸ್ತ್ರ – 98, ಗಣಿತ – 92, ಕಂಪ್ಯೂಟರ್ ಸೈನ್ಸ್- 96,ಇಂಗ್ಲಿಷ್- 94 ಹಾಗೂ ಹಿಂದಿ- 94 ಅಂಕಗಳನ್ನು ಪಡೆಯುವ ಮೂಲಕ ಶೇ. 95 ರಷ್ಟು ಸಾಧನೆ ಮಾಡಿದ್ದಾಳೆ. ಇವಳ ತಂದೆ ಪತ್ರಕರ್ತ.

ಶ್ರೇಯಸ್ ಸಂಜಯ ಸೂರ್ಯವಂಶಿ

ಮರಾಠಿ ದಿನ ಪತ್ರಿಕೆಯ ಹಿರಿಯ ವರದಿಗಾರ ಸಂಜಯ ಅವರ ಪುತ್ರ ಶ್ರೇಯಸ್ ಒಟ್ಟು 92 ಶೇ. ಅಂಕಗಳಿಸಿ ಕೀರ್ತಿ ತಂದಿದ್ದಾನೆ. ಬೆಂಗಳೂರಿನ ದೀಕ್ಷಾ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಪಿಸಿಎಂ ನಲ್ಲಿ ಶೇ, 94.33 ರಷ್ಟು ಅಂಕಗಳಿಸಿದ್ದಾನೆ.

ಖುಷಿ ಸಾಧನೆ

ಇನ್ನು ಬೆಳಗಾವಿಯ ಪ್ರೇರಣಾ ಕಾಲೇಜಿನ ವಿದ್ಯಾರ್ಥಿನಿ ಖುಷಿ ಗಿರೀಶ್ ಹುಗ್ಗಿ ಶೇ 96.83 ರಷ್ಟು ಸಾಧನೆ ಮಾಡಿದ್ದಾಳೆ. ಇವಳ ಸಾಧನೆಗೆ ಎಲ್ಲರೂ ಫುಲ್ ಖುಷ್.

ಪರೀಕ್ಷೆಗೆ ಹಾಜರಾದವರ ಒಟ್ಟು ವಿದ್ಯಾರ್ಥಿ ಗಳ ಸಂಖ್ಯೆ:- 20995
ಪಾಸಾದವರ ಸಂಖ್ಯೆ- 13724

ಪ್ರತಿಶತ ಶೇಕಡಾ: 65.37

ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ .

ತನ್ನಿ ಹೇಮಂತ ಪಾಟೀಲ . ರಾಜ್ಯಕ್ಕೆ -3 ನೇ Rank . ಪಡೆದ ಅಂಕ: (597)

ಜಿಲ್ಲಾ ಮಟ್ಟದಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಅಂಕ ಪಡೆದ ಕಲಾ ವಿಭಾಗ ಮಾಹಿತಿ.

ಕುಮಾರಿ ಮಹಾಲಕ್ಷ್ಮೀ ಮಂ ಕುಸಗೂರ ಆರ್ ಪಿಡಿ ಪಿಯು ಕಾಲೇಜು ಬೆಳಗಾವಿ. (588)

ಕುಮಾರಿ ದೀಪಾ ಈರಪ್ಪಾ ಬಡಿಗೇರ ಸಿ ಎಸ್ ಬೆಂಬಳಗಿ ಪಿಯುಸಿ ರಾಮದುರ್ಗ. (583)

ಕುಮಾರಿ ಕೀರ್ತಿ ರಮೇಶ ಲಮಾಣಿ ಅನ್ನದಾನೇಶ್ವರಿ ಪಿಯು ಕಾಲೇಜು ಮುನವಳ್ಳಿ (583)

ಕುಮಾರಿ ರುಚಿಕಾ ಸಿಂಗ ರಾಜಪುರೋಹಿತ. ಲಿಂಗರಾಜ ಪಿಯು ಕಾಲೇಜು ಬೆಳಗಾವಿ (583)

ಕುಮಾರಿ ರೇಣುಕಾ ವಿ ಬಿಚಗತ್ತಿ. ಸಿ ಎಸ್ ಬೆಂಬಳಗಿ ಪಿಯುಸಿ ರಾಮದುರ್ಗ. (582)

ಜಿಲ್ಲಾ ಮಟ್ಟದಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಅಂಕ ಪಡೆದ ವಾಣಿಜ್ಯ ವಿಭಾಗ.

ಕುಮಾರಿ ತನ್ನಿ ಹೇಮಂತ ಪಾಟೀಲ ಗೋಗಟೆ ಪಿಯು ಕಾಲೇಜು ಬೆಳಗಾವಿ. (597)

ಕುಮಾರಿ ಪೂರ್ವಿ ವಿಜಯ ರಾಜಪುರೋಹಿತ. ಗೋಗಟೆ ಪಿಯು ಕಾಲೇಜು ಬೆಳಗಾವಿ. (593)

ಕುಮಾರಿ ಬ್ರಾಹ್ಮಿ ಭರತ ನರಸಗೌಡಾ. ಗೋಗಟೆ ಪಿಯು ಕಾಲೇಜು ಬೆಳಗಾವಿ. (590)

ಜಿಲ್ಲಾ ಮಟ್ಟದಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಅಂಕ ಪಡೆದ ವಿಜ್ಞಾನ ವಿಭಾಗ

ಕುಮಾರಿ ಸಾನಿಯಾ ಅಜ್ಜಾದ ಸನದಿ. ಆರ್ ಎಲ್ ಎಸ್ ಪಿಯುಸಿ ಬೆಳಗಾವಿ (589)

ಕುಮಾರಿ ಸೃಷ್ಟಿ ಅನಿಲ ದಿಗ್ಗಾಯಿ. ಜಿ ಎಸ್ ಎಸ್ ಪಿಯುಸಿ ಬೆಳಗಾವಿ. (589)

ಕುಮಾರಿ ಸೃಷ್ಟಿ ನಾರಾರಯಣ ಅಪ್ಪೆಕರ್. ಆರ್ ಎಲ್ ಎಸ್ ಪಿಯುಸಿ ಬೆಳಗಾವಿ. (590)

ಕುಮಾರ ಶೇಯಸ್ ವಿಜಯ ಕಾಕಡ. ಆರ್ ಎಲ್ ಎಸ್ ಪಿಯುಸಿ ಬೆಳಗಾವಿ. (585)

Leave a Reply

Your email address will not be published. Required fields are marked *

error: Content is protected !!