ಡಿಸಿಸಿ ಬ್ಯಾಂಕ್ ಕಟ್ಟೆಗೆ ಕಣ್ಣು ಹಾಕಿದ ಸಕರು: ಕುಟುಂಬ ರಾಜಕಾರಣಕ್ಕೆ ಮತ್ತೊಂದು ವೇದಿಕೆ
ಬೆಳಗಾವಿ:
ಬೆಳಗಾವಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆಗೆ ಇನ್ನೂ ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ, ಹಲವಾರು ಶಾಸಕರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಶಾಸಕರು ಮಾತ್ರವಲ್ಲ, ಅವರ ಕುಟುಂಬಸ್ಥರೂ ಸಹ ಡಿಸಿಸಿ ನಿರ್ದೇಶಕ ಸ್ಥಾನಗಳಿಗಾಗಿ ಮೈದಾನಕ್ಕಿಳಿದಿದ್ದು, ಈ ಬಾರಿ ಸಹಕಾರ ಕ್ಷೇತ್ರವೇ ಕುಟುಂಬ ರಾಜಕಾರಣದ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಬಹುದೆಂಬ ಆತಂಕ ವ್ಯಕ್ತವಾಗಿದೆ.
ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಡಿಸಿಸಿ ಬ್ಯಾಂಕ್ ರೈತರಿಗೂ ಸದಸ್ಯರಿಗೂ ನೇರವಾಗಿ ಸಂಬಂಧಿಸಿದ ಶಕ್ತಿಕೇಂದ್ರವಾಗಿರುವುದರಿಂದ, ರಾಜಕೀಯ ನಾಯಕರು ಇದನ್ನು ತಮ್ಮ ಹಿಡಿತದಲ್ಲಿಡಲು ಉತ್ಸುಕರಾಗಿದ್ದಾರೆ. ರೈತ ಸಂಘಟನೆಗಳು ಮತ್ತು ಸಹಕಾರಿ ಧುರೀಣರು ಸಹ ಇದನ್ನು ಗಮನದಿಂದ ನೋಡುವಂತಾಗಿದೆ.
ಶಾಸಕರ ತಯಾರಿ

ಅಶೋಕ ಪಟ್ಟಣ (ಕಾಂಗ್ರೆಸ್): ಪಿಕೆಪಿಎಸ್ ನಿರ್ದೇಶಕರಾಗಿ ಆಯ್ಕೆಯಾದ ನಂತರ ಡಿಸಿಸಿ ಬ್ಯಾಂಕ್ ಅಭ್ಯರ್ಥಿಯಾಗುವ ನಿರೀಕ್ಷೆ.

ಲಕ್ಷ್ಮೀ ಹೆಬ್ಬಾಳಕರ (ಸಚಿವೆ): ಸಹೋದರ ಚನ್ನರಾಜ ಹಟ್ಟಿಹೊಳಿ ಖಾನಾಪುರ ಪಿಕೆಪಿಎಸ್‌ನಿಂದ ಆಯ್ಕೆಯಾಗಿ, ಡಿಸಿಸಿ ಚುನಾವಣೆಗೆ ಬಾಗಿಲು ತೆರೆದಿದ್ದಾರೆ.

ಬಾಲಚಂದ್ರ ಜಾರಕಿಹೊಳಿ (ಅರಭಾವಿ): “ನಾನು ನಿಲ್ಲಲ್ಲ, ಆದರೆ ನನ್ನ ನೇತೃತ್ವದ ತಂಡ ಇರುತ್ತದೆ” ಎಂದು ಘೋಷಿಸಿದ್ದಾರೆ.

ರಾಹುಲ್ ಜಾರಕಿಹೊಳಿ (ಅಭ್ಯರ್ಥಿ): ಬೆಲಗಾವಿ ತಾಲೂಕಿನ ಅಗಸಗಾ ಪಿಕೆಪಿಎಸ್‌ನಿಂದ ಆಯ್ಕೆಯಾಗಿ ಈಗ ಡಿಸಿಸಿ ಅಭ್ಯರ್ಥಿಯಾಗಲು ತಯಾರಿ.

ರಾಜು ಕಾಗೆ, ವಿಶ್ವಾಸ್ ವೈದ್ಯ, ಗಣೇಶ ಹುಕ್ಕೇರಿ – ಈ ಶಾಸಕರೂ ಕೂಡ ಡಿಸಿಸಿ ಕಟ್ಟೆಗೆ ಕಣ್ಣುಹರಿಸಿದ್ದಾರೆ.
ಸಹಕಾರದ ತತ್ವವೇ ಸಮಾನ ಹಕ್ಕು, ಸಮಾನ ಪ್ರಾತಿನಿಧ್ಯ ಎಂಬುದು. ಆದರೆ ಶಾಸಕರ ಈ ತಂತ್ರಗಳು ಪಾರಂಪರಿಕ ಸಹಕಾರ ಚಟುವಟಿಕೆಗೆ ತಡೆ ನೀಡುವಂತಾಗಿದ್ದು, ನಿಷ್ಠಾವಂತ ಕಾರ್ಯಕರ್ತರು ಮತ್ತು ರೈತ ಸದಸ್ಯರಿಗೆ ಅವಕಾಶ ಸಿಗುವ ಸಾಧ್ಯತೆ ಕಮ್ಮಿಯಾಗಿದೆ.

ಡಿಸಿಸಿ ಸ್ಥಾನ: ರಾಜಕೀಯ ಲಾಭದ ಕೇಂದ್ರಬಿಂದು
ಡಿಸಿಸಿ ಮಂಡಳಿಯಲ್ಲಿ ಅಧಿಕಾರ ಪಡೆದರೆ—
ಸಾಲ ವಿತರಣೆಯಲ್ಲಿ ಪ್ರಭಾವ
ಅಭಿವೃದ್ಧಿ ಯೋಜನೆಗಳಲ್ಲಿ ಹಿಡಿತ
ಸದಸ್ಯರ ನೇಮಕಾತಿಗಳ ಮೇಲೆ ಪ್ರಭಾವ
ಇವೆಲ್ಲವೂ ಮುಂದಿನ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಪವರ್ ಬೇಸ್ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಡಿಸಿಸಿ ಚುನಾವಣೆಗೆ ಶಾಸಕರ ಆಸಕ್ತಿ ಸಾಮಾನ್ಯವನ್ನು ಮೀರಿ, ರಾಜಕೀಯ ಉದ್ದೇಶಿತವಾಗಿ ರೂಪುಗೊಳ್ಳುತ್ತಿದೆ.
: