ಪಾಲಿಕೆಯಲ್ಲಿ ಭ್ರಷ್ಟರನ್ನು ಯಾರು ಸಪೋರ್ಟ್ ಮಾಡಿದ್ರು ಗೊತ್ತಾ?

ಇ ಬೆಳಗಾವಿ ವಿಶೇಷ..

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೀವ್ರ ಶುದ್ಧೀಕರಣದ ಅವಶ್ಯಕತೆಯಲ್ಲಿದೆ. ವೇಗಾ ತೆರಿಗೆ ವಂಚನೆ ಪ್ರಕರಣವು ಕೇವಲ ಒಂದು ಕಂಪನಿಯ ಕುರಿತು ಮಾತ್ರವಲ್ಲ, ಇದು ಸಮಗ್ರ ಆಡಳಿತ ಕ್ರಮ, ಅಧಿಕಾರದ ಜವಾಬ್ದಾರಿ ಮತ್ತು ನೈತಿಕ ರಾಜಕೀಯದ ಪ್ರತಿಬಿಂಬ.

ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ ನಡೆದದ್ದು ಸದೃಢ ಜನತಂತ್ರದ ಲಕ್ಷಣ. ಆದರೆ ಅಲ್ಲಿ ಕೇಳಿದ ಪ್ರಶ್ನೆಗಳು ಕೇವಲ ಸಭೆಗಷ್ಟೇ ಸೀಮಿತವಾಗದಂತೆ ನೋಡಿಕೊಳ್ಳುವುದು ಅಗತ್ಯ. ಕಾರ್ಯರೂಪದಲ್ಲಿ ಬದಲಾವಣೆಗಳು ಕಂಡುಬರಬೇಕು. ಇಲ್ಲದಿದ್ದರೆ ಇದು ಇನ್ನೊಂದು ‘ಹೆಲ್ಮೆಟ್ ಗೀಟು’ ಆಗಿ ಸಮಾಪ್ತಿ ಹೊಂದಬಹುದು!


**ಅಧಿಕಾರದ ಹೆಸರಲ್ಲಿ ಭ್ರಷ್ಟಾಚಾರಕ್ಕೆ ಲಾಲಿಪಾಪ್ ಬೇಡ!

ವೇಗಾ ತೆರಿಗೆ ಮೇಘಾ ವಂಚನೆ : ಸಾರ್ವಜನಿಕರ ನಂಬಿಕೆ ಕಳೆದುಕೊಂಡ ಪಾಲಿಕೆಯ ಕಂದಾಯ ಶಾಖೆ*

ಬೆಳಗಾವಿ ಮಹಾನಗರ ಪಾಲಿಕೆಯ ಶನಿವಾರ ನಡರದ ಸಾಮಾನ್ಯ ಸಭೆಯ ಬೆಳವಣಿಗೆಗಳು, ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. .

ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಸಭೆಯ ನಡಾವಳಿಯನ್ನು ಗಮನಿಸಿದರೆ ಆಡಳಿತಾರೂಢ ಬಿಜೆಪಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಮುಂದಾಗಿದ್ದರೆ ವಿರೋಧಿ ಸ್ಥಾನದಲ್ಲಿದ್ದ ಕಾಂಗ್ರೆಸ್ ಶಾಸಕರು ಅದಕ್ಜೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.

ಅಂದರೆ ಕಾಂಗ್ರೆಸ್ ಶಾಸಕರು ಭ್ರಷ್ಟರ ಬೆನ್ನಿಗೆ ನಿಂತರಾ ಎನ್ನುವ ಚರ್ಚೆ ಕೂಡ ಎಲ್ಲೆಡೆ ನಡೆದಿದೆ

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮುಖ್ಯವಾಗಿ ವೆಗಾ ಹೆಲ್ಮೆಟ್ ಕಂಪನಿಯು ತೆರಿಗೆ ವಂಚನೆ, ಸಿಂಗಲ್ ಲೇಔಟದಲ್ಲಿ 14 ಪಿಐಡಿ‌ ಸೃಜನೆ ಮಾಡಿದ್ದು, ಇ ಖಾತಾದಲ್ಲಿ ಏಜೆಂಟರ ಹಾವಳಿ ಮತ್ತು ದಾಖಲೆ ಕಳ್ಳತನ ವಿಷಯಗಳು ಜೋರಾಗಿ ಸದ್ದು ಮಾಡಿದವು.

ಗಮನಿಸಬೇಕಾದ ಸಂಗತಿ ಎಂದರೆ, ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಲೋಪದೋಷವನ್ನು ಕಾಂಗ್ರೆಸ್ ನವರು ಎತ್ತಿ ತೋರಿಸುವ ಕೆಲಸ ಮಾಡಬೇಕಿತ್ತು. ಆದರೆ ಎಲ್ಲವೂ ಉಲ್ಟಾ ಆಗುತ್ತಿದೆ. ಕಾಂಗ್ರೆಸ್ನ ಶಾಸಕರೇ ಭ್ರಷ್ಟರನ್ನು ರಕ್ಷಿಸುವ ಕೆಲಸ ನಡೆದಿದ್ದು ಈಗ ಚರ್ಚೆಗೆ ಕಾರಣವಾಗುತ್ತಿದೆ.

