Headlines

ಕಾಂಗ್ರೆಸ್‌ಗೆ ಜಾತಿ ಗಣತಿ — ನುಂಗಲಾರದ ಬಿಸಿ ತುಪ್ಪ!

ಕರ್ನಾಟಕದಲ್ಲಿ ಜಾತಿ ಗಣತಿ ವಿಚಾರ ಇದೀಗ ರಾಜಕೀಯ ತಲೆನೆರಳಾಗಿ ಬೆಳೆದಿದೆ. ಸಮಾಜಮುಖಿ ಹಕ್ಕುಪತ್ರವೋ ಅಥವಾ ಮತದಾರಿ ಲೆಕ್ಕಾಚಾರವೋ ಎಂಬ ಚರ್ಚೆ ಪಕ್ಕಕ್ಕೆ ಸರಿದರೆ, ಈ ಗಣತಿಯೊಂದಿಗೆ ಹೆಚ್ಚು ಎದೆ ಬಡಿದು ಮಾತನಾಡಿದ್ದ ಕಾಂಗ್ರೆಸ್ ಈಗ ಅದೇ ಗಣತಿಯ ವರದಿ ಕೈಯಲ್ಲಿ ಹಿಡಿದು ತೀವ್ರ ಅಸಹಜ ಸ್ಥಿತಿಗೆ ಸಿಕ್ಕಿಕೊಂಡಿದೆ. ಅಂದರೆ ನುಂಗಲಾರದ ಬಿಸಿ ತುಪ್ಪ ಹಿಡಿದಂತಾಗಿದೆ!

*ರಾಜಕೀಯ ಲೆಕ್ಕಾಚಾರ?*

ಸರ್ಕಾರ ಜಾತಿ ಆಧಾರಿತ ಗಣತಿ ವರದಿಯನ್ನು ಅಂಗೀಕರಿಸಿ ಮುಂದಿಟ್ಟಿದ್ದು ಬಹುಜನ ಸಮುದಾಯಗಳಿಗೆ ರಾಜಕೀಯವಾಗಿ ಹೊಸ ಶಕ್ತಿ ನೀಡುವ ಮೂಲಕ ಸಿದ್ದರಾಮಯ್ಯನವರ ‘ಅಹಿಂದ’ ರಾಜಕೀಯ ಧೋರಣಿಗೆ ಮತ್ತಷ್ಟು ಓಜವನ್ನು ತುಂಬಲಿದೆ. ಆದರೆ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದೊಳಗಿನ ಲಿಂಗಾಯತ, ವೀರಶೈವ ಹಾಗೂ ಇತರ ಸಾಮಾನ್ಯ ವರ್ಗದ ನಾಯಕರುಗಳ ನಡುವೆ ಆತಂಕದ ಛಾಯೆ ಹುಟ್ಟಿಸಿದೆ.

*ವಿವಾದಾಸ್ಪದ ಅಂಕಿಅಂಶಗಳು:*

*ಲಿಂಗಾಯತ: 11.3%*

*ವೀರಶೈವ: 1.1%*

*ಮಸ್ಕಿನ್, ನಾಡಗೌಡ, ಷಟ್ಟಿಗರ್, ಗಂಗಾಮತ, ಮುಂತಾದ ಅಲ್ಪಸಂಖ್ಯಾತ ಆಧಿವಾಸಿ ಜಾತಿಗಳು: 27% ಕ್ಕಿಂತ ಹೆಚ್ಚು*

*ಓಬಿಸಿ ಸಮುದಾಯಗಳು ಒಟ್ಟು: 45%+*
—-
*ಪೇಜಾವರ ಶ್ರೀ:*
ಸಂಖ್ಯೆಗಿಂತಲೂ ಸಮಾಜದ ಬಲ ಮಹತ್ವದ್ದಾಗಿದೆ. ಆದರೆ ಅಂಕಿ ಅಂಶದ Politics ಆರಂಭವಾದರೆ, ಇದು ಸಮಾಜವನ್ನು ವಿಭಜಿಸುತ್ತದೆ.”

*ತುಮಕೂರು ಸಿದ್ಧಗಂಗಾ ಮಠದ ಪ್ರತಿನಿಧಿಗಳು:*
“ಲಿಂಗಾಯತ ಸಮುದಾಯವನ್ನು ಅಲ್ಪಸಂಖ್ಯಾತರಂತೆ ತೋರಿಸಲು ಯತ್ನವಾಗುತ್ತಿದೆ. ಇದು ಸಂವೇದನಾಶೀಲ ವಿಷಯ, ಸರ್ಕಾರ ಸ್ಪಷ್ಟನೆ ನೀಡಬೇಕು.”
—-

*ಸಿದ್ದರಾಮಯ್ಯ (ಸಿಎಂ):*
“ಜಾತಿ ಗಣತಿ ನಿಜ ಆಧಾರಗಳ ಮೇಲೆ ತಯಾರಾಗಿದ್ದು, ಇದನ್ನು ಸಾರ್ವಜನಿಕಗೊಳಿಸುವಲ್ಲಿ ಸರ್ಕಾರ ಹಿಂಜರಿಯಲ್ಲ. ಇದು ಸಮಾಜದ ನ್ಯಾಯಕ್ಕಾಗಿ ಅಗತ್ಯವಾದ ಕ್ರಮ.”

*ಡಿಕೆ ಶಿವಕುಮಾರ್ (ಡಿಸಿಎಂ):*
ಇದು ಸೂಕ್ಷ್ಮ ವಿಷಯ. ವರದಿ ಅಧ್ಯಯನದ ನಂತರವೇ ಸರಿಯಾದ ನಿರ್ಧಾರ ಕೈಗೊಳ್ಳಬೇಕು.”

*ವಿರೋಧ ಪಕ್ಷಗಳ ಗುದ್ದಾಟ:*

*ಬಸವರಾಜ ಬೊಮ್ಮಾಯಿ* *ಸಂಸದರು*
ಇದು ಶುದ್ಧ ಮತಬ್ಯಾಂಕ್ ರಾಜಕಾರಣ. ಜಾತಿ ಭಿನ್ನತೆ ಉಸಿರಾಡುವಂತೆ ಮಾಡುತ್ತಿರುವುದು ರಾಜ್ಯಕ್ಕೆ ಅಪಾಯಕಾರಿ.”

*ಕುಮಾರಸ್ವಾಮಿ*  *ಮಾಜಿ ಮುಖ್ಯಮಂತ್ರಿ*
ಕಾಂಗ್ರೆಸ್‌ಕೆ ಜನರ ಸಮಸ್ಯೆ ಇಲ್ಲ. ಮತಗಳ ಲೆಕ್ಕಾಚಾರವೇ ಅಷ್ಟೆ. ಇವತ್ತಿನ ಸರ್ಕಾರ ವಿಭಜನೆಯ ರಾಜಕಾರಣವನ್ನೇ ಅಳವಡಿಸಿದೆ.

—-
ಈ ಗಣತಿ ವರದಿ ಪ್ರಜಾಪ್ರಭುತ್ವದ ಪರಿಕಲ್ಪನೆಯಂತೆ ಸಮಾನ ಹಕ್ಕು ನೀಡುವ ನಿಟ್ಟಿನಲ್ಲಿ ಪ್ರಯೋಜನಕಾರಿ ಆಗಬಹುದಾದರೂ, ಅದರ ರಾಜಕೀಯ ಬಳಕೆ ಒಂದು ಪಾಠವಾಗಿದೆ: ಅಂಶಗಳನ್ನು ಅಸ್ತ್ರವನ್ನಾಗಿ ಮಾಡುವದು ಸುಲಭ, ಆದರೆ ಅದರಿಂದ ಒಗ್ಗಟ್ಟನ್ನು ಕಟ್ಟುವದು ಕಠಿಣ.

ಕಾಂಗ್ರೆಸ್ ಈಗ ಮಾಡಿದ ಒಂದು ಹೆಜ್ಜೆಯು, ತಾನು ಹೆಜ್ಜೆ ಹಾಕಿದ ದಾರಿಯಲ್ಲೇ ಶಿಲೆ ಆಗಬಾರದು ಎಂಬ ಎಚ್ಚರಿಕೆಯಿಂದಲೇ ಮುಂದೆ ನಡೆಯಬೇಕಿದೆ. ಇಲ್ಲದಿದ್ದರೆ, ಈ ಬಿಸಿ ತುಪ್ಪ‌ ಪಕ್ಷದ ಕೈಗೆ ಜ್ವಾಲೆಯೇ ಆಗುವ ಸಾಧ್ಯತೆಯಿದೆ!

Leave a Reply

Your email address will not be published. Required fields are marked *

error: Content is protected !!