ಬೆಳಗಾವಿ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಇನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿರುವಾಗ ಗಡಿನಾಡ ಬೆಳಗಾವಿ ಯಲ್ಲಿ ಜೈ ಮಹಾರಾಷ್ಟ್ರ ಚೌಕ ಅಸ್ತಿತ್ವದಲ್ಲಿದೆ ಎನ್ನುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಈ ಹಿಂದೆ ಯಳ್ಳೂರು ಮಾರ್ಗದಲ್ಲಿ ದ್ದ ಜೈ ಮಹಾರಾಷ್ಟ್ರ ಫಲಕ ತೆಗೆಯುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆ ಗಳು ಯಾವ ಪ್ರಮಾಣದಲ್ಲಿ ಹೋರಾಟ ಮಾಡಿದ್ದವು ಎನ್ನಯವುದು ಜನರ ಮನಸ್ಸಿನಲ್ಲಿದೆ.

ಅಂತಹುದರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅನಗೋಳ ಪರಿಸರದಲ್ಲಿ ಅಂದರೆ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೈ ಮಹಾರಾಷ್ಟ್ರ ಚೌಕ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕನ್ನಡ ಸಙಘಟನೆಗಳು ಮತ್ತೊಂದು ರೀತಿಯ ಹೋರಾಟಕ್ಕೆ ಸನ್ನದ್ಧರಾಗುತ್ತಿವೆ ಎಙದು ಗೊತ್ತಾಗಿದೆ.