ಈಗ ಆಯುಕ್ತೆ ಶುಭ ಬಿ ಅವರು ಒಂದಲ್ಲ ನಾಲ್ಕು ಸಲ ತಮ್ಮ ಕೋರ್ಟ್ ನಲ್ಲಿ‌ ಸಮಗ್ರವಾಗಿ ವಿಚಾರಣೆ ನಡೆಸಿ ಬರೊಬ್ಬರಿ ಏಳು ಕೋಟಿ ರೂಪಾಯಿಯಷ್ಟು ಪಾಲಿಕೆಗೆ ಭರ್ತಿ ಮಾಡಬೇಕು ಎಂದು ವೇಗಾ ಕಂಪನಿಗೆ ನೋಟೀಸ್ ಕೊಟ್ಡು ಬಿಗ್ ಶಾಕ್ ನೀಡಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳ ಲೋಪ, all in full public view. ಎಲ್ಲವೂ ಇಂದು ಬಟಾಬಯಲಾಗಿದೆ.

ಅದಕ್ಕೂ ತೀವ್ರವಾಗಿ ಆಘಾತವನ್ನುಂಟುಮಾಡಿದದ್ದು, ಈ ವಂಚನೆ ವಿರುದ್ಧ ತನಿಖೆ ನಡೆಯಬೇಕೆಂದು ಸದಸ್ಯರು ಒತ್ತಾಯಿಸಿದಾಗ, ಕೆಲ ಶಾಸಕರು ಅದಕ್ಕೆ ತಡೆಯಾಗಲು ಪ್ರಯತ್ನಿಸಿದ ಹಿನ್ನಲೆ. ಇದು ಅಧಿಕಾರಿಗಳ ಭ್ರಷ್ಟಾಚಾರಕ್ಕಿಂತಲೂ ಭಯಾನಕ — ಪ್ರಜಾಪ್ರಭುತ್ವದ ಭದ್ರತೆಯೇ ಪ್ರಶ್ನೆಗೆ ಒಳಗಾಗುತ್ತದೆ.

ಲೋಪ ಮಾಡಿದ ಅಧಿಕಾರಿಗೆ ಲಾಲಿಪಾಪ್ ಕೊಡಬೇಕೆ?

ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಪ್ರಕರಣದಲ್ಲಿ ಅವರ ಪಾತ್ರ, ಬಹುಪಾಲು ಮಾಧ್ಯಮ ವರದಿಗಳ ಹೊರತಾಗಿಯೂ ಕ್ರಮ ಕೈಗೊಳ್ಳದ ನಿರ್ಲಜ್ಜತೆ, ಹಾಗೇ ಬಗ್ಗಿಕೊಂಡು ಖಾಸಗಿ ಕಂಪನಿಗೆ ಅನುಕೂಲವಾಗುವ ರೀತಿಯಲ್ಲಿ ವರ್ತಿಸಿದ ಛಾಯೆಗಳು—all are alarming. ಇದು ಅಸಹ್ಯಕರ. ಅಂದರೆ ಉಂಡ ಮನೆಗೆ ದ್ರೋಹ ಬಗೆದಂತೆ.

ಸಭೆಯಲ್ಲಿ ಶಾಸಕರು ಕೇಳಿದ ಪ್ರಶ್ನೆ — “ಇಂತಹ ವಂಚನೆಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಯಾಕೆ ಮುಜುಗರ?” — ಅಭಯ ಪಾಟೀಲ.

ಪತ್ರಕರ್ತರ ಆತ್ಮನಿಷ್ಠೆ: ಖಜಾನೆಗೆ ಜೀವದಾನ

ಇ ಬೆಳಗಾವಿ ಸೇರಿದಂತೆ ಹಲವು ಮಾಧ್ಯಮಗಳು ಈ ಪ್ರಕರಣವನ್ನು ಪ್ರಕಟಿಸಿ , ಜನಪ್ರತಿನಿಧಿಗಳ ಗಮನ ಸೆಳೆದದ್ದೇ ಇವತ್ತಿನ ಎಲ್ಲ‌ ಬೆಳವಣಿಗೆಗೆ ಕಾರಣ.

ಪಾಲಿಕೆ ಸಭೆಯ ಗಂಭೀರ ಶಿಫಾರಸು: ಪಾಲನೆಯ ಕಡೆಗೆ ಮೊದಲ ಹೆಜ್ಜೆ

ಮೇಯರ್ ಮಂಗೇಶ್ ಪವಾರ್ ಅವರು ಸಭೆಯಲ್ಲಿ ನೀಡಿದ ರೂಲಿಂಗ್ ನೀಡಿದ ತಕ್ಷಣ

ಹೆಚ್ಚುವರಿ ತೆರಿಗೆ ಬಾಕಿ ಪಾವತಿಗೆ ಆದೇಶ, ಹೋಲ್ಡಿಂಗ್ ಗುತ್ತಿಗೆದಾರನ ವಿರುದ್ಧ ಕಪ್ಪುಪಟ್ಟಿ ಕ್ರಮ, ಹಾಗೂ ನಿರ್ಲಕ್ಷ್ಯವಿರುವ ಅಧಿಕಾರಿಗಳ ವಿರುದ್ಧ ಕ್ರಮದ ಸೂಚನೆ—all point to a corrective start. ಆದರೆ ಈ ಕ್ರಮಗಳು ಪೂರ್ತಿಯಾಗಬೇಕಾದದ್ದು, ಕೇವಲ ತೋರಿಕೆಗೆ ಆಗಬಾರದು.


Leave a Reply

Your email address will not be published. Required fields are marked *

error: Content is protected !!