Headlines

ಶಿವಶಕ್ತಿಯ ಸಂಭ್ರಮದಲ್ಲಿ ಬೆಳಗಾವಿ

ಶಿವಶಕ್ತಿಯ ಸಂಭ್ರಮದಲ್ಲಿ ಬೆಳಗಾವಿ: ಛತ್ರಪತಿಯ ಪಾದಸ್ಪರ್ಶಕ್ಕೆ ನೆರೆದ ಭಕ್ತಿಗಂಗೆಯ ಮೆರವಣಿಗೆ”

ಬೆಳಗಾವಿ:
“ಬೋಲೋ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ!.. ಜೈ ಭವಾನಿ, ಜೈ ಶಿವಾಜಿ!”—ಇಂಥ ಘೋಷಣೆಗಳು ಬೆಳಗಾವಿಯ ಗಗನವೇ ಕಂಪಿಸುವಂತೆ ಮಾಡಿದವು.

ಕರತಾಳಗಳ ಘರ್ಜನೆ, ಡೊಳ್ಳು ತಮಟೆಗಳ ಧ್ವನಿ, ಕೇಸರಿ ಬಾವುಟಗಳ ಹಾರಾಟ… ಇಡೀ ನಗರ ಶಿವಶಕ್ತಿಯ ಅಲೆಗೂಡಿನಲ್ಲಿ ತೇಲುತ್ತಿರುವಂತಾಗಿತ್ತು.

ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯವಿದು.

ನಗರದ ನರಗುಂದಕರ ಭಾವೇ ಚೌಕದಲ್ಲಿ ಭಕ್ತಿ ಭಾವ ತುಂಬಿದ ಛತ್ರಪತಿ ಶಿವಾಜಿಯ ಪಲ್ಲಕಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು. ಹೂವಿನ ಅಲಂಕಾರದಿಂದ ಶೋಭಿತಗೊಂಡಿದ್ದ ಪಲ್ಲಕಿಗೆ ಮಹಾಪೌರ ಮಂಗೇಶ ಪವಾರ್ ಹಾಗೂ ಉಪಮೇಯರ್ ವಾಣಿ ವಿಲಾಸ ಜೋಶಿ ತಮ್ಮ ನಮನ ಅರ್ಪಿಸಿದರು. ರಾಜಸಂಪ್ರದಾಯದಂತೆ ಆರತಿ ಬೆಳಗಿ ಗೌರವ ಸಲ್ಲಿಸಿದರು.

ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಪ್ರಕಾಶ ಮರಗಾಳ, ರೇಣು ಕಿಲ್ಲೇಕರ, ಸರಿತಾ ಪಾಟೀಲ, ವಿಕಾಸ ಕಲಘಟಗಿ ಮತ್ತು ಪೊಲೀಸ್ ಆಯುಕ್ತ ಈಡಾ ಮಾರ್ಟಿನ್ ಮೊದಲಾದವರು ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ ದರು.

ಶಿವರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದ ಛತ್ರಪತಿಯ ಜೀವನದ ಮೌಲ್ಯಗಳು ಈ ಮೆರವಣಿಗೆಯಲ್ಲಿ ಪ್ರತಿಧ್ವನಿಸಿದವು.

ಶಿವಜಯಂತಿಯ ಆಚರಣೆ ಬೆಳಗಾವಿಯಲ್ಲಿ ವೈಚಾರಿಕ ಏಕತೆ, ಧರ್ಮಸಹಿಷ್ಣುತೆ, ಮತ್ತು ಶಕ್ತಿಯ ಸಂಕೇತವಾಗಿ ಮತ್ತೊಮ್ಮೆ ಪ್ರಜ್ಞಾವಂತರನ್ನು ರಂಜಿಸಿತು. ಛತ್ರಪತಿಯ ಆದರ್ಶಗಳನ್ನು ಜೀವಂತಗೊಳಿಸಿ ಯುವಪೀಳಿಗೆಗೆ ಪ್ರೇರಣೆಯಾಗುವಂತೊಂದು ಅಪೂರ್ವ ಕ್ಷಣವನ್ನು ನಗರ ಕಂಡಿತು.

Leave a Reply

Your email address will not be published. Required fields are marked *

error: Content is protected !!