Headlines

“ಅಸ್ತು” ಸಾಕಾಗಲ್ಲ.. ಲೋಕಾಗೆ ಪತ್ರ ಬೇಕು

ತಪ್ಪು ಮಾಡಿದ ಅಧಿಕಾರಿಗಳ ಹೆಸರುಗಳೊಂದಿಗೆ ಅಧಿಕೃತ ಪತ್ರ ಯಾವಾಗ?

ಲೋಕಾಯುಕ್ತ ತನಿಖೆಗೆ ಬೇಕಾದ ದಾಖಲೆಗಳ ಸಂಗ್ರಹಣೆ ಯಾವಾಗ?

ಸಭೆಯ ತೀರ್ಮಾನಗಳು ಅನುಷ್ಠಾನಕ್ಜೆ ಬರೋದು ಯಾವಾಗ?

ಪಾಲಿಕೆ ಕೌನ್ಸಿಲ್ ನಿರ್ಣಯ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಆಯುಕ್ತರು ಗಮನ ಹರಿಸಬೇಕಿದೆ.

ತೀರ್ಮಾನಕ್ಕಿಂತ ಅಧಿಸೂಚನೆ ಹೆಚ್ಚು ಮಹತ್ವಪೂರ್ಣ – ವೇಗಾ ತೆರಿಗೆ ವಂಚನೆ ಪ್ರಕರಣದ 5 ಅಂಶಗಳು!”

ವೇಗಾ ಕಂಪನಿಗೆ 7 ಕೋಟಿ ರೂಪಾಯಿ ತೆರಿಗೆ ಬಾಕಿ;

ಇದು ಬೆಳಗಾವಿ ಮಹಾನಗರ ಪಾಲಿಕೆಯ ಇತ್ತೀಚಿನ ಗಂಭೀರ ಪ್ರಕರಣ.. ಈ ಪ್ರಕರಣದ ಹೊರತಾಗಿ, ಪಾಲಿಕೆಯಲ್ಲಿ ನಡೆಯುತ್ತಿರುವ ನಿರ್ಧಾರಗಳು ಅಧಿಕಾರಿಗಳಿಗೆ ಇಂತಹ ಕ್ರಮಗಳು ಎಚ್ಚರಿಕೆ ಸಂದೇಶವಾಗಬೇಕು.

. ಇದು ಕೇವಲ ಸಭೆಯಲ್ಲಿ ಸ್ವೀಕರಿಸಿದ ತೀರ್ಮಾನವಲ್ಲ, ಇದಕ್ಕೆ ಸರಿಯಾದ ಕ್ರಮ ಮತ್ತು ಅಗತ್ಯ ದಾಖಲೆಗಳೊಂದಿಗೆ ಭದ್ರತಾ ಸಹಕಾರ ನೀಡಬೇಕಾದ ಅನಿವಾರ್ಯತೆ .ಈ‌ಆದೇಶವು ಹೆಚ್ಚು ಮಹತ್ವ ಪೂರ್ಣವಾಗಿದೆ.


7 ಕೋಟಿ ರೂಪಾಯಿ ತೆರಿಗೆ ಬಾಕಿ – ದಾರಿ ತಪ್ಪಿದ ಅಧಿಕಾರಿಗಳು..

ಲೋಕಾಯುಕ್ತ ತನಿಖೆಗೆ ತೀರ್ಮಾನ – ಆದರೆ ಮುಂದಿನ ಹಂತ ಏನು?* .

ಕಂದಾಯ ಶಾಖೆ ಅಷ್ಟೇ ಅಲ್ಲ ಎಲ್ಲವನ್ನೂ ಲೋಕಾ ಜಾಲಾಡಲಿ

ಬೆಳಗಾವಿ

ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಿಗಳ ಬೆವರಿಳಿಸುವಂತಹ ಗಂಭೀರ ಅಧಿವೇಶನ ನಡೆದಿದೆ. ನೂರಾರು ಕೋಟಿ ತೆರಿಗೆ ವಂಚನೆಯ ಪಟಾಲವನ್ನು ಉದುರಿಸಲು ಆಡಳಿತ ಗುಂಪಿನ ನಗರಸೇವಕರೇ ಮುಂದೆ ಬಂದು ದಾಖಲೆಗಳೊಂದಿಗೆ ಅಧಿಕಾರಿಗಳ ಪೆಚ್ಚುಮೋರೆ ತೆಗೆಯುವ ಕೆಲಸ ಮಾಡಿದ್ದಾರೆ.

ಸಭೆಯಲ್ಲಿ ಮಹತ್ವದ ತೀರ್ಮಾನವೊಂದು ಅಂದರೆ – ವೇಗಾ ಕಂಪನಿ ಸಂಬಂಧಿ 7 ಕೋಟಿ ರೂ. ತೆರಿಗೆ ವಂಚನೆ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವ ನಿರ್ಧಾರ. ಮೇಯರ್ ಮಂಗೇಶ ಪವಾರ್ ಈ ತೀರ್ಮಾನಕ್ಕೆ ‘ಅಸ್ತು’ ಎಂದರು. ಆದರೆ ಅದು ಕೇವಲ ಭಾಷಣದ ಮಟ್ಟದಲ್ಲೇ ಉಳಿದರೆ, ಜನತೆಯ ನಂಬಿಕೆಗೆ ತಿರುಗುಬಾಣವಾಗಬಹುದು.

ಅಸ್ತು” ಸಾಕಾಗಲ್ಲ, “ಲೋಕಾ ಗೆ ಪತ್ರ” ಬೇಕು!

ಸಭೆಯಲ್ಲಿ ತೀರ್ಮಾನಗೊಂಡ ತನಿಖೆಗೆ ಕಾರ್ಯರೂಪ ಬರಬೇಕಾದರೆ, ಈಗ ಮಹಾನಗರ ಪಾಲಿಕೆಯಿಂದ ಲೋಕಾಯುಕ್ತರಿಗೆ ದಾಖಲೆ ಸಮೇತ ಅಧಿಕೃತ ಪತ್ರ ಕಳುಹಿಸುವ ಕೆಲಸ ತಕ್ಷಣವೇ ಆಗಬೇಕಾಗಿದೆ. ಈ ಪತ್ರದಲ್ಲಿ ತಪ್ಪು ಮಾಡಿದ ಅಧಿಕಾರಿಗಳ ಹೆಸರುಗಳು ಸ್ಪಷ್ಟವಾಗಿ ಉಲ್ಲೇಖವಾಗಬೇಕು. ಇದಲ್ಲದೆ, ತೆರಿಗೆ ಶಾಖೆಯ ದಾಖಲೆಗಳು ಹಾಗೂ ಕಂಪನಿಗೆ ನೀಡಲಾದ ನೋಟಿಸು, ಆದೇಶಗಳ ಪ್ರತಿಗಳು ಸಹ ಲಗತ್ತಿಸುವುದು ಅತಿ ಅವಶ್ಯ.
ಅದು ಆಗದಿದ್ದರೆ ಏನಾಗುತ್ತದೆ?

ಸಭೆಯಲ್ಲಿ ನಡೆದ ತೀರ್ಮಾನ “ಕಾಗದದ ಹುಲಿ”ಯಾಗುತ್ತದೆ. ಅಧಿಕಾರಿಗಳಿಗೆ ಇದು “ಏನೂ ಆಗಲ್ಲ” ಎಂಬ ಧೈರ್ಯ ನೀಡುತ್ತದೆ. ಮತ್ತು ಸಾರ್ವಜನಿಕರಲ್ಲಿ ಪಾಲಿಕೆ ಆಡಳಿತದ ಮೇಲಾಗಿರುವ ನಂಬಿಕೆ ಭಂಗವಾಗುತ್ತದೆ.

ಇದು ದಿಕ್ಕು ತಪ್ಪಿಸುವ ಆಡಳಿತದ ಅಂತ್ಯವಾಗಬೇಕಾದ ಕ್ಷಣ!”
ಹಳೆಯ ಕಾಲದಲ್ಲಿ, ನಗರಸೇವಕರು ಯಾವುದೇ ಪ್ರಶ್ನೆ ಕೇಳಿದರೂ ಅಧಿಕಾರಿಗಳು “ಅದು ಇನ್ನೊಂದು ಇಲಾಖೆಯ ಅಧೀನ”, “ಮಾಹಿತಿ ಇಲ್ಲ” ಎಂದು ನಿಟ್ಟುಸಿರು ಬಿಟ್ಟರೆ ಸಾಕು. ಅನಂತರ ಎಲ್ಲವೂ ಮರೆತು ಹೋಗುತ್ತಿತ್ತು. ಆದರೆ ಇತ್ತೀಚಿನ ಸಭೆಯಲ್ಲಿ ಚಿತ್ರಣ ಸಂಪೂರ್ಣ ಬದಲಾಗಿದೆ.

ಅಧಿಕಾರಿಗಳೇ ಸಹಿ ಹಾಕಿದ ಕಡತಗಳ ಪ್ರತಿಗಳೊಂದಿಗೆ ಸಭೆಯಲ್ಲಿ ಸಿಡಿಲಾಗಿ ನಿಂತು, ಪ್ರಶ್ನೆಗಳಿಂದ ತೀವ್ರ ಹಕ್ಕಿಗೆ ಒಡ್ಡಿದ ಕ್ಷಣ – ಇದು ಕೇವಲ ಸ್ಥಿರ ಸಮಿತಿ ಸಭೆಯ ದೃಶ್ಯವಲ್ಲ, ಅದು ಶಾಸನಾತ್ಮಕ ಜವಾಬ್ದಾರಿಯ ಉದಾಹರಣೆ.

ಅಧಿಕಾರಿಗಳ ಪೆಚ್ಚು ಮೊರೆ!”
ಈಗ ಸಾಮಾನ್ಯ ಸಭೆಗಳೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ವೇದಿಕೆಯಾಗಿವೆ. ಈಗ ಅಧಿಕಾರಿಗಳು ಬೇರೆ ಊಹೆಗೂ ಬಾರದ ಪ್ರಶ್ನೆಗಳಿಗೆ ಶುದ್ದ ಉತ್ತರ ಕೊಡಬೇಕಾಗಿರುವ ಸ್ಥಿತಿ ಬಂದಿದೆ. ಸಣ್ಣ ತಪ್ಪಿಗೂ ಲೆಕ್ಕ ಕೇಳುವ ಧಾಟಿಯಲ್ಲಿ ನಗರಸೇವಕರು ಚಾಣಾಕ್ಷರಾಗಿದ್ದಾರೆ.

ಇದು ಆಡಳಿತ ಶುದ್ಧೀಕರಣದ ಆರಂಭ.

ಸಭೆಯಲ್ಲಿ ತೀರ್ಮಾನವಾದಂತೆಯೇ ಕ್ರಮಕ್ಕೆ ಹೋದರೆ ಮಾತ್ರ ಜನರು ಪಾಲಿಕೆಯ ಮೇಲೆ ಮತ್ತೆ ನಂಬಿಕೆ ಇಡುತ್ತಾರೆ. ಇಲ್ಲವಾದರೆ – ‘ಪಾಲಿಕೆ ಸಭೆ’ ಎಂಬುದು ಕೇವಲ ಮಾಯಾಜಾಲ ಎನ್ನುವುದನ್ನು ಜನರೇ ತೀರ್ಮಾನಿಸೋದು ಖಚಿತ.

ಆ ಹೊಣೆ ಇವರ‌ ಮೇಲಿದೆ

ಲೋಕಾಯುಕ್ತ ತನಿಖೆಗೆ ಪೂರಕವಾದ ಅಧಿಸೂಚನೆ ಯಾವಾಗ ಹೋಗುತ್ತದೆ?” ಎಂಬ ಜನಸಾಮಾನ್ಯರ ಪ್ರಶ್ನೆಗೆ ಉತ್ತರ ಈಗ ಪಾಲಿಕೆಯ ಮಟ್ಟದ ನಾಯಕರಿಂದ ಬರಬೇಕು. ಮೇಯರ್, ಉಪಮೇಯರ್ ಮತ್ತು ಆಡಳಿತ ಪಕ್ಷದ ನಾಯಕರು ಈ ತೀರ್ಮಾನವನ್ನು ಕೇವಲ ಗಂಭೀರ ಸಭೆಯ ಘೋಷಣೆಯಾಗಿ ಬಿಡದೇ, ನೈಜ ಕ್ರಿಯಾಶೀಲತೆಯ ಮಟ್ಟಕ್ಕೆ ಕರೆದೊಯ್ಯುವ ಹೊಣೆ ಹೊರುವ ಸಮಯ ಬಂದಿದೆ. ಕಾದು ನೋಡೋಣ

Leave a Reply

Your email address will not be published. Required fields are marked *

error: Content is protected !!