ಬೆಲೆ ಏರಿಕೆಯ ಬೆಳಗಾವಿಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರತಿಭಟನೆ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಆಗಮನ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಿದ್ಧತೆ ಬಲು ಜೋರು
ಬೆಳಗಾವಿ,:
ಕೇಂದ್ರ ಸರ್ಕಾರದ ಧೋರಣೆಗಳು, ಹಠಾತ್ ಬೆಲೆ ಏರಿಕೆಗಳು, ಮತ್ತು ಜನಸಾಮಾನ್ಯರ ಬದುಕಿನಲ್ಲಿ ಮೂಡಿದ ತೀವ್ರ ಅಸಮಾಧಾನವನ್ನು ಸಂಘಟಿತಗೊಳಿಸಲು ಕಾಂಗ್ರೆಸ್ ಈ ಬಾರಿ ಬೆಳಗಾವಿಯನ್ನು ವೇದಿಕೆಯಾಗಿಸಿಕೊಳ್ಳುತ್ತಿದೆ. ಬೃಹತ್ ಪ್ರತಿಭಟನೆಗೆ ನಾಳೆ (ದಿ.28) ನಗರದ ಸಿಪಿಎಡ್ ಮೈದಾನ ಸಜ್ಜಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿ ವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾದ ಈ ಸಮಾರಂಭಕ್ಕೆ ವಿಶೇಷ ಮಹತ್ವ ದೊರೆತಿದೆ.

ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ, ಈ ಸಮಾವೇಶದ ಸಾರ್ಥಕತೆಗೆ ತನ್ನದೇ ಆದ ಶಕ್ತಿ ಹಾಗೂ ಪ್ರಭಾವವನ್ನು ಉಪಯೋಗಿಸುತ್ತಿದ್ದಾರೆ.

ಕೇವಲ ಸಮಾರಂಭ ಆಯೋಜನೆಯಷ್ಟೇ ಅಲ್ಲ, ಜಿಲ್ಲೆಯ ಸಮಗ್ರ ರಾಜಕೀಯ ಚತ್ರಣವನ್ನು ಕಾಂಗ್ರೆಸ್ ಹಿಡಿತದಲ್ಲಿ ತರಬೇಕು ಎನ್ನುವ ದೊಡ್ಡ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ..
ಪರೋಕ್ಷವಾಗಿ, ತಮ್ಮ ಸ್ಥಳೀಯ ನಾಯಕತ್ವ ಬಲವರ್ಧನೆಗೂ ಈ ಸಮಾವೇಶ ವೇದಿಕೆ ಆಗಲಿದೆ.
ಬಿಜೆಪಿ ವಿರುದ್ಧ ನೇರ ಸಮರ.

ಬೆಲೆಯ ಏರಿಕೆ ಮತ್ತು ಬೆಲೆ ನಿರ್ಣಯದಲ್ಲಿ ಕೇಂದ್ರದ ವಿಫಲತೆಯನ್ನು ಪ್ರಸ್ತಾಪಿಸಿ, ಗ್ರಾಮೀಣ ಹಾಗೂ ನಗರ ವರ್ಗದ ಅಸಮಾಧಾನವನ್ನು ರಾಜಕೀಯ ಶಕ್ತಿಯಾಗಿ ರೂಪಿಸುವ ಕಸರತ್ತು ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಬೆಳಗಾವಿಯ ಮಹತ್ವವನ್ನು ಬಿಜೆಪಿ ಸದಾ ತೀವ್ರವಾಗಿ ಅರಿತಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಹಮ್ಮಿಕೊಳ್ಳುತ್ತಿರುವ ಈ ಬೃಹತ್ ಸಮಾವೇಶ, ಎರಡು ಪಕ್ಷಗಳ ನಡುವೆ ಮುಂದಿನ ರಾಜಕೀಯ ಪೈಪೋಟಿಗೆ ಗುರುತಿನ ಕಲ್ಲಾಗಬಹುದು.
ಸಮಾವೇಶದ ಮುಖ್ಯ ಗುರಿಗಳು:

ಜನರ ಆಕ್ರೋಶವನ್ನು ರಾಜಕೀಯ ಶಕ್ತಿ ರೂಪದಲ್ಲಿ ವ್ಯಕ್ತಪಡಿಸುವುದು
ಕೇಂದ್ರ ಸರ್ಕಾರದ ವೈಫಲ್ಯ ಬಿಂಬಿಸುವುದು
ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಹಿತವನ್ನು ಪುನಃ ಸಸ್ಥಾಪಿಸುವುದು
ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬೆಳಗಾವಿಯಲ್ಲಿ ಕಾಂಗ್ರೆಸ್ ನೆಲೆಯೂರುವ ಪ್ರಯತ್ನ ಇದಾಗಿದೆ.
ಸಿಪಿಎಡ್ ಮೈದಾನವನ್ನು ಭರ್ತಿ ಮಾಡುವ ಗುರಿಯೊಂದಿಗೆ ತಾಲ್ಲೂಕು ಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವ ಬೃಹತ್ ಸಂಚಲನ ನಡೆಯುತ್ತಿದೆ.
ನಬೆಳಗಾವಿಯ ಮೇಲಿನ ಹಿಡಿತ ಶಕ್ತಿಶಾಲಿ ಬೆಳವಣಿಗೆಗೆ ಬಲಿಷ್ಠ ಹಿನ್ನಲೆ ಒದಗಿಸಬಹುದು. ಈ ಬೃಹತ್ ಸಮಾವೇಶವನ್ನು ಸಂಘಟಿಸಲು ಸತೀಶ್ ಜಾರಕಿಹೊಳಿ ತೋರಿಸಿರುವ ನಿರ್ಧಾರ ಶಕ್ತಿ ಮತ್ತು ಸಂಘಟನಾ ಸಾಮರ್ಥ್ಯ, ಅವರ ಮುಂದಿನ ರಾಜಕೀಯ ಪಾತ್ರಕ್ಕೆ ಹೊಸ ಚೈತನ್ಯ ತುಂಬುವ ಸಾಧ್ಯತೆಯಿದೆ.
ಇದು ಬೆಳಗಾವಿಯಲ್ಲಿ ಕಾಂಗ್ರೆಸ್ ಭವಿಷ್ಯ ನಿರ್ಧರಿಸುವ ಒಂದು ಪ್ರಮುಖ ಘಟ್ಟವಾಗಲಿದೆ ಎಂಬುದು ಸಾಕಷ್ಟು ವಲಯಗಳಲ್ಲಿ ಸ್ಪಷ್ಟ ಸಂದೇಶ.
: