ಬೆಳಗಾವಿ. ಸುಧಾರಣೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅಪಖ್ಯಾತಿಗೆ ಗುರಿಯಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ಮತ್ತೇ ಮೊದಲಿನ ಶ್ರೀಮಂತಿಕೆಯನ್ನು ಮರಳಿ ಪಡೆಯುತ್ತಿದೆ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ತೆರಿಗೆ ವಸೂಲಾತಿಯಲ್ಲಿ ಇಟ್ಟ ಹೆಜ್ಜೆ ಹಿಂದಿಡದ ದಿಟ್ಟ ನಿರ್ಧಾರಗಳು… ಈ ಎಲ್ಲಕ್ಕೂ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಎರಡೆರಡು ಬಾರಿ ಸೂಪರ್ ಸೀಡ್ ಸಂಕಷ್ಟದಿಂದ ಪಾರಾದ ಮಹಾನಗರ ಪಾಲಿಕೆ ಈಗ ರಾಜ್ಯದ ಮಹಾನಗರ ಪಾಲಿಕೆಗಳಿಗಿಂತ ಬೆಳಗಾವಿ ಮಾದರಿ ಎನ್ನುವಷ್ಟರ ಮಟ್ಟಿಗೆ ಈಗ ಆಡಳಿತ ಸರಿದಾರಿಗೆ ಬರುತ್ತಿದೆ.
ಅಚ್ಚರಿ ಸಂಗತಿ ಎಂದರೆ, ಆಯುಕ್ತೆ ಶುಭ ಅವರ ಆಡಳಿತ ಸುಧಾರಣೆಗೆ ಮೇಯರ್ ಉಪಮೇಯರ್ ಅಷ್ಟೇ ಅಲ್ಲ ಆಡಳಿತ ಮತ್ತು ವಿರೋಧ ಪಕ್ಷದವರೂ ಸಹ ಸಹಕಾರ ಕೊಡುತ್ತಿದ್ದಾರೆ, ಇದರ ಜೊತೆಗೆ ಶಾಸಕರೂ ಪಾಲಿಕೆ ಪ್ರಗತಿಯಲ್ಲಿ ಆಗುತ್ತಿರುವ ಬೆಳವಣಿಗೆಗೆ ಫುಲ್ ಖುಷ್ ಸಹ ಆಗಿದ್ದಾರೆ.
ವಿಶೇಷವಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಹಣಕಾಸಿನ ಸಂಕಷ್ಟದ ಪರಿಹಾರದ ದಾರಿ ಹುಡುಕುತ್ತಿರುವಾಗ ಒಬ್ಬ ಪ್ರಾಮಾಣಿಕ ಆಯುಕ್ತರ ದಿಟ್ಟ ನಿರ್ಧಾರಗಳು ಮಹಾನಗರ ಪಾಲಿಕೆಗೆ ಉಸಿರಾಡುವಂತಹ ಆರ್ಥಿಕ ಶಕ್ತಿ ನೀಡಬಹುದು ಎಂಬುದಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಏಪ್ರಿಲ್ ತಿಂಗಳ ತೆರಿಗೆ ಸಂಗ್ರಹಣೆಯ ಯಶೋಗಾಥೆ ಸ್ಪಷ್ಟ ಉತ್ತರವಾಗಿದೆ.
2025ರ ಏಪ್ರಿಲ್ ತಿಂಗಳಲ್ಲಿ ಬೆಳಗಾವಿ ಪಾಲಿಕೆ ಬರೊಬ್ಬರಿ 30,78,92,199 ಆಸ್ತಿ ತೆರಿಗೆ ಸಂಗ್ರಹಿಸಿದ್ದು ಇತ್ತೀಚಿನ ವರ್ಷಗಳಲ್ಲೇ ಅಪರೂಪದ ದಾಖಲೆಯಾಗಿದೆ ಎನ್ನಬಹುದು..
ಪಾಲಿಕೆಯಲ್ಲಿ ಆಡಳಿತಾತ್ಮಕ ನಿಧರ್ಾರಗಳು ವಿಳಂಬವಾಗುತ್ತಿರುವಾಗ, ಆಯುಕ್ತರು ವ್ಯವಹಾರ ಪ್ರವೃತ್ತಿಯಿಂದಲೇ ಬದಲಾವಣೆಗೆ ಮುನ್ನಡೆದರು. ತೆರಿಗೆ ವಸೂಲಿ ಅಭಯಾನದಿಂದ ಹಿಡಿದು, ಬಾಕಿದಾರರಿಗೆ ನೋಟೀಸ್, ಸಿಬ್ಬಂದಿಗೆ ಗುರಿ ನಿಧರ್ಾರ ಎಲ್ಲವನ್ನೂ ಅಚ್ಚುಕಟ್ಟಾಗಿ ಮತ್ತು ಖಡಕ್ಆಗಿ ಮಾಡಿದ್ದು ಈ ಪ್ರಗತಿಗೆ ಕಾರಣ.
ಎಪ್ರಿಲ್ ತಿಂಗಳಲ್ಲಿನ ಸಂಗ್ರಹ: ಮಾಸದ ಗರಿಷ್ಠ ಸಂಗ್ರಹದ ದಿನ: ಏಪ್ರಿಲ್ 29 – 26 ಕೋಟಿ 68 ಕೋಟಿ ಅತೀ ಕಡಿಮೆ ಸಂಗ್ರಹದ ದಿನ: ಏಪ್ರಿಲ್ 13 – 16 ಕೋಟಿ 97 ಲಕ್ಷ ಆಕ್ಸಿಸ್ ಬ್ಯಾಂಕ್ ಮುಖಾಂತರ: 21.03 ಕೋಟಿ ಎಚ್ಡಿಎಫ್ಸಿ ಬ್ಯಾಂಕ್ ಮುಖಾಂತರ: 8.86 ಕೋಟಿ
ಒಟ್ಟಾರೆ ತಿಂಗಳ 30 ದಿನಗಳಲ್ಲಿ ಆಯುಕ್ತರು ನಿರ್ಧರಿಸಿದ ಗುರಿಯನ್ನು ಮೀರಿ ಸಾಧನೆ ಮಾಡಿದಂತಾಗಿದೆ.
ಇದು ಇ ಬೆಳಗಾವಿ ಎಫೆಕ್ಟ್..! ಡಿಜಿಟಲ್ ಮಿಡಿಯಾದಲ್ಲಿ ತನ್ನದೇ ಆದ ಘನತೆ ಗೌರವವನ್ನು ಇಟ್ಟುಕೊಂಡು ಮುನ್ನುಗ್ಗುತ್ತಿರುವ ಇ ಬೆಳಗಾವಿಗೆ ಮತ್ತೊಂದು ಕಿರೀಟ್ ಬಂದಿದೆ,. ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯವರು ಉದ್ಯಮಬಾಗ ಪರಿಸರದಲ್ಲಿರುವ ಹೆಸರಾಂತ ಕಂಪನಿಯಿಂದ ತೆರಿಗೆ ವಸೂಲಾತಿಯಲ್ಲಿ ಭಾರೀ ಲೋಪ ಮಾಡಿದ್ದಾರೆ ಎನ್ನುವ ವರದಿಯನ್ನು ಇ ಬೆಳಗಾವಿ ಪ್ರಕಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತೆ ಶುಭ ಬಿ ಅವರು ಕಂದಾಯ ಶಾಖೆಯ ನಾಲ್ವರಿಗೆ ನೋಟಿಸ್ ಕೊಟ್ಟರು, ಅಷ್ಟೇ ಅಲ್ಲ ಆ ಕಂಪನಿಯ ದಾಖಲಾತಿ ಮತ್ತು ತೆರಿಗೆ ಬಾಕಿ ಕುರಿತು ಹಲವು ಬಾರಿ ವಿಚಾರಣೆ ನಡೆಸಿ ಆ ಕಂಪನಿಗೆ ಒಟ್ಟು 7,08,66,578 ರೂ ಭರಣ ಮಾಡಬೇಕು ಎಂದು ಆದೇಶ ಮಾಡಿದ್ದಾರೆ. ಇದು ಆಯುಕ್ತರ ದಿಟ್ಟ ಹೆಜ್ಜೆ ಎಂದು ಹೇಳಬಹುದು.